ಬೆಂಗಳೂರು ಓಪನ್ ಟೆನಿಸ್: ಹಾಲಿ ಚಾಂಪಿಯನ್ ಪ್ರಜ್ನೇಶ್ ಔಟ್
ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಹೋರಾಟ ಅಂತ್ಯವಾಗಿದೆ. ಹಾಲಿ ಚಾಂಪಿಯನ್ ಪ್ರಜ್ನೇಶ್ ಗುಣೇಶ್ವರನ್ ಸೇರಿದಂತೆ ಪ್ರಿ ಕ್ವಾರ್ಟರ್‌ನಲ್ಲಿ ಆಡಿದ 6 ಭಾರತೀಯ ಸಿಂಗಲ್ಸ್ ಆಟಗಾರರು ಮುಗ್ಗರಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಬೆಂಗಳೂರು(ಫೆ.14): 3ನೇ ಆವೃತ್ತಿಯ ಎಟಿಪಿ ಚಾಲೆಂಜರ್ ಟೂರ್ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಪ್ರಜ್ನೇಶ್ ಗುಣೇಶ್ವರನ್ ಸೇರಿದಂತೆ ಪ್ರಿ ಕ್ವಾರ್ಟರ್‌ನಲ್ಲಿ ಆಡಿದ 6 ಭಾರತೀಯ ಸಿಂಗಲ್ಸ್ ಆಟಗಾರರು ಪರಾಭವಗೊಂಡಿದ್ದಾರೆ. ವಿದೇಶಿ ಟೆನಿಸಿಗರು ಕ್ವಾರ್ಟರ್‌ಫೈನಲ್ ಹಂತ ಪ್ರವೇಶಿಸಿದ್ದಾರೆ. ಇದರೊಂದಿಗೆ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯವಾಗಿದೆ. ಕಳೆದ 2 ಬಾರಿ ಟೂರ್ನಿಯಲ್ಲಿ ಭಾರತದವರೇ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಈ ಬಾರಿ ವಿದೇಶಿ ಆಟಗಾರರೊಬ್ಬರು ಹೊಸ ಚಾಂಪಿಯನ್ ಆಗಲಿದ್ದಾರೆ.
ಬೆಂಗಳೂರು ಓಪನ್ ಟೆನಿಸ್: ಪ್ರಿ ಕ್ವಾರ್ಟರ್‌ಗೆ ಪೂಣಚ್ಚ
ಟೂರ್ನಿಯ 4ನೇ ದಿನವಾದ ಗುರುವಾರ ಸಿಂಗಲ್ಸ್ ವಿಭಾಗದ 16ರ ಸುತ್ತಿನಲ್ಲಿ ಭಾರತದ ಅಗ್ರಮಾನ್ಯ ಟೆನಿಸಿಗ ಪ್ರಜ್ನೇಶ್, ಶ್ರೇಯಾಂಕ ರಹಿತ ಫ್ರಾನ್ಸ್‌ನ ಬೆಂಜಮಿನ್ ಬೊಂಜಿ ವಿರುದ್ಧ 6-7(5-7), 0-6 ಸೆಟ್‌ಗಳಲ್ಲಿ ಸೋಲು ಕಂಡರು. ಮೊದಲ ಸೆಟ್‌ನಲ್ಲಿ ಉಭಯ ಆಟಗಾರರ ನಡುವೆ ಉತ್ತಮ ಪೈಪೋಟಿ ಎದುರಾಯಿತು. ಸಮಬಲದ ಹೋರಾಟ ಕಂಡುಬಂದಿತು. ಫಲಿತಾಂಶಕ್ಕಾಗಿ ಟೈ ಬ್ರೇಕರ್ ಮೊರೆಹೋಗಲಾಯಿತು. ಟೈ ಬ್ರೇಕರ್‌ನಲ್ಲಿ ಫ್ರಾನ್ಸ್ ಆಟಗಾರ ಪ್ರಭಾವಿ ಸವ್‌ರ್‍ಗಳಿಂದ ಸೆಟ್ ವಶಪಡಿಸಿಕೊಂಡರು. 2ನೇ ಸೆಟ್‌ನಲ್ಲಿ ಪ್ರಜ್ನೇಶ್ ತಮ್ಮ ಸವ್‌ರ್‍ನ್ನು ಉಳಿಸಿಕೊಳ್ಳುವ ಯತ್ನ ಮಾಡದೆ ಶರಣಾದರು.
ತವರಿನಲ್ಲಿ ಕೊನೆ ಟೂರ್ನಿ ಆಡುತ್ತಿರುವ ಪೇಸ್, ಕ್ವಾರ್ಟರ್‌ಫೈನಲ್‌ಗೆ ಲಗ್ಗೆ!
2017ರ ಚಾಂಪಿಯನ್ ಸುಮಿತ್ ನಗಾಲ್, ಸ್ಲೋವೇನಿಯಾದ ಬ್ಲಾಜ್ ರೋಲಾ ಎದುರು 6-3, 6-3 ಸೆಟ್‌ಗಳಲ್ಲಿ ಸೋಲು ಕಂಡರು. ಮೊದಲ ಸೆಟ್‌ನಿಂದಲೂ ತನ್ನ ಸವ್‌ರ್ ಉಳಿಸಿಕೊಳ್ಳಲು ತಿಣುಕಾಡಿದ ಸುಮಿತ್, ಎದುರಾಳಿ ಆಟಗಾರನ ಎದುರು ಮಂಕಾದರು.
ಉಳಿದಂತೆ ರಾಮ್‌ಕುಮಾರ್ ರಾಮನಾಥನ್, ಬೇಲಾರಸ್‌ನ ಇಲ್ಯಾ ಇವಾಶ್ಕ ವಿರುದ್ಧ 6-7(2-7), 1-6 ಸೆಟ್‌ಗಳಲ್ಲಿ, ಸಾಕೇತ್ ಮೈನೇನಿ, ಇಟಲಿಯ ಥಾಮಸ್ ಫ್ಯಾಬಿಯಾನೊ ಎದುರು 4-6, 7-5, 2-6 ಸೆಟ್‌ಗಳಲ್ಲಿ, ರಾಫೆಲ್ ನಡಾಲ್ ವಿರುದ್ಧ ಗೆದ್ದಿದ್ದ ಚೆಕ್ ಗಣರಾಜ್ಯದ ಲುಕಾಸ್ ರೊಸೊಲ್‌ಗೆ ಶಾಕ್ ನೀಡಿದ್ದ ಕರ್ನಾಟಕದ ನಿಕ್ಕಿ ಪೂಣಚ್ಚ, ಜಪಾನ್‌ನ ಯುಚಿ ಸುಗಿತಾ ವಿರುದ್ಧ 5-7, 3-6 ಸೆಟ್‌ಗಳಲ್ಲಿ ಹಾಗೂ ಸಿದ್ಧಾರ್ಥ್ ರಾವತ್, ಇಟಲಿಯ ಜುಲಿಯಾನ್ ಒಕ್ಲೆಪ್ಪೊ ವಿರುದ್ಧ 5-7, 4-6 ಸೆಟ್‌ಗಳಲ್ಲಿ ಸೋಲು ಅನುಭವಿಸಿದರು.