Asianet Suvarna News Asianet Suvarna News

BWF World Tour Finals: ರೋಚಕವಾಗಿ ಫೈನಲ್‌ಗೆ ಲಗ್ಗೆಯಿಟ್ಟ ಪಿ ವಿ ಸಿಂಧು

* BWF World Tour Finals ಟೂರ್ನಿಯಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ ಸಿಂಧು

* ಟೋಕಿಯೋ ಒಲಿಂಪಿಕ್ಸ್‌ ಬಳಿಕ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟ ಸಿಂಧು

* ಎರಡನೇ BWF World Tour Finals ಪ್ರಶಸ್ತಿ ಗೆಲ್ಲುವ ಹೊಸ್ತಿಲಲ್ಲಿ ಭಾರತದ ತಾರಾ ಶಟ್ಲರ್

BWF World Tour Finals Indian Ace Shuttler PV Sindhu Enters Final kvn
Author
Bengaluru, First Published Dec 5, 2021, 9:01 AM IST

ಬಾಲಿ(ಡಿ.05): ಹಾಲಿ ವಿಶ್ವ ಚಾಂಪಿಯನ್‌ ಸಿಂಧು ಮೂರನೇ ಬಾರಿ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ (Badminton BWF World Tour Finals) ಪ್ರವೇಶಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಬಳಿಕ 3 ಟೂರ್ನಿಗಳಲ್ಲಿ ಸೆಮಿಫೈನಲ್‌ನಲ್ಲಿ ಎಡವಿದ್ದ ಪಿ ವಿ ಸಿಂಧು (PV Sindhu), ಕೊನೆಗೂ ಫೈನಲ್‌ ಪ್ರವೇಶಿಸಲು ಸಫಲರಾಗಿದ್ದಾರೆ. ಆದರೆ 20 ವರ್ಷದ ಲಕ್ಷ್ಯ ಸೆನ್‌ ಸೆಮೀಸ್‌ನಲ್ಲಿ ಮುಗ್ಗರಿಸಿದ್ದಾರೆ.

ಶನಿವಾರ ನಡೆದ ಮಹಿಳಾ ಸಿಂಗಲ್ಸ್‌ನ ರೋಚಕ ಸೆಮಿಫೈನಲ್‌ ಪಂದ್ಯದಲ್ಲಿ ಸಿಂಧು, ಜಪಾನಿನ ಅಕನೆ ಯಮಗುಚಿ (Akane Yamaguchi) ವಿರುದ್ಧ 21-​15, 15-​21, 21​-19 ಗೇಮ್‌ಗಳಿಂದ ಗೆಲುವು ಸಾಧಿಸಿದರು. ಬರೋಬ್ಬರಿ 1 ಗಂಟೆ 10 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ ಸಿಂಧು ಛಲಬಿಡದೇ ಹೋರಾಡಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಇದರೊಂದಿಗೆ ಸಿಂಧು ಮೂರನೇ ಬಾರಿಗೆ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಪೈಕಿ 2018ರಲ್ಲಿ ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದ ಸಿಂಧು, 2ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಭಾನುವಾರ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ 19 ವರ್ಷದ ಆನ್‌ ಸೆ ಯಂಗ್‌ ಸವಾಲು ಎದುರಿಸಲಿದ್ದಾರೆ. 

ಇನ್ನು, ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಯುವ ಶಟ್ಲರ್ ಲಕ್ಷ್ಯ ಸೆನ್ (Lakshya Sen), ವಿಶ್ವ ನಂ.2 ಡೆನ್ಮಾರ್ಕ್‌ನ ವಿಕ್ಟರ್‌ ಆಕ್ಸೆಲ್ಸೆನ್‌ (Viktor Axelsen) ವಿರುದ್ಧ 13-21, 11-21 ನೇರ ಗೇಮ್‌ಗಳಿಂದ ಸೋಲನುಭವಿಸಿದರು. ಗುಂಪು ಹಂತದಲ್ಲೂ ವಿಕ್ಟರ್‌ ವಿರುದ್ಧ ಲಕ್ಷ್ಯ ಸೆನ್ ಸೋತಿದ್ದರು.

ಡೇವಿಸ್‌ ಕಪ್‌ ಟೆನಿಸ್: ರಷ್ಯಾ, ಕ್ರೊವೇಷಿಯಾ ಫೈನಲ್‌ ಪಂದ್ಯ ಇಂದು

ಮ್ಯಾಡ್ರಿಡ್‌: ತಲಾ 2 ಬಾರಿಯ ಚಾಂಪಿಯನ್‌ ಕ್ರೊವೇಷಿಯಾ ಹಾಗೂ ರಷ್ಯಾ ಡೇವಿಸ್ ಕಪ್‌ ಟೆನಿಸ್‌ ಟೂರ್ನಿಯಲ್ಲಿ (Davis Cup Tennis Tournament) ಫೈನಲ್‌ ಪ್ರವೇಶಿಸಿವೆ. ಶುಕ್ರವಾರ ನಡೆದ ಮೊದಲ ಸೆಮೀಸ್‌ನಲ್ಲಿ ಕ್ರೊವೇಷಿಯಾ, ಮಾಜಿ ಚಾಂಪಿಯನ್‌ ಸರ್ಬಿಯಾ ವಿರುದ್ದ 2-1 ಅಂತರದಲ್ಲಿ ಗೆದ್ದು ನಾಲ್ಕನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ನೊವಾಕ್ ಜೋಕೋವಿಚ್ (Novak Djokovic) ಡಬಲ್ಸ್‌ ಪಂದ್ಯದಲ್ಲಿ ಸರ್ಬಿಯಾ ಕೈ ಹಿಡಿಯಲಿಲ್ಲ. ಇದು ಸರ್ಬಿಯಾ ಸೋಲಿಗೆ ಕಾರಣವಾಯಿತು. 

BWF World Tour Finals: ಗ್ರೂಪ್‌ ಹಂತದಲ್ಲೇ ಹೊರಬಿದ್ದ ಕಿದಂಬಿ ಶ್ರೀಕಾಂತ್..!

ಇನ್ನು ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಜರ್ಮನಿ ವಿರುದ್ದ ಗೆಲುವು ಸಾಧಿಸಿದ ರಷ್ಯಾ ಆರನೇ ಬಾರಿಗೆ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದೆ. ಮೊದಲ ಸಿಂಗಲ್ಸ್‌ನಲ್ಲಿ ಆಂಡ್ರೆ ರುಬ್ಲೆವ್ ಹಾಗೂ ಎರಡನೇ ಸಿಂಗಲ್ಸ್‌ನಲ್ಲಿ ಡ್ಯಾನಿಲ್ ಮೆಡ್ವೆಡೆವ್‌ ಜಯಿಸಿ ರಷ್ಯಾವನ್ನು ಫೈನಲ್‌ಗೇರಿಸಿದರು. ಫೈನಲ್ ಪಂದ್ಯವು ಭಾನುವಾರ ನಡೆಯಲಿದೆ.

ಟೆನಿಸ್‌: ಸೌಜನ್ಯಾ-ರುತುಜಾ ಡಬಲ್ಸ್‌ನಲ್ಲಿ ಚಾಂಪಿಯನ್‌

ಬೆಂಗಳೂರು: ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ(ಕೆಎಸ್‌ಎಲ್‌ಟಿಎ) ಆಶ್ರಯದಲ್ಲಿ ನಡೆಯುತ್ತಿರುವ ಐಟಿಎಫ್‌ ಮಹಿಳಾ ವಿಶ್ವ ಟೂರ್‌ ಚಾಂಪಿಯನ್‌ಶಿಪ್‌ನ ಡಬಲ್ಸ್‌ನಲ್ಲಿ ಸೌಜನ್ಯಾ ಬವಿಶೆಟ್ಟಿ-ರುತುಜಾ ಭೋಸಲೆ ಜೋಡಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 

Junior Hockey World Cup: ಸೆಮೀಸ್‌ನಲ್ಲಿ ಹಾಲಿ ಚಾಂಪಿಯನ್‌ ಭಾರತಕ್ಕೆ ಶಾಕ್‌..!

ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಈ ಜೋಡಿ, ವೈದೇಹಿ ಚೌಧರಿ-ಮಿಹಿಕಾ ಯಾದವ್‌ ವಿರುದ್ಧ ಗೆಲುವು ಸಾಧಿಸಿತು. ಇನ್ನು, ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ರುತುಜಾ ವಿರುದ್ಧ ಸೌಜನ್ಯ ಗೆದ್ದರೆ, ಇನ್ನೊಂದು ಸೆಮೀಸ್‌ನಲ್ಲಿ ಭಾಮಿದಿಪಟಿ ವಿರುದ್ಧ ಗೆದ್ದ ಪ್ರಾಂಜಲ ಯಡ್ಲಪಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಫೈನಲ್‌ ಭಾನುವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.

Follow Us:
Download App:
  • android
  • ios