ಬಾಗಲಕೋಟೆ(ಅ.5): ಸಾಧಿಸೋ ಛಲವೊಂದಿದ್ರೆ ಸಾಕು ಬದುಕಿನಲ್ಲಿ ಏನೆಲ್ಲಾ ಸಾಧಿಸಬಹುದು, ಇನ್ನು  ಸಾಧನೆಗೆ ವಯಸ್ಸಿನ ಮಿತಿಯೇನು ಬೇಕಿಲ್ಲ. ಹೌದು,  ಮೂಲತಃ  ಬಾಗಲಕೋಟೆ ಜಿಲ್ಲೆಯ 14 ವರ್ಷದ ಬಾಲಕಿಯೊಬ್ಬಳು ಆಸ್ಟ್ರೇಲಿಯಾ ದಲ್ಲಿ ಸಮರ್ಥವಾಗಿ ಫೈಲೇಟ್  ತರಬೇತಿ ಪಡೆದುಕೊಂಡು ಲೋಹದಹಕ್ಕಿ  ಚಾಲನೆ ಮಾಡಲು ಸಜ್ಜಾಗಿದ್ದಾಳೆ. ಅಕೆ ಯಾರು? ಆಕೆ ಸಾಧನೆಯಾದ್ರೂ ಏನು?. ಇಲ್ಲಿದೆ ಮಾಹಿತಿ.

ಈಕೆಯ ಹೆಸರು ಪ್ರೀತಿಕಾ ಗಾಣಿಗೇರ. ಹುಟ್ಟಿದ್ದು ಆಸ್ಟ್ರೇಲಿಯಾದಲ್ಲಿ. ಈಕೆಯ ತಂದೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಕುಂದರಗಿ ಗ್ರಾಮದ  ವೆಂಕಟೇಶ್ ಗಾಣಗೇರ ಎಂಬುವರು  ಆಸ್ಟ್ರೇಲಿಯಾದ  ಅಡಿಲೇಡ್ ನಲ್ಲಿ  ಇಂಜಿನಿಯರ್ ಆಗಿ ಕೆಲ್ಸ ಮಾಡ್ತಿದ್ದಾರೆ. ಇವರ ಮಗಳೇ 9ನೇ ತರಗತಿ ವಿದ್ಯಾರ್ಥಿನಿ ಪ್ರೀತಿಕಾ ಗಾಣಿಗೇರ ಚಿಕ್ಕ ವಯಸ್ಸಿನಲ್ಲಿಯೇ ಪೈಲಟ್ ಆಗಿ ಹೊರ ಹೊಮ್ಮುತ್ತಿದ್ದಾಳೆ.

ಪ್ರತಿಮಾ 8ನೇ ವಯಸ್ಸಿನಿಂದ ಏರ್ ಲೀಗ್ ಎಂಬ ಪ್ರೈಮರಿ ಸ್ಕೂಲ್ ಆಫ್​​ ಏವಿಯೇಷನ್ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದು, ಸತತ 6 ವರ್ಷಗಳಿಂದ ಫೈಲೇಟ್ ತರಬೇತಿ ಯಲ್ಲಿ ಕರಗತಳಾಗಿದ್ದು, ಸಾಲದ್ದಕ್ಕೆ ಕೆಡಿಟ್,ಕಾಪ್ರೆಲ್,ಸಾರಜೆಂಟ್,,ಫಸ್ಟ್ ಆಫೀಸರ್, ಸೆಕೆಂಡ ಆಫೀಸರ್ ಫೈಲೇಟ್ ವಿಭಾಗದಲ್ಲಿ ಅತೀ ಚಿಕ್ಕ ವಯಸ್ಸಿನಲ್ಲೇ ಸಾಮರ್ಥ್ಯ ತೋರಿದ್ದಾಳೆ. ಸದ್ಯ ವಿಮಾನಗಳನ್ನು ಹಾರಾಡಿಸುವ ಸಾಮರ್ಥ್ಯ ಹೊಂದಿದ್ದಾಳೆ. ಚಿಕ್ಕಂದಿನಿಂದಲೇ ಪೈಲೆಟ್ ಆಗಬೇಕೆಂಬ ಕನಸು ಹೊತ್ತು ಬಂದಿದ್ದೇನೆ ಅಂತಾಳೆ ವಿದ್ಯಾರ್ಥಿನಿ ಪ್ರೀತಿಕಾ.
    
ಇನ್ನು ಬ್ರೈಟನ್ ಸೆಕೆಂಡರಿ ಸ್ಕೂಲ್‌ನಲ್ಲಿ ಒಂಬತ್ತನೇ ತರಗತಿ ಓದುತ್ತಿರೋ ಈಕೆ ಇನ್ನು ಎರಡು ವರ್ಷದಲ್ಲಿ ಅಧಿಕೃತವಾಗಿ ಪೈಲಟ್ ಲೈಸನ್ಸ್ ಹೊಂದಲಿದ್ದಾಳೆ.ಆಸ್ಟ್ರೇಲಿಯಾ ಸರ್ಕಾರದಿಂದ ಸ್ಕಾಲರ್​ಶಿಪ್​​ ಪಡೆದು ತರಬೇತಿ ಪಡೆಯುತ್ತಿರೋ ಪ್ರೀತಿಕಾ ಅತೀ ಚಿಕ್ಕ ವಯಸ್ಸಿನಲ್ಲೇ ಪೈಲಟ್ ಆಗಿ ಆಕಾಶದಲ್ಲಿ ಹಾರಾಡಲಿದ್ದಾಳೆ. 

ಇತ್ತ ಪ್ರೀತಿಕಾ ಆಡಿಲೇಡ್ ನಲ್ಲೇ ಹುಟ್ಟಿ ಬೆಳೆದಿದ್ದರೂ ಸಹ ಮುಂದಿನ ದಿನಗಳಲ್ಲಿ ಭಾರತ ದೇಶದ ಹೆಣ್ಣುಮಕ್ಕಳಿಗಾಗಿ ಫೈಲಟ್ ತರಬೇತಿ ಶಾಲೆ ಆರಂಭಿಸಬೇಕು. ನಾಸಾದಲ್ಲಿ ಏರೊನಾಟಿಕಲ್ ವಿಭಾಗದಲ್ಲಿ ಕೆಲಸ ಮಾಡುವ ಕನಸು ಕಟ್ಟಿಕೊಂಡಿದ್ದಾಳಂತೆ. ಸದ್ಯ ತಾಯಿ ತವರು ಮನೆ ಬಾಗಲಕೋಟೆ ನಗರಕ್ಕೆ ತಾಯಿ ಸಮೇತ ಭೇಟಿ ನೀಡಿದ್ದಾಳೆ. ಇತ್ತ ಪ್ರೀತಿಕಾ ಸಾಹಸ ಮತ್ತು ಸಾಧನೆ ಕುಟುಂಬಸ್ಥರಿಗೆ‌ ಇನ್ನಿಲ್ಲದ ಹರ್ಷ ಮೂಡಿಸಿದೆ.


   
ಒಟ್ಟಿನಲ್ಲಿ  ವಿದೇಶದಲ್ಲಿ ಭಾರತೀಯ ಮೂಲದ ಕುಟುಂಬದ ವಿದ್ಯಾಥಿ೯ನಿಯೊಬ್ಬಳು ಇದೀಗ ಅತೀ ಕಿರಿಯ ವಯಸ್ಸಿನಲ್ಲೇ ಪೈಲೆಟ್ ಆಗ್ತಿರೋದಕ್ಕೆ ಕನ್ನಡಿಗರಿಗೆ ಸಂತಸವಾಗಿದ್ದು, ಸಾಲದ್ದಕ್ಕೆ  ಬಾಗಲಕೋಟೆ ಜಿಲ್ಲೆಯ ಕೀರ್ತಿ ಮತ್ತಷ್ಟು ಹೆಚ್ಚಾದಂತಾಗಿದೆ.