PV ಸಿಂಧುಗೆ BWF ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸ

ಹಾಲಿ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್‌ ಚಾಂಪಿಯನ್ ಪಿ.ವಿ. ಸಿಂಧು ಮತ್ತೊಮ್ಮೆ ಚಾಂಪಿಯನ್ ಆಗುವತ್ತ ಚಿತ್ತ ನೆಟ್ಟಿದ್ದಾರೆ. ಭಾರತದಿಂದ ಸ್ಪರ್ಧಿಸುತ್ತಿರುವ ಏಕೈಕ ಆಟಗಾರ್ತಿಯಾಗಿರುವ ಸಿಂಧು, ಗಮನಾರ್ಹ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

BWF Tour Finals Indian Ace Shuttler PV Sindhu keen on Defending title

ಗುವಾಂಗ್ಜು(ಡಿ.11): ಹಾಲಿ ಚಾಂಪಿಯನ್‌ ಪಿ.ವಿ.ಸಿಂಧು ಬುಧವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಋುತು ಅಂತ್ಯದ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. 

PBL 5ನೇ ಆವೃತ್ತಿ ಹರಾಜು ಪ್ರಕ್ರಿಯೆ; ಸಿಂಧುಗೆ ಬಂಪರ್‌!

2019ರಲ್ಲಿ ವಿಶ್ವ ಚಾಂಪಿಯನ್‌ ಆದ ಸಿಂಧು, ಆ ಬಳಿಕ ಲಯ ಕಳೆದುಕೊಂಡಿದ್ದಾರೆ. ಕೊರಿಯಾ ಓಪನ್‌ ಹಾಗೂ ಚೀನಾ ಓಪನ್‌ನ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದ ಸಿಂಧು, ಮೂರು ಟೂರ್ನಿಗಳಲ್ಲಿ ದ್ವಿತೀಯ ಸುತ್ತಿನಲ್ಲಿ ಸೋಲುಂಡಿದ್ದರು. ವಿಶ್ವ ಟೂರ್‌ ಫೈನಲ್ಸ್‌ನಲ್ಲಿ ವಿಶ್ವದ ಅಗ್ರ 8 ಶಟ್ಲರ್‌ಗಳಿಗೆ ಮಾತ್ರ ಪ್ರವೇಶ ಸಿಗಲಿದ್ದು, ಸಿಂಧು 15ನೇ ಸ್ಥಾನದಲ್ಲಿದ್ದರೂ ಹಾಲಿ ವಿಶ್ವ ಚಾಂಪಿಯನ್‌ ಎನ್ನುವ ಕಾರಣಕ್ಕೆ ಪ್ರವೇಶ ದೊರೆತಿದೆ.

ಧವನ್‌ ಬದಲು ಏಕದಿನ ತಂಡಕ್ಕೆ ಮಯಾಂಕ್‌?

ಟೂರ್ನಿಯಲ್ಲಿ ಸ್ಪರ್ಧಿಸಲಿರುವ ಭಾರತದ ಏಕೈಕ ಶಟ್ಲರ್‌ ಆಗಿರುವ ಸಿಂಧು, ಮಹಿಳಾ ಸಿಂಗಲ್ಸ್‌ನಲ್ಲಿ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಸಿಂಧುಗೆ ಜಪಾನ್‌ನ ಅಕಾನೆ ಯಮಗುಚಿ, ಚೀನಾದ ಚೆನ್‌ ಯು ಫೀ ಹಾಗೂ ಹೇ ಬಿಂಗ್‌ ಜಿಯೊ ಎದುರಾಗಲಿದ್ದಾರೆ. ಗುಂಪು ಹಂತದಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ಶಟ್ಲರ್‌ಗಳು ಸೆಮಿಫೈನಲ್‌ಗೆ ಪ್ರವೇಶಿಸಲಿದ್ದಾರೆ. ಬುಧವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಸಿಂಧು, ಯಮಗುಚಿ ವಿರುದ್ಧ ಸೆಣಸಲಿದ್ದಾರೆ. ಡಿ.15ರಂದು ಫೈನಲ್‌ ಪಂದ್ಯ ನಡೆಯಲಿದೆ.

Latest Videos
Follow Us:
Download App:
  • android
  • ios