ಬೆಂಗಳೂರು ಓಪನ್ ಟೆನಿಸ್: ಸೆಮೀಸ್‌ಗೆ ಪೇಸ್ ಜೋಡಿ
ಭಾರತದಲ್ಲಿ ಕಟ್ಟಕಡೆಯ ಟೆನಿಸ್ ಟೂರ್ನಿ ಆಡುತ್ತಿರುವ ಲಿಯಾಂಡರ್ ಪೇಸ್ ಬೆಂಗಳೂರು ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಬೆಂಗಳೂರು(ಫೆ.14): ಭಾರತದಲ್ಲಿ ಕೊನೆಯ ಟೂರ್ನಿ ಆಡುತ್ತಿರುವ ದಿಗ್ಗಜ ಲಿಯಾಂಡರ್ ಪೇಸ್ ಹಾಗೂ ಆಸ್ಪ್ರೇಲಿಯಾದ ಎಬ್ಡೆನ್ ಮ್ಯಾಥ್ಯೂ ಜೋಡಿ ಡಬಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಸ್ವೀಡನ್‌ನ ಆ್ಯಂಡ್ರೆ ಗೊರನ್ಸನ್ ಹಾಗೂ ಇಂಡೋನೇಷ್ಯಾದ ಕ್ರಿಸ್ಟೋಫರ್ ಜೋಡಿ ವಿರುದ್ಧ 7-5, 0-6, 10-7 ಸೆಟ್‌ಗಳಲ್ಲಿ ಗೆಲುವು ಸಾಧಿಸಿತು. ಪಂದ್ಯದ ಆರಂಭದಿಂದಲೂ ಎರಡೂ ಜೋಡಿಗಳು ಪ್ರಬಲ ಹೋರಾಟ ನಡೆಸಿದವು.
ತವರಿನಲ್ಲಿ ಕೊನೆ ಟೂರ್ನಿ ಆಡುತ್ತಿರುವ ಪೇಸ್, ಕ್ವಾರ್ಟರ್‌ಫೈನಲ್‌ಗೆ ಲಗ್ಗೆ!
ಈ ಮೊದಲು ಅಂತಿಮ 16ನೇ ಸುತ್ತಿನಲ್ಲಿ ಸ್ಲೋವೇನಿಯಾದ ಬ್ಲಾಜ್ ರೋಲಾ , ಚೀನಾದ ಜಾಂಗ್ ಜಿಜಾನ್ ವಿರುದ್ಧ ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಇನ್ನು ಕ್ವಾರ್ಟರ್‌ನಲ್ಲಿ ಪೇಸ್ ಆಟವನ್ನು ಕಣ್ತುಂಬಿಕೊಳ್ಳಲು ನೆರೆದಿದ್ದ ಅಭಿಮಾನಿಗಳಿಗೆ ಪೇಸ್ ಜೋಡಿ ನಿರಾಸೆ ಮಾಡಲಿಲ್ಲ.
ಬೆಂಗಳೂರು ಓಪನ್ ಟೆನಿಸ್: ಹಾಲಿ ಚಾಂಪಿಯನ್ ಪ್ರಜ್ನೇಶ್ ಔಟ್
ಸಾಕೇತ್ ಮೈನೇನಿ ಹಾಗೂ ಆಸ್ಪ್ರೇಲಿಯಾದ ಮ್ಯಾಟ್ ರೀಡ್ ಜೋಡಿ, ತೈಪೆಯ ಚೆಂಗ್ ಪೆಂಗ್ ಹಾಗೂ ಉಕ್ರೇನ್‌ನ ಡೇನಿಸ್ ಜೋಡಿ ವಿರುದ್ಧ 3-6, 6-4, 10-8 ಸೆಟ್‌ಗಳಲ್ಲಿ, ಪೂರವ್ ರಾಜಾ ಹಾಗೂ ರಾಮ್‌ಕುಮಾರ್ ರಾಮನಾಥನ್ ಜೋಡಿ, ಪೋರ್ಚುಗಲ್‌ನ ಫ್ರೆಡ್ರಿಕೊ ಹಾಗೂ ಸರ್ಬಿಯಾದ ನಿಕೋಲ ಜೋಡಿ ಎದುರು 6-4, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಉಪಾಂತ್ಯಕ್ಕೆ ಲಗ್ಗೆ ಇಟ್ಟಿತು.