ನವದೆಹಲಿ(ನ.12): ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್19 ವರ್ಷಗಳಲ್ಲಿ ಮೊದಲ ಬಾರಿಗೆ ಪುರುಷರ ಡಬಲ್ಸ್ ರ‍್ಯಾಂಕಿಂಗ್‌ನ ಅಗ್ರ 100ರ ಪಟ್ಟಿಯಿಂದ ಹೊರಬಿದ್ದಿದ್ದಾರೆ. 

ಡೇವಿಸ್ ಕಪ್: ರೋಹಿತ್ ಅಲ್ಲ ಈಗಲೂ ನಾನೇ ನಾಯಕ ಎಂದ ಭೂಪತಿ

ಸೋಮವಾರ ನೂತನವಾಗಿ ಪ್ರಕಟಗೊಂಡ ಎಟಿಪಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 5 ಸ್ಥಾನಗಳ ಇಳಿಕೆ ಕಂಡ ಪೇಸ್, 101ನೇ ಸ್ಥಾನದಲ್ಲಿದ್ದಾರೆ. ಈ ಹಿಂದೆ ಪೇಸ್ ಅಗ್ರ 100ರಿಂದ ಹೊರಗಿದ್ದಿದ್ದು ಅಕ್ಟೋಬರ್ 200ರಲ್ಲಿ. ಆಗ ಅವರು 118ನೇ ಸ್ಥಾನದಲ್ಲಿದ್ದರು. ರೋಹನ್ ಬೋಪಣ್ಣ (38) ಭಾರತೀಯರ ಪೈಕಿ ಗರಿಷ್ಠ ಸ್ಥಾನದಲ್ಲಿರುವ ಡಬಲ್ಸ್ ಆಟಗಾರ ಎನಿಸಿಕೊಂಡಿದ್ದಾರೆ. ದಿವಿಜ್ ಶರಣ್ (46) ಹಾಗೂ ಪೂರವ್ ರಾಜ (93) ಅಗ್ರ 100ರಲ್ಲಿದ್ದಾರೆ.

ಡೇವಿಸ್‌ ಕಪ್‌: ಪಾಕ್‌ಗೆ ತೆರ​ಳ​ಲಿ​ದ್ದಾರೆ ಪೇಸ್‌!

ಡೇವಿಸ್ ಕಪ್ ಪಂದ್ಯ ಸ್ಥಳಾಂತರಕ್ಕೆ ಪಾಕ್ ಬೇಸರ!

ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಪಂದ್ಯವನ್ನು ಇಸ್ಲಾಮಾಬಾದ್‌ನಿಂದ ತಟಸ್ಥ ಸ್ಥಳಕ್ಕೆ ಸ್ಥಳಾಂತರ ಮಾಡಿದಕ್ಕೆ ಪಾಕಿಸ್ತಾನ ಟೆನಿಸ್ ಫೆಡರೇಷನ್ ಬೇಸರ ವ್ಯಕ್ತಪಡಿಸಿದ್ದು, ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್)ಗೆ ಮೇಲ್ಮನವಿ ಸಲ್ಲಿಸಿದೆ. 

ಪಾಕ್ ಮೇಲ್ಮನವಿ ಸಲ್ಲಿಸಿದ ಬಳಿಕ ಐಟಿಎಫ್, ಭಾರತದ ನಿಲುವೇನು ಎಂದು ಪ್ರಶ್ನಿಸಿ ಸೋಮವಾರ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ)ಯನ್ನು ಸಂಪರ್ಕಿಸಿತು. ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಭದ್ರತಾ ಸಮಸ್ಯೆ ದೃಷ್ಟಿಯಿಂದ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಎಐಟಿಎ ಸ್ಪಷ್ಟಪಡಿಸಿದೆ. ನ.29, 30ರಂದು ಪಂದ್ಯ ನಡೆಯಬೇಕಿದೆ.