ಬೆಂಗಳೂರು(ಫೆ.11): ಇತ್ತೀಚೆಗಷ್ಟೇ ಚಂಢೀಗಢದಲ್ಲಿ ಮುಕ್ತಾಯವಾದ ಟಫ್‌ಮೆನ್‌ ಕ್ರೀಡಾಂಗಣ ಓಟದಲ್ಲಿ ಬೆಂಗಳೂರಿನ ಮ್ಯಾರಾಥಾನ್‌ ಓಟಗಾರ್ತಿ ಅಶ್ವಿನಿ, ಸತತ 12 ಗಂಟೆಗಳ ಕಾಲ ಓಡಿದ್ದಾರೆ. 

ಟೋಕಿಯೋಗೆ ಭಾರತದ 15 ಶೂಟರ್ಸ್; ರಿಜಿಜು ಅಭಿನಂದನೆ

ಈ ಅವಧಿಯಲ್ಲಿ ಅಶ್ವಿನಿ 112 ಕಿ.ಮೀ. ದೂರ ಕ್ರಮಿಸುವ ಮೂಲಕ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದ ದಾಖಲೆ ನಿರ್ಮಿಸಿದ್ದಾರೆ. 

ವಾರಕ್ಕೆ 150 ಐ ಫೋನ್ ಕೊಳ್ಳುವ ತಾಕತ್ತು ಇರುವವನ ಬಳಿ ಮುರುಕಲು ಫೋನು..!

ಅಶ್ವಿನಿ ಅವರ ಸಾಧನೆಯನ್ನು ಪರಿಗಣಿಸಿದ ಸಚಿವ ಎಸ್‌. ಸುರೇಶ್‌ ಕುಮಾರ್‌ ತಮ್ಮ ಟ್ವೀಟರ್‌ ಖಾತೆಯಲ್ಲಿ ಅಶ್ವಿನಿ ಅವರ ಫೋಟೋದೊಂದಿಗೆ ಕರ್ನಾಟಕ ರಾಜ್ಯದ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಬರೆದಿದ್ದಾರೆ.