ಮೂರನೇ ಆವೃತ್ತಿ ಬೆಂಗಳೂರು ಓಪನ್ ಟೆನಿಸ್ ಟೂರ್ನಿಗೆ ವೇದಿಕೆ ಸಜ್ಜಾಗಿದೆ. 1.15 ಕೋಟಿ ರೂಪಾಯಿ ಬಹುಮಾನದ ಪಂದ್ಯವಾಳಿ ಇದಾಗಿದ್ದು, ದಿಗ್ಗಜ ಟೆನಿಸ್ ಪಟುಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ಬೆಂಗಳೂರು(ಜ.23): ಉದ್ಯಾನ ನಗರಿ ಮತ್ತೊಂದು ಪ್ರತಿಷ್ಠಿತ ಟೆನಿಸ್ ಟೂರ್ನಿಗೆ ಸಜ್ಜಾಗಿದೆ. ವಿಶ್ವ ರಾರ‍ಯಂಕಿಂಗ್‌ನಲ್ಲಿ ಸ್ಥಾನ ಪಡೆದುಕೊಂಡಿರುವ ಖ್ಯಾತ ಆಟಗಾರರು ಪಾಲ್ಗೊಳ್ಳಲಿರುವ ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್ಸ್‌ ಟೂರ್ನಿ ಫೆಬ್ರವರಿ 10ರಿಂದ 16ರ ತನಕ ನಡೆಯಲಿದೆ ಎಂದು ಬುಧವಾರ ಆಯೋಜಕರು ತಿಳಿಸಿದ್ದಾರೆ. 

ಇದನ್ನೂ ಓದಿ: ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ಸ್ಲಾಂ; ಸೆರೆನಾ, ಜೋಕೋಗೆ ಸುಲಭ ಜಯ

ಮೂರನೇ ಆವೃತ್ತಿಯ ಟೂರ್ನಿ ಇದಾಗಿದ್ದು, ವಿಶ್ವ ರಾರ‍ಯಂಕಿಂಗ್‌ನ 69ನೇ ಸ್ಥಾನದಲ್ಲಿರುವ ಲಿಥುಯೇನಿಯಾದ ರಿಚರ್ಡ್ಸ್ ಬೆರಾಂಕಿಸ್‌, 74ನೇ ಸ್ಥಾನದಲ್ಲಿರುವ ಇಟಲಿಯ ಸ್ಟೆಫೇನೋ ಟ್ರಾವಾಂಗ್ಲಿಯಾ, ಜಪಾನ್‌ನ ಯುಚಿ ಸುಗಿತಾ, ಆಸ್ಪ್ರೇಲಿಯಾದ ಜೇಮ್ಸ್‌ ಡಕ್‌ವಥ್‌ರ್‍ ಅವರು ಸ್ಪರ್ಧೆಯ ಅಖಾಡದಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಇದನ್ನೂ ಓದಿ: ಟೆನಿಸ್‌: ಸಾನಿಯಾ ಮಿರ್ಜಾ ಭರ್ಜರಿ ಪುನರಾಗಮನ.

ಒಟ್ಟು 1.15 ಕೋಟಿ ರು. ಬಹುಮಾನದ ಪಂದ್ಯಾವಳಿ ಇದಾಗಿದ್ದು, ಭಾರತದ ಅಗ್ರ ಶ್ರೇಯಾಂಕದ ಆಟಗಾರರು ಆಡಲಿದ್ದಾರೆ. ವಿಶ್ವ ರಾರ‍ಯಂಕಿಂಗ್‌ನಲ್ಲಿ 123ನೇ ಸ್ಥಾನದಲ್ಲಿರುವ ಪ್ರಜ್ಞೇಶ್‌ ಗುಣೇಶ್ವರನ್‌, 131ನೇ ಸ್ಥಾನದಲ್ಲಿರುವ ಸುಮಿತ್‌ ನಗಾಲ್‌, 185ನೇ ಸ್ಥಾನದಲ್ಲಿರುವ ರಾಮಕುಮಾರ್‌ ರಾಮನಾಥನ್‌ ಭಾರತವನ್ನು ಪ್ರತಿನಿಧಿಸಲಿದ್ದಾರೆ.