ಹೈವಾರ್ಡ್‌[ಜ. 21]  ಸಮುದ್ರದ ಆಚೆಗಿನ ಕನ್ನಡಿಗರೊಂದಿಗೆ ಶಿವರಾಜ್‌ ಕುಮಾರ್ ತಮ್ಮ ನೆನಪುಗಳನ್ನು ಹಂಚಿಕೊಂಡರು. ಶಿವರಾಜ್‌ ಕುಮಾರ್ ಅವರನ್ನು ಆದರದಿಂದ ಸ್ವಾಗತಿಸಿದ ಅನಿವಾಸಿ ಕನ್ನಡಿಗರು ಶಿವಣ್ಣ ಮಾತಿಗೆ ಕಿವಿಯಾದರು.

ಅಮೆರಿಕದಲ್ಲಿ ಕನ್ನಡ ಹಬ್ಬ, ನಾವಿಕ ಸಮ್ಮೇಳನಕ್ಕೆ ಈಗಿನಿಂದಲೇ ಸಿದ್ಧತೆ

ಕನ್ನಡಕೂಟದ ಸಂಕ್ರಾಂತಿ ಆಚರಣೆಯಲ್ಲಿ ಶಿವಣ್ಣ ಪಾಲ್ಗೊಂಡರು. ಜನವರಿ 19 ರಂದು ನಡೆದ ಹಬ್ಬದಲ್ಲಿ ಶಿವರಾಜ್ ಕುಮಾರ್ ಭಾಗವಹಿಸಿದ್ದರು. ಶಿವರಾಜ್ ಕುಮಾರ್ ಅವರೊಂದಿಗೆ ಮಕ್ಕಳು ಕಲೆತು ಸಂಭ್ರಮಿಸಿದರು.ಶಿವಣ್ಣ ಅವರೊಂದಿಗೆ ಕಳೆದ ಕ್ಷಣಗಳನ್ನು ಸುಬ್ಬು ಪದ್ಮನಾಭ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೀವು ಆ ಸಂಭ್ರಮದ ಪರಿ ನೋಡಿಕೊಂಡು ಬನ್ನಿ.