ದೋಹಾ, ಕತಾರ್ (ಏ. 16)  'ವಕ್ರಾಹ್’ದಲ್ಲಿನ ದೆಹಲಿ ಸರ್ವಜನಿಕ ಶಾಲೆಯ (ಡಿ.ಪಿ.ಎಸ್.) ಸಭಾಂಗಣದಲ್ಲಿ ತುಳು ಕೂಟ ಕತಾರಿನವರು ಆಯೋಜಿಸಿದ್ದ 19ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ, ತಮ್ಮ ನಿಸ್ವಾರ್ಥ ಸಮಾಜಸೇವೆಗಳಿಗೆ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರನ್ನು ಗೌರವಿಸಲಾಯಿತು.

 ಪ್ರತಿಷ್ಠಿತ ’ಆರ್ಯಭಟ’ ಪ್ರಶಸ್ತಿ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೆಬ್ಬಾಗಿಲು ಅವರಿಗೆ ಸನ್ಮಾನ ನೆರವೇರಿಸಲಾಯಿತು. ಚಿಂತಕ ಡಾ. ಪುರಷೋತ್ತಮ ಬಿಳಿಮಲೆ, ತುಳು ಕೂಟ ಕತಾರಿನ ಅಧ್ಯಕ್ಷರಾದ ಅಸ್ಮತ್ ಅಲಿ, ಕತಾರ್ ಕರ್ನಾಟಕ ಸಂಘದ ಉಪಾಧ್ಯಕ್ಷರಾದ ಶ್ರೀ ರವಿ ಶೆಟ್ಟಿ ಹಾಗೂ ಗೌರವಾನ್ವಿತ ಅತಿಥಿಗಳಾದ  ಸತೀಶ್  ಈ ವೇಳೆ ಹಾಜರಿದ್ದರು.

ಮತದಾನಕ್ಕೆ ವಿದೇಶದಿಂದ ಬಂದರು: ಮೋದಿಗಾಗಿ ANYTHING ಅಂದರು!

 ಸುಬ್ರಹ್ಮಣ್ಯ ಅವರು ಪ್ರಸ್ತುತ ’ಭಾರತೀಯ ಸಮುದಾಯ ಹಿತನಿಧಿ’ ಸಂಘಟನೆಯ ಜಂಟಿ ಕಾರ್ಯದರ್ಶಿಯಾಗಿ  ಕತಾರಿನಲ್ಲಿ ನೆಲೆಸಿರುವ ಭಾರತೀಯರ ಸೇವೆ ಮಾಡುತ್ತಿದ್ದಾರೆ.