Asianet Suvarna News Asianet Suvarna News

Badminton World Championship: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿಂಧು, ಶ್ರೀಕಾಂತ್‌

* ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮಿಶ್ರಫಲ

* ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು, ಕಿದಂಬಿ ಶ್ರೀಕಾಂತ್ ಸೆಮೀಸ್‌ಗೆ ಲಗ್ಗೆ

* ಭಾರತದ ಪುರುಷ ಹಾಗೂ ಮಹಿಳಾ ಡಬಲ್ಸ್ ಜೋಡಿಗೆ ಸೋಲು

Badminton World Championships 2021 PV Sindhu Kidambi Srikanth storms into quarter Final kvn
Author
Bengaluru, First Published Dec 17, 2021, 9:20 AM IST

ಹುಯೆಲ್ವಾ(ಡಿ.17‌): ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (Badminton World Championship) ಭಾರತದ ತಾರಾ ಶಟ್ಲರ್‌, ಹಾಲಿ ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು (PV Sindhu) ಹಾಗೂ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌ (Kidambi Srikanth) ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.ಗುರುವಾರ ನಡೆದ ಮಹಿಳೆಯರ ವಿಭಾಗದ ಪ್ರಿ ಕ್ವಾರ್ಟರ್‌ ಪೈನಲ್‌ನಲ್ಲಿ ಸಿಂಧು, ಥಾಯ್ಲೆಂಡ್‌ನ ಚೊಚುವಾಂಗ್‌ ವಿರುದ್ಧ 21-14, 21-18 ನೇರ ಗೇಮ್‌ಗಳಿಂದ ಗೆಲುವು ಸಾಧಿಸಿದರು. ಇದರೊಂದಿಗೆ ಸಿಂಧು, ಚೊಚುವಾಂಗ್‌ ವಿರುದ್ಧ ಗೆಲುವಿನ ಓಟವನ್ನು 5-3ಕ್ಕೆ ಏರಿಸಿದ್ದಾರೆ. 

ಇದರ ಜೊತೆಗೆ, ವಿಶ್ವ ಟೂರ್‌ ಪೈನಲ್ಸ್‌ ಹಾಗೂ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಶಿಪ್‌ನ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. ಕ್ವಾರ್ಟರ್‌ನಲ್ಲಿ ಸಿಂಧು, ಚೈನೀಸ್‌ ತೈಪೆಯ ತೈ ಜುಯಿಂಗ್‌ ವಿರುದ್ಧ ಸೆಣಸಲಿದ್ದಾರೆ. ಇನ್ನು, ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ ಚೀನಾದ ಗ್ವಾಂಗ್‌ ಜುಲು ವಿರುದ್ಧ 21-10, 21-15 ಗೇಮ್‌ಗಳಿಂದ ಗೆದ್ದು ಅಂತಿಮ 8ರ ಘಟ್ಟಪ್ರವೇಶಿಸಿದರು. ಕ್ವಾರ್ಟರ್‌ನಲ್ಲಿ ಅವರು ನೆದರ್‌ಲೆಂಡ್ಸ್‌ನ ಮಾರ್ಕ್ ಕಾಲ್ಜೋವ್‌ ಸವಾಲನ್ನು ಎದುರಿಸಲಿದ್ದಾರೆ.

ಆದರೆ ಭಾರತದ ಶಟ್ಲರ್‌ಗಳು ಪುರುಷ ಹಾಗೂ ಡಬಲ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ ಪೈನಲ್‌ನಲ್ಲಿ ಮುಗ್ಗರಿಸಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಂಕಿರೆಡ್ಡಿ - ಚಿರಾಗ್ ಶೆಟ್ಟಿ ಜೋಡಿ ಮಲೇಷ್ಯಾದ ಯೆವ್‌ ಸಿನ್‌-ತೋ ಯಿ ವಿರುದ್ಧ ಸೋತರೆ, ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ ಥಾಯ್ಲೆಂಡ್‌ನ ಜೊಂಗ್‌ಕೊಲ್ಪನ್‌-ರವೀಂದ್ರ ಜೋಡಿ ವಿರುದ್ಧ ಸೋತು ಕೂಟದಿಂದ ಹೊರಬಿತ್ತು.

ಏಷ್ಯನ್‌ ಹಾಕಿ: ಭಾರತಕ್ಕೆ ಇಂದು ಪಾಕ್‌ ಸವಾಲು

ಢಾಕಾ: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ (Asian Champions Trophy Hockey) ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆಯಲ್ಲಿರುವ ಹಾಲಿ ಚಾಂಪಿಯನ್‌ ಭಾರತ, ಶುಕ್ರವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ. ಕಳೆದ ಆವೃತ್ತಿಯಲ್ಲಿ ಫೈನಲ್‌ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರಿಂದ ಉಭಯ ತಂಡಗಳು ಜಂಟಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದವು. 

Asian Champions Trophy 2021: ಬಾಂಗ್ಲಾ ವಿರುದ್ಧ ಭಾರತ ಹಾಕಿ ತಂಡಕ್ಕೆ ಭರ್ಜರಿ ಗೆಲುವು

ಇತ್ತಂಡಗಳೂ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ತಲಾ 3 ಬಾರಿ ಚಾಂಪಿಯನ್‌ ಆಗಿವೆ. ಈ ಬಾರಿ ಭಾರತ ಮೊದಲ ಪಂದ್ಯದಲ್ಲಿ ದ.ಕೊರಿಯಾ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದು, ಬುಧವಾರ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು 9-0 ಗೋಲುಗಳಿಂದ ಗೆದ್ದಿತ್ತು. 2 ಪಂದ್ಯಗಳಲ್ಲಿ 4 ಅಂಕದೊಂದಿಗೆ ಅಗ್ರಸ್ಥಾನದಲ್ಲಿರುವ ಭಾರತ ಪಾಕ್‌ ವಿರುದ್ಧದ ಪಂದ್ಯದಲ್ಲೂ ಗೆಲ್ಲುವ ನಿರೀಕ್ಷೆಯಲ್ಲಿದೆ. ಇನ್ನು, ಮೊದಲ ಪಂದ್ಯದಲ್ಲಿ ಜಪಾನ್‌ ವಿರುದ್ಧ ಡ್ರಾ ಸಾಧಿಸಿದ್ದ ಪಾಕ್‌, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಐಎಸ್‌ಎಲ್‌: ಬೆಂಗಳೂರು, ಎಟಿಕೆ ಬಗಾನ್‌ ಪಂದ್ಯ ಡ್ರಾ

ಬಾಂಬೊಲಿಮ್‌: 8ನೇ ಆವೃತ್ತಿಯ ಐಎಸ್‌ಎಲ್‌ (Indian Super League) ಫುಟ್ಬಾಲ್‌ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ(ಬಿಎಫ್‌ಸಿ) (Bengaluru FC) ಹಾಗೂ ಎಟಿಕೆ ಮೋಹನ್‌ ಬಗಾನ್‌ (ATK Mohun Bagan) ವಿರುದ್ಧದ ಪಂದ್ಯ 3-3 ಗೋಲುಗಳಿಂದ ಡ್ರಾಗೊಂಡಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಸುನಿಲ್ ಚೆಟ್ರಿ (Sunil Chhetri) ನೇತೃತ್ವದ ಬೆಂಗಳೂರು ಎಫ್‌ಸಿ ತಂಡವು ಇದೀಗ ಡ್ರಾಗೆ ತೃಪ್ತಿಪಟ್ಟುಕೊಂಡುದೆ

Pro Kabaddi League 2021: ಬೆಂಗಳೂರು ಬುಲ್ಸ್‌ಗೆ ಪವನ್‌ ಶೆರಾವತ್ ನಾಯಕ

ಗುರುವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ ಪರ ಕ್ಲಿಟನ್‌ ಸಿಲ್ವ, ಡ್ಯಾನಿಶ್‌ ಫಾರೂಕ್‌ ಹಾಗೂ ಫ್ರಿನ್ಸ್‌ ಇಬಾರ ಗೋಲು ಹೊಡೆದರೆ, ಎಟಿಕೆ ಪರ ಶುಭಾಷಿಸ್‌ ಬೋಸೆ, ಹುಗೊ ಬೌಮೌಸ್‌ ಹಾಗೂ ರಾಯ್‌ ಕೃಷ್ಣ ಗೋಲು ಬಾರಿಸಿದರು. ಈ ಡ್ರಾದೊಂದಿಗೆ ಬಿಎಫ್‌ಸಿ 7 ಪಂದ್ಯಗಳಲ್ಲಿ 5 ಅಂಕದೊಂದಿಗೆ 9ನೇ ಸ್ಥಾನದಲ್ಲಿ ಮುಂದುವರಿದಿದೆ.
 

Follow Us:
Download App:
  • android
  • ios