2020ರಲ್ಲಿ ಟೆನಿಸ್‌ಗೆ ಪೇಸ್ ಗುಡ್‌ಬೈ!
ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ 2020ಕ್ಕೆ ವೃತ್ತಿಬದುಕಿಗೆ ಗುಡ್‌ಬೈ ಹೇಳುವುದಾಗಿ ತಿಳಿಸಿದ್ದಾರೆ. 1991ರಲ್ಲಿ ವೃತ್ತಿಪರ ಟೆನಿಸಿಗರಾಗಿ ಗುರುತಿಸಿಕೊಂಡ ಪೇಸ್ 2020ಕ್ಕೆ ವೃತ್ತಿ ಬದುಕಿಗೆ ತೆರೆ ಬೀಳಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ(ಡಿ.26): ಭಾರತದ ದಿಗ್ಗಜ ಟೆನಿಸಿಗ ಲಿಯಾಂಡರ್ ಪೇಸ್ 2020ರಲ್ಲಿ ತಮ್ಮ ವೃತ್ತಿಬದುಕನ್ನು ಅಂತ್ಯಗೊಳಿಸುವುದಾಗಿ ಬುಧವಾರ ಘೋಷಿಸಿದರು.
ಡೇವಿಸ್ ಕಪ್: ಪಾಕ್ ವಿರುದ್ಧ ಭಾರತ ಕ್ಲೀನ್ ಸ್ವೀಪ್
46 ವರ್ಷದ ಪೇಸ್, ಮುಂದಿನ ವರ್ಷ ಕೆಲ ಆಯ್ದ ಟೂರ್ನಿಗಳಲ್ಲಿ ಮಾತ್ರ ಆಡುವುದಾಗಿ ಹೇಳಿದ್ದಾರೆ. 18 ಗ್ರ್ಯಾಂಡ್‌ಸ್ಲಾಂ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿರುವ ಪೇಸ್, ಡೇವಿಸ್ ಕಪ್‌ನ ಇತಿಹಾಸದಲ್ಲಿ ಅತಿಹೆಚ್ಚು ಗೆಲುವು (44) ಸಾಧಿಸಿರುವ ಆಟಗಾರ ಎನ್ನುವ ದಾಖಲೆ ಹೊಂದಿದ್ದಾರೆ. ಇತ್ತೀಚೆಗಷ್ಟೇ ಅವರು 19 ವರ್ಷಗಳ ಬಳಿಕ ಮೊದಲ ಬಾರಿಗೆ ವಿಶ್ವ ರಾರಯಂಕಿಂಗ್‌ನಲ್ಲಿ ಅಗ್ರ 100ರಿಂದ ಹೊರಬಿದ್ದಿದ್ದರು.
ಟೆನಿಸ್ ರ‍್ಯಾಂಕಿಂಗ್: ಅಗ್ರ 100ರ ಪಟ್ಟಿ ಲಿಯಾಂಡರ್ ಪೇಸ್ ಔಟ್
1991ರಲ್ಲಿ ವೃತ್ತಿಬದುಕು ಆರಂಭಿಸಿದ್ದ ಪೇಸ್, 1996ರ ಅಟ್ಲಾಂಟಾ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. 1992ರಿಂದ 2016ರ ವರೆಗೂ ಸತತವಾಗಿ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಪೇಸ್, ಈ ಸಾಧನೆ ಮಾಡಿದ ಮೊದಲ ಹಾಗೂ ಏಕೈಕ ಟೆನಿಸ್ ಆಟಗಾರ ಎನ್ನುವ ದಾಖಲೆಗೆ ಪಾತ್ರರಾಗಿದ್ದರು.
ಲಿಯಾಂಡರ್ ಪೇಸ್ ಬಗೆಗಿನ ಕೆಲ ಅಪರೂಪದ ಮಾಹಿತಿಗಳು:
* 1991ರಲ್ಲಿ ವೃತ್ತಿಪರ ಟೆನಿಸಿಗನಾಗುವ ಮೊದಲೇ ಲಿಯಾಂಡರ್ ಪೇಸ್, ಜೂನಿಯರ್ ವಿಂಬಲ್ಡನ್ ಹಾಗೂ ಜೂನಿಯರ್ ಯುಎಸ್ ಓಪನ್ ಪ್ರಶಸ್ತಿ ಜಯಿಸಿದ್ದರು.
* 1996ರ ಅಟ್ಲಾಂಟ ಒಲಿಂಪಿಕ್ಸ್’ನಲ್ಲಿ ಫರ್ನಾಂಡೋ ಮೆಲಿಗಿನಿ ಅವರನ್ನು ಮಣಿಸಿ ಕಂಚಿನ ಪದಕವನ್ನು ಜಯಿಸಿದ್ದರು.
* 1996ರಲ್ಲಿ ಲಿಯಾಂಡರ್ ಪೇಸ್ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು. ಖೇಲ್ ರತ್ನ ಪ್ರಶಸ್ತಿ ಭಾರತ ಸರ್ಕಾರ ಕ್ರೀಡಾಪಟುಗಳಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ.
* ಲಿಯಾಂಡರ್ ಪೇಸ್ ಇದುವರೆಗೂ 18 ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ್ದು, ಅದರಲ್ಲಿ 8 ಪ್ರಶಸ್ತಿಗಳು ಪುರುಷರ ಡಬಲ್ಸ್ ವಿಭಾಗದಲ್ಲಿ ಬಂದಿದ್ದರೆ, ಇನ್ನು ಗ್ರ್ಯಾಂಡ್ ಸ್ಲಾಂಗಳು ಮಿಶ್ರ ಡಬಲ್ಸ್ ಪ್ರಶಸ್ತಿಗಳಾಗಿವೆ. ಪೇಸ್ ಕಡೆಯ ಬಾರಿಗೆ 2015ರ ಯುಎಸ್ ಓಪನ್ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಯನ್ನು ಮಾರ್ಟಿನಾ ಹಿಂಗೀಸ್ ಜತೆಗೂಡಿ ಜಯಿಸಿದ್ದರು.
* 1999ರಲ್ಲಿ ಪೇಸ್ ವೃತ್ತಿಬದುಕಿನ ಅತ್ಯುನ್ನತ ಫಾರ್ಮ್’ನಲ್ಲಿದ್ದರು. 1999ರಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಮಹೇಶ್ ಭೂಪತಿ ಜತೆ ಸೇರಿ ಪೇಸ್ ಎಲ್ಲಾ 4 ಗ್ರ್ಯಾಂಡ್ ಸ್ಲಾಂ ಫೈನಲ್ ಪ್ರವೇಶಿಸಿದ್ದರು. ನಾಲ್ಕು ಫೈನಲ್’ಗಳ ಪೈಕಿ ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಂ ಜಯಿಸಿದ್ದರು. ಇದರೊಂದಿಗೆ ಈ ಜೋಡಿ ಡಬಲ್ಸ್ ವಿಭಾಗದಲ್ಲಿ ನಂ.1 ಸ್ಥಾನಕ್ಕೇರಿತ್ತು.