ಕತಾರ್‌(ಮಾ.08): ಕನ್ನಡಿಗರ ಅಭಿವೃದ್ಧಿ, ಸಾಮಾಜಿಕ ಸೇವೆ, ಸಂಸ್ಕೃತಿಗಳ ಸಂಕೇತವಾಗಿರುವ ಅರಬ್ ದೇಶದಲ್ಲಿನ ಕತಾರ್ ಕರ್ನಾಟಕ ಸಂಘಕ್ಕೆ ನೂತನ ಆಡಳಿತ ಮಂಡಳಿ ರಚನೆ ಮಾಡಲಾಗಿದೆ. ಕಳೆದ 20 ವರ್ಷಗಳಿಂದ ಸಕ್ರಿಯವಾಗಿರುವ ಕನ್ನಡ ಸಂಘ ಕತಾರ್‌ಗೆ  ಮೈರ್ಪಾಡಿ ನಾಗೇಶ್ ರಾವ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:  ಅಮೆರಿಕಾದಲ್ಲಿ ಕನ್ನಡ ಸೊಗಡು; ತನ್ಮಯಿ ಕೃಷ್ಣಮೂರ್ತಿ ಕಂಠದಲ್ಲಿ 'ಕಗ್ಗ' ಕಂಪು

ಪೂರ್ವ ನಿಯೋಜಿತ ಸಮಿತಿಯನ್ನು ಅಧ್ಯಕ್ಷರಾಗಿದ್ದ ವೆಂಕಟರಾಯ ಹಾಗೂ  ಸಮ್ಮುಖದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಪ್ರತಿನಿಧಿ ಕೆ.ಎಂ ವರ್ಘೀಸ್ ಸಮ್ಮಖದಲ್ಲಿ ವಿಸರ್ಜಿಸಲಾಯಿತು. ಕತಾರ್ ಕರ್ನಾಟಕ ಸಂಘ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಒಂದು ಅಂಗಸಂಸ್ಥೆಯಾಗಿದೆ. ಕರ್ನಾಟಕ ನೆಲೆಸಿರುವ ಕರ್ನಾಟಕ ಮೂಲದವರ ವೈವಿಧ್ಯಮಯ ಸಂಘಟನೆಯಾಗಿ ಗುರುತಿಸಿಕೊಂಡಿದೆ. 

ಇದನ್ನೂ ಓದಿ:ಯುಎಸ್‌ಎ ಅರಿಜೋನದಾಗ ಉತ್ರ ಕರ್ನಾಟಕದ್ ಸುಗ್ಗಿ ಸಂಕ್ರಮಣ

ಈ ಸಂಘಟನೆ 800ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಸಾಂಸ್ಕೃತಿಕ, ಕ್ರೀಡೆ, ಸಾಮಾಜಿಕ ಕಳಕಳಿಯ ಕ್ರಾಯಕ್ರಮಗಳನ್ನು ಆಯೋಜಿಸುತ್ತಿದೆ.  ಹೊಸ ಆಡಳಿತ ಮಂಡಳಿಯಿಂದ ಮತ್ತಷ್ಟು ಚಟುವಟಿಕೆ ಆಯೋಜಿಸಲು ಸಜ್ಜಾಗಿದೆ.   

ಕತಾರ್ ಕನ್ನಡ ಸಂಘಟದ ನೂತನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ವಿವರ ಇಲ್ಲಿದೆ.
ಮೈರ್ಪಾಡಿ ನಾಗೇಶ್ ರಾವ್, ಅಧ್ಯಕ್ಷರು 
ಅನೀಲ್ ಕುಮಾರ್ ಬೋಲೂರ್, ಉಪಾಧ್ಯಕ್ಷರು 
ಮುರಳಿಧರ್ ರಮನಾಥ್ ರಾವ್, ಪ್ರಧಾನ ಕಾರ್ಯದರ್ಶಿ 
ಲಕ್ಕಪ್ಪ ಲಕ್ಕೇಗೌಡ, ಖಜಾಂಚಿ 
ಅಕ್ಷಯ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ 
ಸಂಜಯ್ ಕುದರಿ, ಕ್ರೀಡಾ ಕಾರ್ಯದರ್ಶಿ 
ಕಿಶೋರ್.ವಿ, ಜಂಟಿ ಕಾರ್ಯದರ್ಶಿ ಮತ್ತು ಕನ್ನಡ ಸಂಬಂಧಿತ ಸಂಚಾಲಕರು 
ಕುಮಾರಸ್ವಾಮಿ. ಸಿ.ಅರ್, ಪರಿಸರ ಮತ್ತು ಮಾಹಿತಿ ತಂತ್ರಜ್ಞಾನ ಸಂಚಾಲಕರು 
ಸುಶೀಲ ಸುನೀಲ್,  ಮಹಿಳಾ ಸಂಚಾಲಕರು  
ರಶ್ಮಿ ಜಯರಾಮಸ ಮಕ್ಕಳ ಮತ್ತು ವಿಷೇಶ ಅವಶ್ಯಕತೆಗಳ ಸಂಚಾಲಕರು  
ನೂರ್ ಅಹ್ಮದ್ಸ ಸದಸ್ಯತ್ವ ಮತ್ತು ನಿರ್ದೇಶಾಂಕ ಸಂಚಾಲಕರು 


  ಅಧ್ಯಕ್ಷರ ಕಿರುಪರಿಚಯ: ಶ್ರೀ ನಾಗೇಶ ರಾಯರು ಕತಾರಿನಲ್ಲಿ ಕಳೆದ 29 ವರ್ಷಗಳಿಂದ ವಾಸಿಸುತ್ತಿದ್ದು, ಕರ್ನಾಟಕ ಸಂಘ ಕತಾರಿನ ಸಂಸ್ಥಾಪಕ ಸದಸ್ಯರಲ್ಲೊಬ್ಬರು. ಪುತ್ತೊರು ಮೂಲದ ಇವರು, ಕತಾರಿನಲ್ಲಿ ಔಷದೀಯ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅತಿ ಹೆಚ್ಚು ಸದಸ್ಯರನ್ನು ಸಂಘದಲ್ಲಿ ಭರ್ತಿಮಾಡಿ, ಎಲ್ಲರನ್ನು ಕ್ರೀಡಾ, ಸಾಂಸ್ಕೃತಿಕ ಹಾಗೂ ಸಮಗ್ರ ಬೆಳವಣಿಗೆಯ ಹಾದಿಯಲ್ಲಿ ನಡೆಸಬೇಕೆಂಬ ಆಕಾಂಕ್ಷೆ ಹೊಂದಿದ್ದಾರೆ.