ಬೆಂಗಳೂರು[ಅ.22]  ಒಂದು ವಾರ ಕಾಲ  ದುಬೈನಲ್ಲಿ ಸರ್ಕಾರದ ಯಾವುದೇ ಗ್ರಾಹಕ ಸೇವಾ ಕೇಂದ್ರಗಳು ಸೇವೆ ನೀಡುವುದಿಲ್ಲ. ಕಂಪ್ಯೂಟರ್ ನೆಟ್ವರ್ಕ್ ಏನಾದರೂ ಹ್ಯಾಕ್ ಆಗಿದೆಯಾ? ನೌಕರರು ಮುಷ್ಕರದಲ್ಲಿದ್ದಾರಾ? ಯಾವುದೂ ಇಲ್ಲ.

ದುಬೈ ಸರ್ಕಾರ ಇನ್ನೊಂದೈದು ವರ್ಷದಲ್ಲಿ ಎಲ್ಲಾ ಸರ್ಕಾರೀ ಸೇವೆಗಳನ್ನು ಸಂಪೂರ್ಣವಾಗಿ ಆನ್-ಲೈನ್ ವ್ಯವಸ್ಥೆಗೆ ಬದಲಾಯಿಸಲಿದೆ. ಅದಕ್ಕೆ ಪೂರ್ವಭಾವಿಯಾಗಿ, ಜನರನ್ನು ಅದರೆಡೆಗೆ ಸೆಳೆಯಲು, ಸರ್ಕಾರಕ್ಕೆ ಸಲ್ಲಬೇಕಾದ ಫೀಸುಗಳನ್ನು ತಮ್ಮ ಆಪ್ ಹಾಗೂ ವೆಬ್ ಸೈಟುಗಳ ಮೂಲಕವೇ ಪಾವತಿಸಲು ಈ ಕ್ರಮ ತೆಗೆದುಕೊಂಡಿದೆ.

ಸರಕಾರಿ ಸೇವಾ ಕೇಂದ್ರಗಳು ಬಾಗಿಲು ಬಂದ್ ಮಾಡಿದಾಗ ಜನರೆಲ್ಲರೂ ಅನಿವಾರ್ಯವಾಗಿ ಮೊಬೈಲ್ ಮತ್ತು ವೆಬ್ ತಾಣಗಳ ಮೊರೆ ಹೋಗಬೇಕಾಗುತ್ತದೆ. ಬೆಂಗಳೂರು ಒನ್ ನಲ್ಲಿ ಪಾವತಿ ಮಾಡುವ  ರೀತಿಯ ಎಲ್ಲ ಬಿಲ್ ಗಳನ್ನು ಆನ್ ಲೈನ್ ಮೂಲಕವೇ ಭರ್ತಿ ಮಾಡಬೇಕಾಗುತ್ತದೆ.

ಈ ಮೊದಲು "A day without service centers" ಎಂಬ ಕ್ಯಾಂಪೇನ್ ನಡೆಸಿದ್ದ ಸರ್ಕಾರ ಈ ಬಾರಿ "A week without service centers" ನಡೆಸುತ್ತಿದೆ.  ಭಾರತದಲ್ಲಿ ಹೀಗೆ ಮಾಡಲು ಸಾಧ್ಯವೇ? ಮಾಡಿದ್ದರೆ ಯಾವ ಬಗೆಯ ಪ್ರತಿಭಟನೆಗಳನ್ನು ಎದುರಿಸಬೇಕಾಗಬಹುದು ಎಂಬುದನ್ನೆಲ್ಲ ನೀವೇ ಒಮ್ಮೆ ಯೋಚಿಸಿ!