Pro Kabaddi League 2021: ಬೆಂಗಳೂರು ಬುಲ್ಸ್‌ಗೆ ಪವನ್ ಶೆರಾವತ್ ನಾಯಕ
* 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭ
* ಡಿಸೆಂಬರ್ 22ರಿಂದ ಬೆಂಗಳೂರಿನಲ್ಲೇ ನಡೆಯಲಿದೆ ಕಬಡ್ಡಿ ಟೂರ್ನಿ
* ಬೆಂಗಳೂರು ಬುಲ್ಸ್ ತಂಡದ ನಾಯಕರಾಗಿ ಪವನ್ ಶೆರಾವತ್ ನೇಮಕ
ಬೆಂಗಳೂರು(ಡಿ.15): ಇದೇ ಡಿಸೆಂಬರ್ 22ರಿಂದ ಆರಂಭವಾಗಲಿರುವ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ (Pro Kabaddi League) ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls) ತಂಡವನ್ನು ತಾರಾ ರೈಡರ್ ಪವನ್ ಕುಮಾರ್ ಶೆರಾವತ್ (Pawan Kumar Sherawat) ಮುನ್ನಡೆಸಲಿದ್ದಾರೆ. ಈ ಬಗ್ಗೆ ಮಂಗಳವಾರ ಬೆಂಗಳೂರು ತಂಡ ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಮಾಹಿತಿ ನೀಡಿದೆ. ಕಳೆದ ಆವೃತ್ತಿಯಲ್ಲಿ ರೋಹಿತ್ ಕುಮಾರ್ (Rohit Kumar) ಅನುಪಸ್ಥಿಯಲ್ಲಿ ಪವನ್ ಕೆಲ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಪವನ್ ಕುಮಾರ್ ಶೆರಾವತ್ 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯ ಶ್ರೇಷ್ಠ ಆಟಗಾರ ಹಾಗೂ 7ನೇ ಆವೃತ್ತಿಯಲ್ಲಿ ಶ್ರೇಷ್ಠ ರೈಡರ್ ಪ್ರಶಸ್ತಿ ಪಡೆದಿದ್ದರು.
ಬುಲ್ಸ್ ಅಂದ್ರೆ ಬರೀ ಗೂಳಿ ಅಲ್ಲಾರಿ, ಅದು ಆರು ಕೋಟಿ ಕನ್ನಡಿಗರ ಗಮ್ಮತ್ತು:
2021ನೇ ಸಾಲಿನ ಪ್ರೊ ಕಬಡ್ಡಿ ಲೀಗ್‌ಗೆ ಎಲ್ಲಾ ತಂಡಗಳು ಭರ್ಜರಿಯಾಗಿಯೇ ಸಿದ್ದತೆ ನಡೆಸುತ್ತಿವೆ. ಇದೀಗ ಬೆಂಗಳೂರು ಬುಲ್ಸ್ ತಂಡದ ಪ್ರೋಮೋ ಬಿಡುಗಡೆಯಾಗಿದ್ದು, ಬುಲ್ಸ್ ತಂಡದ ರಾಯಭಾರಿ ಕಿಚ್ಚ ಸುದೀಪ್ (Kichha Sudeepa) ಅವರ ಖಡಕ್ ಅಭಿನಯ ಕಬಡ್ಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕೆಣಕಿದ್ರೆ ಗೆಲ್ಲಬಹುದು, ಗುರಾಯಿಸಿದ್ರೆ ಗುಮ್ಮಬಹುದು ಎನ್ನುವ ಸಾಲು ಸಕ್ಕತ್ ಪಂಚಿಂಗ್ ಆಗಿದೆ. ಬುಲ್ಸ್ ಅಂದ್ರೆ ಬರೀ ಗೂಳಿ ಅಲ್ಲಾರಿ, ಅದು ಆರು ಕೋಟಿ ಕನ್ನಡಿಗರ ಗಮ್ಮತ್ತು. ನೋಡೇ ಬಿಡೋಣ ಒಂದು ಸಲ ಎಂದು ಸುದೀಪ್ ತೊಡೆ ತಟ್ಟಿದ್ದಾರೆ.
ಬಹುನಿರೀಕ್ಷಿತ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯು ಡಿಸೆಂಬರ್ 22ರಿಂದ ಆರಂಭವಾಗಲಿದ್ದು, ಸಂಪೂರ್ಣ ಟೂರ್ನಿಯು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ. ಪವನ್ ಕುಮಾರ್ ಶೆರಾವತ್ ನೇತೃತ್ವದ ಬೆಂಗಳೂರು ಬುಲ್ಸ್ ತಂಡವು ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಆನ್‌ಲೈನ್ ನಿಷೇಧದಿಂದ ಚೆಸ್ ಮೇಲೆ ಪರಿಣಾಮ: ರಾಜ್ಯ ಸಂಸ್ಥೆ
ಬೆಂಗಳೂರು: ಕರ್ನಾಟಕ ಸರ್ಕಾರ ಗೇಮ್ ಆಫ್ ಸ್ಕಿಲ್(ಕೌಶಲ್ಯದ ಆಟ) ಸೇರಿದಂತೆ ಆನ್‌ಲೈನ್ ಗೇಮಿಂಗ್ ನಿಷೇಧಿಸಿದ್ದು ರಾಜ್ಯದಲ್ಲಿ ಚೆಸ್ ಕ್ರೀಡಾ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಿದೆ ಎಂದು ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ಡಿ.ಪಿ.ಅನಂತ ಹೇಳಿದ್ದಾರೆ.
Paris Olympics 2024 Opening Ceremony: ನೀರಿನ ಮೇಲೆ ಉದ್ಘಾಟನೆ, 6 ಲಕ್ಷ ಮಂದಿ ಸಮಾರಂಭ ವೀಕ್ಷಣೆ..!
ರಾಜ್ಯದಲ್ಲಿ 6000ಕ್ಕೂ ಹೆಚ್ಚಿನ ನೋಂದಾಯಿತ ಚೆಸ್ ಆಟಗಾರರಿದ್ದಾರೆ. ಈ ಹಂತದಲ್ಲಿ ಗೇಮ್ ಆಫ್ ಸ್ಕಿಲ್ ಸೇರಿದಂತೆ ಆನ್‌ಲೈನ್ ಗೇಮಿಂಗ್ ಮೇಲಿನ ನಿಷೇಧವು ಕಾರ್ಪೊರೇಟ್ ಪ್ರಾಯೋಜಕತ್ವ ಮತ್ತು ಪಂದ್ಯಾವಳಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಲಿದೆ. ಹೀಗಾಗಿ ಸರ್ಕಾರ ಕಾನೂನಿನಲ್ಲಿ ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಅವರು ಕೋರಿದ್ದಾರೆ.
2022ರಲ್ಲಿ ಐಪಿಎಲ್ ಮಾದರಿ ಚೆಸ್ ಲೀಗ್!
ನವದೆಹಲಿ: ಮುಂದಿನ ವರ್ಷ ಜೂನ್‌ನಲ್ಲಿ ಫ್ರಾಂಚೈಸಿ ಆಧಾರಿತ ಚೆಸ್ ಲೀಗ್ ನಡೆಸಲಾಗುವುದು ಎಂದು ಭಾರತೀಯ ಚೆಸ್ ಒಕ್ಕೂಟ(ಎಐಸಿಎಫ್) ಮಂಗಳವಾರ ಪ್ರಕಟಿಸಿದೆ. ಲೀಗ್‌ನಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಳ್ಳಲಿದ್ದು, ಪ್ರತಿ ತಂಡದಲ್ಲಿ 8 ಆಟಗಾರರು ಇರಲಿದ್ದಾರೆ. ಇಬ್ಬರು ಸೂಪರ್ ಗ್ರ್ಯಾಂಡ್ ಮಾಸ್ಟರ್ಸ್, ಇಬ್ಬರು ಭಾರತೀಯ ಗ್ರ್ಯಾಂಡ್ ಮಾಸ್ಟರ್ಸ್, ಇಬ್ಬರು ಮಹಿಳಾ ಗ್ರ್ಯಾಂಡ್ ಮಾಸ್ಟರ್ಸ್, ಭಾರತೀಯ ಜೂನಿಯರ್ ಬಾಲಕ ಹಾಗೂ ಬಾಲಕಿ ಪ್ರತಿ ತಂಡದಲ್ಲಿ ಇರಲಿದ್ದಾರೆ. 2 ವಾರಗಳ ಕಾಲ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಒಂದು ಇಲ್ಲವೇ ಎರಡು ನಗರಗಳಲ್ಲಿ ಲೀಗ್ ನಡೆಯಲಿದೆ ಎಂದು ಎಐಸಿಎಫ್ ತಿಳಿಸಿದೆ.