Asianet Suvarna News Asianet Suvarna News

ಫ್ರೆಂಚ್ ಓಪನ್: ಸಾತ್ವಿಕ್‌-ಚಿರಾಗ್‌ಗೆ ರನ್ನರ್‌ಅಪ್‌ ಪ್ರಶಸ್ತಿ!

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಶಟ್ಲರ್‌ಗಳಾದ ಸಾತ್ವಿಕ್ ಹಾಗೂ ಚಿರಾಗ್ ಜೋಡಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ವಿರೋಚಿತ ಸೋಲು ಕಂಡ ಭಾರತದ ಜೋಡಿ ಚಾಂಪಿಯನ್ ಪಟ್ಟ ಮಿಸ್ ಮಾಡಿಕೊಂಡರು.

french open badminton 2019 satwik chirag settle silver after lose final
Author
Bengaluru, First Published Oct 29, 2019, 10:44 AM IST

ಪ್ಯಾರಿಸ್‌ (ಫ್ರಾನ್ಸ್‌): ಭಾರತದ ಯುವ ಶಟ್ಲರ್‌ಗಳಾದ ಸಾತ್ವಿಕ್‌ ಸಾಯಿ​ರಾಜ್‌ ಹಾಗೂ ಚಿರಾಗ್‌ ಶೆಟ್ಟಿಜೋಡಿ ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರು​ಷರ ಡಬಲ್ಸ್‌ನಲ್ಲಿ ರನ್ನರ್‌ಅಪ್‌ ಪ್ರಶಸ್ತಿ ಗೆದ್ದಿದೆ. ಭಾನುವಾರ ಇಲ್ಲಿ ನಡೆದ ಫೈನಲ್‌ನಲ್ಲಿ ವಿಶ್ವ ನಂ.1 ಇಂಡೋನೇಷ್ಯಾ ಜೋಡಿ ಮಾರ್ಕಸ್‌ ಫೆನಾಲ್ಡಿ ಹಾಗೂ ಕೆವಿನ್‌ ಸಂಜಯ ಸುಕ​ಮುಲ್ಜೊ ವಿರುದ್ಧ 18-21, 16-21 ನೇರ ಗೇಮ್‌ಗಳಲ್ಲಿ ಭಾರ​ತೀಯ ಜೋಡಿ ಸೋಲುಂಡಿ​ತು.

ಇದನ್ನೂ ಓದಿ: ಸೈನಾ ವೀಸಾ ಸಮಸ್ಯೆಗೆ ನೆರವಾದ ಗೃಹ ಸಚಿವಾಲಯ

ಇಂಡೋ​ನೇಷ್ಯಾ ಜೋಡಿ ವಿರುದ್ಧ ಈ ಪಂದ್ಯಕ್ಕೂ ಮುನ್ನ 0-6 ಗೆಲುವು ಸೋಲಿನ ದಾಖಲೆ ಹೊಂದಿ​ದ್ದ ಸಾತ್ವಿಕ್‌-ಚಿರಾಗ್‌ ಸತತ 7ನೇ ಸೋಲು ಅನು​ಭ​ವಿ​ಸಿ​ದರು. ಆಗಸ್ಟ್‌ನಲ್ಲಿ ಥಾಯ್ಲೆಂಡ್‌ ಓಪನ್‌ ಗೆಲ್ಲುವ ಮೂಲಕ ಚೊಚ್ಚಲ ಸೂಪರ್‌ 500 ಪ್ರಶಸ್ತಿ ಗೆದ್ದಿದ್ದ ಸಾತ್ವಿಕ್‌-ಚಿರಾಗ್‌, ವಿಶ್ವ​ಕಪ್‌ ಟೂರ್‌ 750 ಟೂರ್ನಿಯ ಪುರು​ಷರ ಡಬಲ್ಸ್‌ನಲ್ಲಿ ಫೈನಲ್‌ ಪ್ರವೇ​ಶಿ​ಸಿದ ಮೊದಲ ಜೋಡಿ ಎನ್ನುವ ಹಿರಿಮೆಗೆ ಪಾತ್ರವಾಯಿತು.

ಇದನ್ನೂ ಓದಿ: ಕೇರಳ ದೇವಸ್ಥಾನಕ್ಕೆ ಭೇಟಿ: ಸಾಂಪ್ರದಾಯಿಕ ಲುಕ್ ನಲ್ಲಿ ಕಂಗೊಳಿಸಿದ ಸಿಂಧು

35 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾರ​ತೀಯ ಜೋಡಿ ಎಂದಿನ ಆತ್ಮ​ವಿ​ಶ್ವಾಸದೊಂದಿಗೆ ಆಡ​ಲಿಲ್ಲ. ಮೊದಲ ಗೇಮ್‌ನಲ್ಲಿ 1-7ರ ಆರಂಭಿಕ ಹಿನ್ನಡೆ ಅನು​ಭ​ವಿ​ಸಿದ ಸಾತ್ವಿಕ್‌ ಹಾಗೂ ಚಿರಾಗ್‌, ಬಳಿಕ ಚೇತ​ರಿ​ಸಿ​ಕೊಂಡು 17-17ರಲ್ಲಿ ಸಮ​ಬಲ ಸಾಧಿ​ಸಿ​ದರು. ಆದರೆ ಇಂಡೋ​ನೇಷ್ಯಾ ಆಟ​ಗಾ​ರರು ಆಕ್ರ​ಮ​ಣ​ಕಾರಿ ಆಟದ ಮೂಲಕ ಗೇಮ್‌ ತಮ್ಮ​ದಾ​ಗಿ​ಸಿ​ಕೊಂಡರು.

2ನೇ ಗೇಮ್‌ನಲ್ಲಿ 6-6ರಲ್ಲಿ ಸಮ​ಬಲ ಸಾಧಿ​ಸಿದ ಭಾರತೀಯ ಜೋಡಿ ಬಳಿಕ 10-10, 12-12ರಲ್ಲಿ ಪೈಪೋಟಿ ನೀಡಿತು. ಆದರೆ ಬಿಡು​ವಿನ ವೇಳೆ ಬಳಿಕ ಇಂಡೋ​ನೇಷ್ಯಾ ಜೋಡಿ ವಿಭಿನ್ನ ರಣ​ತಂತ್ರದೊಂದಿಗೆ ಭಾರ​ತೀ​ಯ​ರನ್ನು ಕಟ್ಟಿಹಾ​ಕಿತು.

Follow Us:
Download App:
  • android
  • ios