ದುಬೈ(ಸೆ.19]: ಮಂಗಳೂರು ಮೂಲದ ಬ್ಯಾರಿ ಚೆಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಸ್ (ಬಿಸಿಸಿಐ)ಯು ಯುಎಇಯಲ್ಲಿ ತನ್ನ ಹೊಸ ಶಾಖೆಯನ್ನು ಆರಂಭಿಸಲು ಮುಂದಾಗಿದೆ.

ಬಿಸಿಸಿಐ ಅಧ್ಯಕ್ಷ ಹಾಜೀ ಎಸ್. ಎಂ. ರಶೀದ್ ಕಾರ್ಯಕ್ರಮದ ಜವಾಬ್ದಾರಿ ಹೊತ್ತಿದ್ದರೆ ವಸತಿ ಸಚಿವ ಯು.ಟಿ. ಖಾದರ್, ಎಂಎಲ್‌ ಸಿ ಬಿ.ಎಂ.ಫಾರುಕ್, ತುಂಬೆ ಮೊಯ್ದೀನ್, ಎನ್‌ ಆರ್ ಐ ಉದ್ಯಮಿಗಳಾದ ಅಬ್ದುಲ್ ಲತೀಫ್, ಮಹಮದ್ ಮಾನ್ಸೂರ್ ಮತ್ತಿತರರು ಭಾಗವಹಿಸಲಿದ್ದಾರೆ.

ಸೆಪ್ಟೆಂಬರ್ ಆರಂಭದಲ್ಲಿ ದುಬೈನಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು ಡಾ.ಬಿ.ಕೆ.ಯುಸಫ್, ಇಮ್ರಾನ್ ಅಹಮದ್, ಮಹಮದ್ ಅಲಿ ಉಚ್ಚಿಲ್, ಎಸ್.ಎಂ. ಬಷೀರ್ ಭಾಗವಹಿಸಿದ್ದರು. ಅಬ್ದುಲ್ ಮಡಮೂಳೆ, ಎಂ.ಇ.ಮಲ್ಲೂರು, ಹಿದಾಯಿತುಲ್ಲಾ, ಮೋಯಿದ್ದೀನ್ ಕುಟ್ಟಿ ಹಾಜಿ, ಅಲ್ತಾಫ್ ಡೈಮಂಡ್ ಲೀಸ್, ಅಬ್ದುಲ್ ರವೂಫ್, ತನ್ವೀರ್ ರಝಾಕ್, , ಸಿದ್ದಿಕ್ ಉಚ್ಚಿಲ್, ಮೊಹಮದ್ ಇಬ್ರಾಹಿಂ ಸಹ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.