ಏಷ್ಯನ್ ಪ್ಯಾ ಗೇಮ್ಸ್‌ನಲ್ಲಿ ಮೂರು ಬಾರಿ ಚಿನ್ನದ ಪದಕ ಹೆದ್ದ ಜಾವಲಿನ್ ಪಟು ನೀರಜ್ ಯಾದವ್ ಶವವಾಗಿ ಪತ್ತೆಯಾಗಿದ್ದಾರೆ. ನೀರಜ್ ದುರಂತ ಸಾವು ಕ್ರೀಡಾಲೋಕಕ್ಕೆ ಆಘಾತ ನೀಡಿದೆ. ದಿಢೀರ್ ಸಾವು ಸಂಭವಿಸಿದ್ದು ಹೇಗೆ?

ನವದೆಹಲಿ (ಅ.28) ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅದ್ವೀತಿಯ ಸಾಧನೆ ಮೂಲಕ ಮೂರು ಚಿನ್ನದ ಪದಕ ಗೆದ್ದ ಜಾವಲಿನ್ ಪಟು ನೀರಜ್ ಯಾದವ್ ದುರಂತ ಅಂತ್ಯಕಂಡಿದ್ದಾರೆ. ನೀರಜ್ ಯಾದವ್ ಸಾವನ್ನು ಕೋಚ್ ಎಸ್ ಸತ್ಯನಾರಾಯಣ ಖಚಿತ ಪಡಿಸಿದ್ದಾರೆ. 42ರ ಹರೆಯದ ನೀರಜ್ ಯಾದವ್ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ನೀರಜ್ ಯಾದವ್ ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.

ದುಡುಕಿನ ನಿರ್ಧಾರ

ಮಂಗಳವಾರ ರಾತ್ರಿ (ಅ.27) ನೀರಜ್ ಯಾದವ್ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ನೀರಜ್ ಯಾದವ್ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೂರು ಬಾರಿ ಚಿನ್ನದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದ ಕ್ರೀಡಾಪಟು ಈ ನಿರ್ಧಾರ ತೆಗೆದುಕೊಳ್ಳಬಾರದು. ಘಟನೆಯಿಂದ ತೀವ್ರ ನೋವಾಗಿದೆ. ನೀರಜ್ ನಿರ್ಧಾರಕ್ಕೆ ಕಾರಣವೇನು ಅನ್ನೋದು ತಿಳಿದುಬಂದಿಲ್ಲ. ಕ್ರೀಡೆಯಲ್ಲಿ ಸೋಲು ಗೆಲುವು, ಹಲವು ಏರಿಳಿತಗಳು ಸಾಮಾನ್ಯ. ಇವೆಲ್ಲವನ್ನು ಕ್ರೀಡಾಪಟು ನಿಭಾಯಿಸಬೇಕು. ಆದರೆ ನೀರಜ್ ಯಾದವ್ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕೋಚ್ ಎಸ್ ಸತ್ಯನಾರಾಣಯ ಹೇಳಿದ್ದಾರೆ.

ದೆಹಲಿ ಪೊಲೀಸರು ಹೇಳಿದ್ದೇನು

ಘಟನೆ ಮಾಹಿತಿ ಬಂದ ತಕ್ಷಣವೇ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದೆ. ನೀರಜ್ ಯಾದವ್ ಅವರನ್ನು ದೆಹಲಿಯ ತೇಜ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆ ದಾಖಲಿಸುವ ಮುನ್ನವೇ ನೀರಜ್ ಯಾದವ್ ಮೃತಪಟ್ಟಿದ್ದರು. ಸಾವಿಗೆ ಕಾರಣ ಕುರಿತು ತನಿಖೆ ನಡೆಯುತ್ತಿದೆ. ನೀರಜ್ ಯಾದವ್ ಮನೆ ಪರಿಶೋಧನೆ ಮಾಡಲಾಗಿದೆ ಎಂದು ದೆಹಲಿ ಪೊಲೀಸ್ ಹೇಳಿದೆ.

ಡೋಪಿಂಗ್ ಪ್ರಕರಣದಿಂದ ಬೇಸತ್ತಿದ್ದ ನೀರಜ್

ಇತ್ತೀಚೆಗೆ ಜಪಾನ್‌ನಲ್ಲಿ ನಜೆಗ ಏಷ್ಯನ್ ಪ್ಯಾರಾ ಗೇಮ್ಸ್ ಕ್ರೀಡಾಕೂಟಕ್ಕೆ ನೀರಜ್ ಯಾದವ್ ಆಯ್ಕೆಯಾಗಿರಲಿಲ್ಲ. ಡೋಪಿಂಗ್ ಪ್ರಕರಣದಿಂದ ಅಮಾನತ್ತುಗೊಂಡಿದ್ದ ಕಾರಣ ನೀರಜ್ ಯಾದವ್ ಆಯ್ಕೆಯಾಗಿರಲಿಲ್ಲ. ಇದರಿಂದ ನೀರಜ್ ಯಾದವ್ ತೀವ್ರವಾಗಿ ಮನನೊಂದಿದ್ದರು ಎಂದು ಹೇಳಲಾಗುತ್ತಿದೆ. ತನ್ನದಲ್ಲದ ತಪ್ಪಿಗೆ ಏಷ್ಯನ್ ಪ್ಯಾರಾ ಗೇಮ್ಸ್ ಅವಕಾಶ ತಪ್ಪಿಸಿಕೊಂಡೆ ಎಂದು ನೀರಜ್ ಯಾದವ್ ನಿರಾಸೆಯಾಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ ದುಡುಕಿನ ನಿರ್ಧಾರಕ್ಕೆ ಇದೇ ಕಾರಣವೇ ಅನ್ನೋದು ಸ್ಪಷ್ಟವಾಗಿಲ್ಲ.

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 3 ಚಿನ್ನದ ಪದಕ

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ F55 ಕ್ಯಾಟಗರಿಯಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದಾರೆ. 2018ರ ಏಷ್ಯನ್ ಪ್ಯಾರ ಗೇಮ್ಸ್ ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದರು. 2023ರ ಪ್ಯಾರಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ನೀರಜ್ ಯಾದವ್ ಜಾವಲಿನ್ ಹಾಗೂ ಡಿಸ್ಕಸ್ ಥ್ರೋ ಎರಡಲ್ಲೂ ಚಿನ್ನದ ಪದಕ ಗೆದ್ದುಕೊಂಡಿದ್ದರು. ಈ ಮೂಲಕ ಮೂರು ಚಿನ್ನದ ಪದಕ ಸಾಧನೆ ಮಾಡಿದ್ದರು. 2026ರ ಏಷ್ಯನ್ ಗೇಮ್ಸ್‌ನಲ್ಲೂ ಚಿನ್ನದ ಪದಕ ಗೆಲ್ಲೋ ವಿಶ್ವಾಸದಲ್ಲಿದ್ದರು.