ಬೆಂಗಳೂರು(ಫೆ.03): ದೇಶದಲ್ಲಿ ಮೊದಲ ಬಾರಿಗೆ ಆಯೋಜಿಸಿರುವ ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟ ಸೋಮವಾರದಿಂದ ಬೆಂಗಳೂರಲ್ಲಿ ನಡೆಯುತ್ತಿದೆ. ಫೆ.3 ರಿಂದ 9 ರವರೆಗೆ ನಡೆಯಲಿರುವ ಕೂಟದಲ್ಲಿ 18 ವಿವಿಧ ಕ್ರೀಡೆಗಳು ನಡೆಯಲಿದ್ದು 3700ಕ್ಕೂ ಹೆಚ್ಚು ಸ್ಪರ್ಧಿಗಳು ಅದೃಷ್ಠ ಪರೀಕ್ಷೆಗೆ ಇಳಿಯಲಿದ್ದಾರೆ. 

ಫೆಬ್ರವರಿ 3ರಿಂದ ಮಿನಿ ಒಲಿಂಪಿಕ್ಸ್‌ ಆರಂಭ

14 ವರ್ಷ ವಯೋಮಿತಿಯ ಸ್ಪರ್ಧಿಗಳು ಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಫುಟ್ಬಾಲ್‌, ಹಾಕಿ, ಜುಡೋ, ನೆಟ್‌ಬಾಲ್‌, ಟೆನಿಸ್‌, ವಾಲಿಬಾಲ್‌ ಸ್ಪರ್ಧೆಗಳು ಸೋಮವಾರದಿಂದ ಆರಂಭವಾದರೆ, ಮಂಗಳವಾರದಿಂದ ಫೆನ್ಸಿಂಗ್‌, ಬಾಕ್ಸಿಂಗ್‌, ಜಿಮ್ನಾಸ್ಟಿಕ್ಸ್‌, ಕಬಡ್ಡಿ ಹಾಗೂ ಈಜು ಸ್ಪರ್ಧೆಗಳು ನಡೆಯಲಿವೆ. 

8ನೇ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದು ದಾಖಲೆ ಬರೆದ ಜೊಕೊವಿಚ್!

ಇನ್ನು ಬುಧವಾರದಿಂದ ಬ್ಯಾಡ್ಮಿಂಟನ್‌, ಖೋಖೋ, ಹಾಗೂ ಗುರುವಾರದಿಂದ ಅಥ್ಲೆಟಿಕ್ಸ್‌, ಟಿಟಿ ಸ್ಪರ್ಧೆಗಳು ನಡೆದರೆ, ಶುಕ್ರವಾರದಿಂದ ಹ್ಯಾಂಡ್‌ಬಾಲ್‌, ಬಾಸ್ಕೆಟ್‌ಬಾಲ್‌ ಹಾಗೂ ಟೆಕ್ವಾಂಡೋ ಸ್ಪರ್ಧೆಗಳು ನಡೆಯಲಿವೆ. ಕಂಠೀರವ ಕ್ರೀಡಾಂಗಣ, ಹಾಕಿ ಸ್ಟೇಡಿಯಂ, ವಿದ್ಯಾನಗರ ಕ್ರೀಡಾ ಸಂಕೀರ್ಣ, ಬಸವನಗುಡಿ ಈಜು ಕೇಂದ್ರ ಸೇರಿದಂತೆ ಇತರೆಡೆ ಸ್ಪರ್ಧೆಗಳು ನಡೆಯಲಿವೆ. ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ.