ಶಿವಣ್ಣಂಗೆ ಸಿಕ್ತು ಮೂಂಬಾ ಸ್ಟಾರ್​ ಪಟ್ಟ..ಕೊಟ್ಟಿದ್ದು ಯಾರು?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Nov 2018, 5:05 PM IST
shivarajkumar conferred with moomba star award from melbourne kannada sangha Australia
Highlights

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಮತ್ತೊಂದು ಬಿರುದು ದಕ್ಕಿದೆ. ಶಿವಣ್ಣರನ್ನು ಇನ್ನು ಮುಂದೆ ಮೂಂಬಾ ಸ್ಟಾರ್​ ಎಂದು ಕರೆಯಬಹುದಾಗಿದೆ.

ಮೆಲ್ಬೋರ್ನ್[ನ.11]  ಸೆಂಚುರಿ ಸ್ಟಾರ್​​, ಹ್ಯಾಟ್ರಿಕ್​ ಹೀರೋ, ಕರುನಾಡ ಚಕ್ರವರ್ತಿ ಡಾ.ಶಿವರಾಜ್​​ಕುಮಾರ್​​ಗೆ ಪ್ರೀತಿಯಿಂದ ಅಭಿಮಾನಿಗಳು ಸಾಕಷ್ಟು ಬಿರುದು ನೀಡಿದ್ದಾರೆ. ಈಗ ಅದಕ್ಕೆ ಮತ್ತೊಂದು ಸೇರ್ಪಡೆ. 

ಮೆಲ್ಬೋರ್ನ್​ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶವಣ್ಣ ಅವರಿಗೆ ಮೂಂಬಾ ಸ್ಟಾರ್​ ಅನ್ನೋ ಬಿರುದು ನೀಡಿ, ಅಲ್ಲಿನ ಕನ್ನಡಿಗರು ಸನ್ಮಾನ ಮಾಡಿದ್ದಾರೆ. ನವೆಂಬರ್​​ 10ನೇ ತಾರೀಖು ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ಹಬ್ಬದಲ್ಲಿ ಭಾಗಿಯಾಗಿ, ಅಲ್ಲಿ ಕನ್ನಡ ಭವನ ಉದ್ಘಾಟನೆ ಮಾಡಿದ ಕರುನಾಡ ಚಕ್ರವರ್ತಿಗೆ ಮೆಲ್ಬೋರ್ನ್​ ಕನ್ನಡಿಗರು ಸನ್ಮಾನಿಸಿದ್ದಾರೆ.

ಮೂಂಬಾ ಫೆಸ್ಟಿವಲ್ ಎಂದು ಕರೆಯಲ್ಪಡುವ ಈ ಕಾರ್ಯಕ್ರಮ ಆಸ್ಟ್ರೇಲಿಯಾದಲ್ಲಿ ಪ್ರತಿ ವರ್ಷ ನಡೆಯುತ್ತದೆ. ಸುಮಾರು ಮೂರರಿಂದ ನಾಲ್ಕು ದಿನಗಳ ಕಾಲ ನಡೆಯುವ ಈ ಉತ್ಸವವನ್ನು 1955ರಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಪತ್ನಿ ಗೀತಾ ಶಿವರಾಜ್​ಕುಮಾರ್​, ಟಗರು ನಿರ್ಮಾಪಕ ಕೆ.ಪಿ. ಶ್ರೀಕಾಂತ್​ ಹಾಗೂ ಆಪ್ತರ ಜೊತೆಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿರೋ ಶಿವಣ್ಣ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

loader