ಚೀನಾ ಓಪನ್‌ ಬ್ಯಾಡ್ಮಿಂಟನ್‌: ಸೆಮಿಫೈನಲ್‌ಗೆ ಸಾತ್ವಿಕ್‌-ಚಿರಾಗ್‌!

ವಿಶ್ವ ನಂ.3ನೇ ಶ್ರೇಯಾಂಕಿತ ಚೀನಾ ಜೋಡಿಯನ್ನು ಬಗ್ಗುಬಡಿಯುವಲ್ಲಿ ಭಾರತದ ಯುವ ಶಟ್ಲರ್‌ಗಳಾದ ಸಾತ್ವಿಕ್‌ ಸಾಯಿ​ರಾಜ್‌ ಹಾಗೂ ಚಿರಾಗ್‌ ಶೆಟ್ಟಿ ಯಶಸ್ವಿಯಾಗಿದ್ದು, ಅಂತಿಮ ನಾಲ್ಕರಘಟ್ಟ ಪ್ರವೇಶಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

China Open 2019 Satwiksairaj Chirag stun World No. 3 pair to reach Semifinals

ಫುಝೋ (ನ.09): ವಿಶ್ವ ನಂ.3 ಚೀನಾ ಜೋಡಿಯನ್ನು ಮಣಿಸುವ ಮೂಲಕ ಭಾರತದ ಯುವ ಶಟ್ಲರ್‌ಗಳಾದ ಸಾತ್ವಿಕ್‌ ಸಾಯಿ​ರಾಜ್‌ ಹಾಗೂ ಚಿರಾಗ್‌ ಶೆಟ್ಟಿ, ಚೀನಾ ಓಪನ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾ​ಗ​ದಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು. ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸ್ಥಳೀಯ ಆಟ​ಗಾ​ರರಾದ ಲಿ ಜುನ್‌ ಹುಯಿ ಹಾಗೂ ಲಿಯು ಯು ಚೆನ್‌ ವಿರುದ್ಧ 21-19 21-15 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿ​ಸಿ​ದರು. 43 ನಿಮಿಷಗಳ ಕಾಲ ನಡೆದ ಪಂದ್ಯ​ದಲ್ಲಿ ವಿಶ್ವ ನಂ.9 ಸಾತ್ವಿಕ್‌-ಚಿರಾಗ್‌ ಜೋಡಿ ಪ್ರಾಬ​ಲ್ಯ ಮೆರೆ​ಯಿತು.

ಚೀನಾ ಓಪನ್‌: ಮೊದಲ ಸುತ್ತಲ್ಲೇ ಹೊರ​ಬಿದ್ದ ಸೈನಾ!

ಮೊದಲ ಗೇಮ್‌ ಅನ್ನು 21-19ರಲ್ಲಿ ರೋಚ​ಕ​ವಾಗಿ ಗೆದ್ದು​ಕೊಂಡ ಸಾತ್ವಿಕ್‌-ಚಿರಾಗ್‌ ಜೋಡಿ, 2ನೇ ಗೇಮ್‌ನಲ್ಲೂ ಪೈಪೋಟಿ ಎದು​ರಿ​ಸಿತು. 15-15ರಲ್ಲಿ ಎರಡೂ ತಂಡ​ಗಳು ಸಮ​ಬಲ ಸಾಧಿ​ಸಿ​ದ್ದವು. ಆದರೆ ಸತತ 6 ಅಂಕ ಕಲೆಹಾಕಿದ ಭಾರ​ತೀಯ ಜೋಡಿ, ಗೆಲುವಿನ ಕೇಕೆ ಹಾಕಿ ಅಂತಿಮ 4ರ ಸುತ್ತಿಗೆ ಪ್ರವೇ​ಶಿ​ಸಿತು.

ವಿಶ್ವ ನಂ.3, ಚೀನಾ ಜೋಡಿ ವಿರುದ್ಧ ಸಾತ್ವಿಕ್‌-ಚಿರಾಗ್‌ 3ನೇ ಬಾರಿಗೆ ಆಡಿ​ದರು. ಏಪ್ರಿಲ್‌ನಲ್ಲಿ ಥಾಯ್ಲೆಂಡ್‌ ಓಪನ್‌ನಲ್ಲಿ ಜಯಿಸಿದ್ದ ಭಾರತೀಯ ಜೋಡಿ, ಜೂನ್‌ನಲ್ಲಿ ನಡೆದ ಆಸ್ಪ್ರೇ​ಲಿ​ಯನ್‌ ಓಪನ್‌ನಲ್ಲಿ ಸೋಲುಂಡಿತ್ತು.

ಫ್ರೆಂಚ್ ಓಪನ್: ಸಾತ್ವಿಕ್‌-ಚಿರಾಗ್‌ಗೆ ರನ್ನರ್‌ಅಪ್‌ ಪ್ರಶಸ್ತಿ!

ಶನಿ​ವಾರ ನಡೆ​ಯ​ಲಿ​ರುವ ಸೆಮಿ​ಫೈ​ನಲ್‌ ಪಂದ್ಯ​ದಲ್ಲಿ ಸಾತ್ವಿಕ್‌ ಹಾಗೂ ಚಿರಾಗ್‌ಗೆ ವಿಶ್ವ ನಂ.1, ಇಂಡೋ​ನೇ​ಷ್ಯಾದ ಮಾರ್ಕಸ್‌ ಫೆರ್ನಾಲ್ಡಿ ಹಾಗೂ ಕೆವಿನ್‌ ಸಂಜಯ ಸುಕ​ಮುಲ್ಜೊ ವಿರುದ್ಧ ಸೆಣ​ಸ​ಲಿದೆ. ಇದೇ ಜೋಡಿ ವಿರುದ್ಧ ಕಳೆದ ತಿಂಗಳು ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಭಾರ​ತೀ​ಯರು ಸೋಲು ಕಂಡಿ​ದ್ದರು. ಸಾತ್ವಿಕ್‌ ಹಾಗೂ ಚಿರಾಗ್‌ ಈ ವರ್ಷ ಆಗಸ್ಟ್‌ನಲ್ಲಿ ಥಾಯ್ಲೆಂಡ್‌ ಓಪನ್‌ ಗೆಲ್ಲುವ ಮೂಲಕ ಚೊಚ್ಚಲ ಪ್ರಶ​ಸ್ತಿಗೆ ಮುತ್ತಿ​ಟ್ಟಿದ್ದರು. ಕಳೆದ ತಿಂಗಳು ಫ್ರೆಂಚ್‌ ಓಪನ್‌ನಲ್ಲಿ ರನ್ನರ್‌-ಅಪ್‌ ಪ್ರಶ​ಸ್ತಿಗೆ ಭಾಜ​ನ​ರಾಗಿದ್ದರು.
 

Latest Videos
Follow Us:
Download App:
  • android
  • ios