ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟ, ಆಹಾರ ಹಬ್ಬ, 50 ದೇಶದ ವಿದ್ಯಾರ್ಥಿಗಳು ಭಾಗಿ!

ಅಲೈಯನ್ಸ್ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟ ಹಾಗೂ ಆಹಾರ ಹಬ್ಬ ಹೊಸ ಇತಿಹಾಸ ಬರೆಯಿತು. 50 ವಿವಿಧ ದೇಶಗಳ ವಿದ್ಯಾರ್ಥಿಗಳು, ಹೊಸ ಬಗೆಯ ಆಹಾರ, ಜನಪ್ರಿಯ ಕ್ರೀಡೆಗಳು ಮೇಳೈಸಿತು. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.
 

50 countries students participated in International Sports and food festival at Alliance University Bengaluru ckm

ಬೆಂಗಳೂರು(ಜು.26):  ನಗರದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಕ್ರೀಡಾಕೂಟ ಹಾಗೂ ಆಹಾರ ಹಬ್ಬದಲ್ಲಿ 50 ವಿವಿಧ ದೇಶಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಅಲೈಯನ್ಸ್ ವಿಶ್ವವಿದ್ಯಾಲಯ, ಫೆಡರೇಷನ್ ಅಫ್ ಇಂಟರ್ನ್ಯಾಷನಲ್ ಸ್ಟುಡೆಂಟ್ಸ್ - ಬೆಂಗಳೂರು ಸಂಸ್ಥೆ(IFSA-B) ವತಿಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರ್ ರಿಲೇಶನ್ಸ್ (ICCR)‌ ಸಂಸ್ಥೆ ಕೂಡ ಸಹಯೋಗ ಮಾಡಿರುವ ಕಾರಣ  ವಿಶ್ವ ಮಟ್ಟದಲ್ಲಿ ಪ್ರತಿಭೆಗಳ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸಿತ್ತು. FISA -B ಸಂಸ್ಥೆ ಸಕ್ರಿಯ, ದಾರ್ಶನಿಕ ಮತ್ತು ಸೃಜನಶೀಲ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವೈವಿಧ್ಯಮಯ ಸಮುದಾಯವಾಗಿದೆ.  ಅಂತರಾಷ್ಟ್ರೀಯ ಮಟ್ಟದ ವಿದ್ಯಾರ್ಥಿಗಳು ಶೈಕ್ಷಣಿಕ ಶ್ರೇಣಿಯ ವ್ಯಾಪ್ತಿ ಮತ್ತು ಸಂಶೋಧನೆ  ಶಿಸ್ತುನ್ನು ಬೆಂಗಳೂರಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಪ್ರದರ್ಶಿಸಿದ್ದಾರೆ. ,ಇಂಡಿಯನ್‌ ಕೌನ್ಸಿಲ್ ಫಾರ್ ಕಲ್ಚರ್ ರಿಲೇಶನ್ಸ್ ಸಹಯೋಗ ಪಡೆದು FISA-B ಸಂಸ್ಥೆ ಅಂತರಾಷ್ಟ್ರೀಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ, ಸಹಕಾರ ಮಾಡುವುದಲ್ಲದೇ ಅವರ ಕಲ್ಯಾಣವಾಗುವ ರೀತಿಯಲ್ಲಿ ಬೆಂಬಲ‌ ನೀಡಿದೆ.‌ FISA -B ಲಾಭರಹಿತ ಸ್ವಯಂಸೇವಕ ಸಂಸ್ಥೆಯಾಗಿದ್ದು, ಕೇವಲ ಪ್ರತಿಭೆ ಮತ್ತು ಕೌಶಲ್ಯಗಳನ್ನು  ಗುರುತಿಸುತ್ತದೆ ಅಲ್ಲದೇ  ಇದು ಎಲ್ಲಾ ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ಅಡೆತಡೆಗಳನ್ನು ಮೀರಿದೆ.

 ಜುಲೈ 23 ಹಾಗೂ 24  ರಂದು FISA-ball ‌ಆಯೋಜನೆ ಮಾಡಲಾಗಿತ್ತು, ಉದ್ಘಾಟನೆ ಸಮಾರಂಭ ಉಪಸ್ಥಿತಿ: ಶ್ರೀ ಅಭಯ್ , G ಚೆಬ್ಬಿ ,ಪ್ರೊ. ಚಾನ್ಸಲರ್, ಅಲೈಯನ್ಸ್ ವಿಶ್ವವಿದ್ಯಾಲಯ. ಡಾ. ಪುನೀತ್  ಕರಿಯಪ್ಪ ಪ್ರೊ. ವೈಸ್ ಚಾನ್ಸಲರ್( ವಿದ್ಯಾರ್ಥಿ ಆಡಳಿತ ಮತ್ತು ವ್ಯವಹಾರ). ಡಾ. ಸಮೀರ್ ರಂಜನ್ ಅಸೋಸಿಯೇಟ್ ಪ್ರೊ. ವೈಸ್ ಚಾನ್ಸಲರ್ (ಅಧ್ಯಯನ ಮತ್ತು ಸಂಶೋಧನೆ). ಡಾ. ಕಿರನ್ ಡೇನ್ನಿಸ್ ಗಾರ್ಡನರ್ , ಡೀನ್ ಅಲೈಯನ್ಸ್ ಸ್ಕೂಲ್‌ ಅಫ್ ಲಾ. ಡಾ. ರೀಬಾ ಕೋರ, ಡೀನ್ ಅಲೈಯನ್ಸ್ ಕಾಲೇಜ್ ಅಫ್ ಇಂಜಿನಿಯರಿಂಗ್ ಅಂಡ್ ಡಿಜೈನ್.  ಶ್ರೀ ಸುರೇಖಾ ಶೆಟ್ಟಿ, ಹಿರಿಯ ನಿರ್ದೇಶಕರು, ಅಡ್ಮೀಷನ್ಸ್, ಪ್ಲೇಸ್ಮೆಂಟ್ ಅಂಡ್ ಅಲಮ್ನಿ ರಿಲೇಶನ್ಸ್ ಮತ್ತು ಶ್ರೀ ಮೊಂಟೇಸರ್ ಮೊಹಮ್ಮದೆನ್ , ಅಧ್ಯಕ್ಷರು ,FISA-B.

ನೇಪಾಳದಲ್ಲಿ ಸುರಪುರದ ಬಿಲ್ವಿದ್ಯೆ ಪಟುಗಳ ಮಿಂಚು: ಬಡತನದಲ್ಲೆ ಅರಳಿದ ಪ್ರತಿಭೆಗಳಿಗೆ ರಾಜೂಗೌಡ ಶಹಬ್ಬಾಶ್

ಅಲೈಯನ್ಸ್ ವಿಶ್ವವಿದ್ಯಾಲಯ ಹಾಗೂ FISA-B ಮಧ್ಯೆ ಫುಟ್ಬಾಲ್ ಪಂದ್ಯದ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. ಹಾಗೆಯೇ ಚದುರಂಗ, ಪ್ಲೇ ಸ್ಟೇಷನ್ ಫುಟ್ಬಾಲ್, ಬಾಸ್ಕೆಟ್ ಬಾಲ್, ಟೇಬಲ್ ‌ಟೆನ್ನಿಸ್,‌ ತಗ್ ಆಫ್ ವಾರ್ , ಬ್ಯಾಡ್ಮಿಂಟನ್, ಸ್ನೂಕರ್ ಟೈರ್ ಫ್ಲಿಪ್, ವಾಲಿಬಾಲ್ , ಕ್ಯಾರೆಮ್ ಹಾಗೂ ಅಥ್ಕೇಟಿಕ್ ಕ್ರೀಡಾಕೂಟದ ಸ್ಪರ್ಧಾಳುಗಳ ಸಾಮರ್ಥ್ಯಕ್ಕೆ  FISA-B ಸಾಕ್ಷಿಯಾಯ್ತು.

FISA-ಬಾಲ್ 20 ಕ್ಕೂ ಹೆಚ್ಚು ದೇಶಗಳ ಪಾಕಪದ್ಧತಿಯನ್ನು ಪ್ರದರ್ಶಿಸುವ ಆಹಾರ ಉತ್ಸವವನ್ನು ಆಯೋಜಿಸಿದೆ. ಆಹಾರ ಉತ್ಸವದಲ್ಲಿ  ಪ್ರತಿನಿಧಿಗಳು ತಮ್ಮ ರಾಷ್ಟ್ರೀಯ, ಸಾಂಪ್ರದಾಯಿಕ ಮತ್ತು ಸ್ಥಳೀಯ ಪಾಕಪದ್ಧತಿಗಳನ್ನು ತಯಾರಿಸಿ ಪರಿಚಯಿಸುತ್ತಾರೆ.  ಸ್ಪರ್ಧೆಗಳ  ವಿಜೇತರಿಗಾಗಿ ಅಭಿನಂದನೆ ಮತ್ತು ಎಲ್ಲಾ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಮ್ಯೂಸಿಕಲ್ ನೈಟ್  ಕಾರ್ಯಕ್ರಮ ಆಯೋಜನೆ ನಂತರ ಎರಡು‌ ದಿನಗಳ ಸಂಪೂರ್ಣ ಕಾರ್ಯಕಮಕ್ಕೆ ತೆರೆ ಬೀಳಲಿದೆ.   FISA-ಬಾಲ್  ಶೈಕ್ಷಣಿಕ ವರ್ಷದ ಅತಿದೊಡ್ಡ ವಾರ್ಷಿಕ ಕಾರ್ಯಕ್ರಮ ರೂಪಿಸಿರುವ ಕಾರಣ,  ಸುಮಾರು 1500  ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. FISA-ಬಾಲ್‌ನಂತಹ ಈವೆಂಟ್‌ ವಿದ್ಯಾರ್ಥಿಗಳು ಸೃಜನಾತ್ಮಕತೆ ಅಳವಡಿಸಿಕೊಳ್ಳಲು ವೇದಿಕೆಯಾಗಿದೆ.

ಖೋಖೋ ಲೀಗಲ್ಲಿ ಮಿನುಗಲು ಸಜ್ಜಾದ ಆಟೋ ಡ್ರೈವರ್ ಪುತ್ರ ಗೌತಮ್‌

ಅಲೈಯನ್ಸ್ ವಿಶ್ವವಿದ್ಯಾಲಯ ಇಂತಹ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಬೆಂಗಳೂರಿನ ಮುಖ್ಯ ಕ್ಯಾಂಪಸ್ ನಲ್ಲಿ ವೇದಿಕೆ ಕಲ್ಪಿಸುವ ಮೂಲಕ ಹೆಮ್ಮೆ‌‌ ಪಡುತ್ತದೆ.  ಅಂತರಾಷ್ಟ್ರೀಯ ಮಟ್ಟದ ವಿದ್ಯಾರ್ಥಿಗಳ ಭೇಟಿಯಿಂದಾಗಿ ಕರ್ನಾಟಕ ಮಾತ್ರವಲ್ಲದೆ ಭಾರತದ ಕಲೆ, ಸಂಸ್ಕೃತಿಯ ಪರಿಚಯವಾಗಲಿದೆ.
 

Latest Videos
Follow Us:
Download App:
  • android
  • ios