ನವದೆಹಲಿ(ಜೂ.11): ದಂಗಲ್ ಖ್ಯಾತಿಯ ಮಿಸ್ಟರ್ ಪರ್ಫೆಕ್ಷನಿಸ್ಟ್‌ ಅಮೀರ್ ಖಾನ್ ಹಾಗೂ ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಇಬ್ಬರು ಚೆಸ್ ಆಡಿದರೆ ಹೇಗಿರಬಹುದು ಅಲ್ವಾ? ಈ ಇಬ್ಬರಲ್ಲಿ ಯಾರ ಕೈ ಮೇಲಾಗಬಹುದು ಎನ್ನುವ ಕುತೂಹಲ ಕೂಡಾ ಸಾಕಷ್ಟಿದೆ. ಇದೀಗ ಇಬ್ಬರು ಸೆಲಿಬ್ರಿಟಿಗಳ ಮುಖಾಮುಖಿಗೆ ಕಾಲ ಕೂಡಿಬಂದಿದೆ.

ಹೌದು, ಬಾಲಿವುಡ್‌ ಪರ್ಫೆಕ್ಷನಿಸ್ಟ್‌ ಖ್ಯಾತಿಯ ನಟ ಅಮೀರ್‌ ಖಾನ್‌, ವಿಶ್ವದ ಶ್ರೇಷ್ಠ ಚೆಸ್‌ಪಟುವಾಗಿರುವ ವಿಶ್ವನಾಥನ್‌ ಆನಂದ್‌ ಅವರ ವಿರುದ್ಧ ಇದೇ ಭಾನುವಾರ ಚೆಸ್‌ ಪಂದ್ಯವನ್ನು ಆಡಲಿದ್ದಾರೆ. 'ಚೆಕ್‌ಮೇಟ್ ಕೋವಿಡ್' ಎನ್ನುವ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜೂನ್‌ 13ರಂದು ನಡೆಯಲಿರುವ ಚೆಸ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಕೋವಿಡ್‌ ಸಂತ್ರಸ್ಥರ ನೆರವಿಗಾಗಿ ಚೆಸ್‌.ಕಾಂ-ಇಂಡಿಯಾ ಜೂ.13ರಂದು ಇದನ್ನು ಆಯೋಜಿಸಿದೆ. ಇದಕ್ಕೆ ದಯಮಾಡಿ ದೇಣಿಗೆ ನೀಡಿ ಪ್ರೋತ್ಸಾಹಿ ಎಂದು ಕೋರಿಕೊಳ್ಳಲಾಗಿದೆ. ಇದರಿಂದ ಬರುವ ದೇಣಿಗೆಯನ್ನು ಕೋವಿಡ್‌ನಿಂದ ಸಂಕಷ್ಟಕ್ಕೀಡಾದ ಬಡ ಸಮುದಾಯದ ಹಸಿವು ನೀಗಿಸಲಾಗುತ್ತದೆ ಎಂದು ಹೇಳಲಾಗಿದೆ. ಈ ಪಂದ್ಯವನ್ನು ಆನ್‌ಲೈನ್‌ ಮೂಲಕ ವೀಕ್ಷಿಸಬಹುದಾಗಿದೆ.

ಚೆಸ್‌ ದಿಗ್ಗಜ ವಿಶ್ವನಾಥನ್ ಆನಂದ್‌ರಿಂದ ಕೋವಿಡ್‌ ನಿಧಿ ಸಂಗ್ರಹ

ನೀವೆಲ್ಲರೂ ಕಾಯುತ್ತಿದ್ದ ಸಮಯ ಕೊನೆಗೂ ಬಂದಿದೆ. ಬಾಲಿವುಡ್ ಸೂಪರ್ ಸ್ಟಾರ್, ಚೆಸ್‌ ಅಭಿಮಾನಿ ಅಮೀರ್ ಖಾನ್, ಮಾಜಿ ಚಾಂಪಿಯನ್‌ ವಿಶ್ವನಾಥನ್ ಆನಂದ್ ಜತೆ ಪ್ರದರ್ಶನ ಪಂದ್ಯವನ್ನು ಆಡಲಿದ್ದಾರೆ. ದಯವಿಟ್ಟು ಎಲ್ಲರೂ ದೇಣಿಗೆ ನೀಡುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಚೆಸ್.ಕಾಂ ಇಂಡಿಯಾ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona