ನವ​ದೆ​ಹ​ಲಿ[ನ.15]: ಪಾಕಿ​ಸ್ತಾನ ವಿರುದ್ಧ ನ.29, 30ರಂದು ನಡೆ​ಯ​ಲಿ​ರುವ ಡೇವಿಸ್‌ ಕಪ್‌ ಏಷ್ಯಾ-ಓಷಿ​ಯಾ​ನಿಯಾ ಹಂತ​ದ ಪಂದ್ಯಕ್ಕೆ ಗುರು​ವಾರ ಭಾರತ ಟೆನಿಸ್‌ ತಂಡ ಪ್ರಕಟಗೊಂಡಿತು. 

ಡೇವಿಸ್ ಕಪ್: ರೋಹಿತ್ ಅಲ್ಲ ಈಗಲೂ ನಾನೇ ನಾಯಕ ಎಂದ ಭೂಪತಿ

ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎ​ಐ​ಟಿಎ) ಮಹೇಶ್‌ ಭೂಪ​ತಿ​ಯನ್ನು ಆಡದ ನಾಯ​ಕನ ಸ್ಥಾನಕ್ಕೆ ಪರಿ​ಗ​ಣಿ​ಸ​ಲಾ​ಗಿಲ್ಲ. ಆಯ್ಕೆಗಾರ ರೋಹಿತ್‌ ರಾಜ್‌ಪಾಲ್‌ ತಂಡದ ನಾಯ​ಕ​ರಾ​ಗಿದ್ದು, ಹಿರಿಯ ಆಟ​ಗಾ​ರ​ರಾದ ಲಿಯಾಂಡರ್‌ ಪೇಸ್‌ ಹಾಗೂ ರೋಹನ್‌ ಬೋಪ​ಣ್ಣಗೆ ಸ್ಥಾನ ಸಿಕ್ಕಿದೆ. ಜೀವನ್‌ ನೆಡು​ಚೆ​ಳಿ​ಯನ್‌ ಸ್ಥಾನ ಪಡೆ​ದಿದ್ದು, ಇದೇ ಮೊದಲ ಬಾರಿಗೆ ಭಾರ​ತ ತಂಡ​ದಲ್ಲಿ ಮೂವರು ಡಬಲ್ಸ್‌ ತಜ್ಞರು ಇದ್ದಾರೆ. 

ಟೆನಿಸ್ ರ‍್ಯಾಂಕಿಂಗ್‌: ಅಗ್ರ 100ರ ಪಟ್ಟಿ ಲಿಯಾಂಡರ್ ಪೇಸ್ ಔಟ್

ಸಿಂಗಲ್ಸ್‌ ಆಟ​ಗಾ​ರ​ರಾದ ಸುಮಿತ್‌ ನಗಾಲ್‌, ರಾಮ್‌ಕುಮಾರ್‌ ರಾಮ​ನಾ​ಥನ್‌, ಶಶಿ ಕುಮಾರ್‌ ಮುಕುಂದ್‌, ಸಾಕೇತ್‌ ಮೈನೇನಿ ಹಾಗೂ ಸಿದ್ಧಾರ್ಥ್ ರಾವತ್‌ ತಂಡ​ದಲ್ಲಿ ಸ್ಥಾನ ಗಳಿ​ಸಿ​ದ್ದಾರೆ. ಪಂದ್ಯವನ್ನು ತಟಸ್ಥ ಸ್ಥಳ​ದಲ್ಲಿ ನಡೆ​ಸಲು ಅಂತಾ​ರಾ​ಷ್ಟ್ರೀಯ ಟೆನಿಸ್‌ ಫೆಡ​ರೇ​ಷನ್‌ (ಐ​ಟಿ​ಎಫ್‌) ನಿರ್ಧ​ರಿ​ಸಿದೆ. ಆದರೆ ಪಾಕಿ​ಸ್ತಾನ ಇನ್ನೂ ಸ್ಥಳ ಘೋಷಿ​ಸಿ​ಲ್ಲ.