ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ರ‍್ಯಾಪ್ಟರ್ಸ್‌ ತಂಡವು ಎರಡನೇ ಬಾರಿಗೆ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

ಹೈದ್ರಾಬಾದ್‌(ಫೆ.10): ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌)ನಲ್ಲಿ ಬೆಂಗಳೂರು ರ‍್ಯಾಪ್ಟರ್ಸ್‌ ಸತತ 2ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 

Scroll to load tweet…

ಭಾನುವಾರ ಇಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಬೆಂಗಳೂರು, ನಾರ್ಥ್ ಈಸ್ಟರ್ನ್‌ ವಾರಿಯರ್ಸ್‌ ವಿರುದ್ಧ 4-2 ರಿಂದ ಗೆಲುವು ಸಾಧಿಸಿತು. ಭಾರತದ ಬಿ. ಸಾಯಿ ಪ್ರಣೀತ್‌, ವಿಶ್ವ ನಂ.2 ತೈ ತ್ಸು ಯಿಂಗ್‌ ನೇತೃತ್ವದ ಬೆಂಗಳೂರು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿತು. 

Scroll to load tweet…

ಫೈನಲ್‌ನಲ್ಲಿ ಪುರುಷರ ಸಿಂಗಲ್ಸ್‌, ಮಹಿಳಾ ಸಿಂಗಲ್ಸ್‌ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಜಯಭೇರಿ ಬಾರಿಸಿ ಪ್ರಶಸ್ತಿ ಜಯಿಸಿತು. ಈ ಮೂಲಕ ಸತತ ಎರಡು ಬಾರಿ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ ಪ್ರಶಸ್ತಿ ಜಯಿಸಿದ ಮೊದಲ ತಂಡ ಎನ್ನುವ ಗೌರವಕ್ಕೆ ಬೆಂಗಳೂರು ರ‍್ಯಾಪ್ಟರ್ಸ್‌ ತಂಡ ಪಾತ್ರವಾಗಿದೆ. 

ಇಂದಿನಿಂದ ಬೆಂಗಳೂರು ಓಪನ್ ಟೆನಿಸ್ ಆರಂಭ

ಚಾಂಪಿಯನ್ ತಂಡ ಬೆಂಗಳೂರು ರ‍್ಯಾಪ್ಟರ್ಸ್‌ 3 ಕೋಟಿ ರುಪಾಯಿ ರುಪಾಯಿಗಳನ್ನು ಜೇಬಿಗಿಳಿಸಿಕೊಂಡರೆ, ರನ್ನರ್‌ ಅಪ್ ತಂಡವಾದ ನಾರ್ಥ್ ಈಸ್ಟರ್ನ್‌ ವಾರಿಯರ್ಸ್ 1.5 ಕೋಟಿ ರುಪಾಯಿ ಪಡೆದುಕೊಂಡಿತು. ಇನ್ನು ಸಮಿಫೈನಲ್ ಪ್ರವೇಶಿಸಿದ್ದ ಚೆನ್ನೈ ಸೂಪರ್‌ಸ್ಟಾರ್ಸ್ ಹಾಗೂ ಪಣೆ ಏಸಸ್ ತಲಾ 75 ಲಕ್ಷ ರುಪಾಯಿ ಪ್ರಶಸ್ತಿ ಪಡೆದುಕೊಂಡವು.