Asianet Suvarna News Asianet Suvarna News

ಒಕ್ಕಲಿಗ ಸಮಾವೇಶದಲ್ಲಿ ಗಣ್ಯರ ಗುಂಪು, ಅಮೆರಿಕದಲ್ಲಿ ಕುವೆಂಪು ಸಾಲುಗಳ ಕಂಪು

ಅಮೆರಿಕ ಪ್ರವಾಸದಲ್ಲಿರುವ ಸಿಎಂ ಕುಮಾರಸ್ವಾಮಿ ಒಕ್ಕಲಿಗರ ಪರಿಷತ್ ಅಮೆರಿಕಾದ ಸಮಾವೇಶವದ ಉದ್ಘಾಟನೆ ಮಾಡಿದ್ದಾರೆ.

cm-hd-kumaraswamy in-vokkaligara-parishat-of-america-convention New Jersey
Author
Bengaluru, First Published Jul 5, 2019, 11:17 PM IST

ನ್ಯೂಜರ್ಸಿ[ಜು. 05]  ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಅಮೆರಿಕಾದ ನ್ಯೂಜೆರ್ಸಿ ಯಲ್ಲಿ ಒಕ್ಕಲಿಗರ ಪರಿಷತ್ ಅಮೆರಿಕಾದ ಸಮಾವೇಶವನ್ನು ಉದ್ಘಾಟಿಸಿದರು.

ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷ  ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೆಗೌಡ ಹಾಗೂ ಪರಿಷತ್ತಿನ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಅಮೆರಿಕ ಒಕ್ಕಲಿಗ ಸಮಾವೇಶದ ವಿಶೇಷಗಳೇನು? 

ಒಕ್ಕತನ, ಒಕ್ಕಲುತನ, ಒಕ್ಕು ಎನ್ನವುದಕ್ಕೆ ಕೂಡಿ ಬಾಳುವೆ ಮಾಡು, ಬೇಸಾಯಗಾರ-ಬೆಳೆಯಿಂದ ಕಸಕಡ್ಡಿಗಳನ್ನು ಬೇರ್ಪಡಿಸು ಎನ್ನುವ ಅರ್ಥವನ್ನು ರತ್ನಕೋಶ ಹೇಳುತ್ತದೆ.
ಇವೆಲ್ಲವೂ ಒಕ್ಕಲಿಗ ಸಮುದಾಯದ ಒಟ್ಟಾರೆ ಆಶಯವನ್ನು ಬಿಂಬಿಸುತ್ತವೆ. ಕೂಡಿ ಬಾಳುವ ಮನದ; ಸಮಾಜದ ನಿರರ್ಥಕತೆಯಿಂದ ಸಾರ್ಥಕತೆಯನ್ನು ಹೆಕ್ಕಿ ತೆಗೆಯುವ ಕೃಷಿಕ ಸಮುದಾಯವೇ ಒಕ್ಕಲಿಗ ಸಮುದಾಯ ಎಂದು ಕುಮಾರಸ್ವಾಮಿ ಬಣ್ಣಿಸಿದ್ದಾರೆ.

ಕೃಷಿಯೊಂದೇ ಅಲ್ಲ. ಶಿಕ್ಷಣ, ಸಾಹಿತ್ಯ, ಸಮಾಜ ವಿಜ್ಞಾನ, ವಿಜ್ಞಾನ, ಯಾವ ಕ್ಷೇತ್ರ ತೆಗೆದುಕೊಂಡರೂ ನಾನು ಮೇಲೆ ಹೇಳಿದ ಎಲ್ಲ ಅರ್ಥಗಳನ್ನೂ ರೂಢಿಸಿಕೊಂಡು ಬಂದವರೆಲ್ಲ ಒಕ್ಕಲಿಗ ಸಮುದಾಯದವರು. ಈ ಹಿನ್ನೆಲೆಯಲ್ಲಿ ‘ವಿಶ್ವ ಮಾನವ’ ತತ್ವವನ್ನೇ ವಂಶವಾಹಿಯಾಗಿಸಿಕೊಂಡ ಎಲ್ಲ ಸಮುದಾಯಗಳೂ ಒಕ್ಕಲಿಗ ಸಮುದಾಯಗಳೇ.  ವಿಶ್ವಸಮುದಾಯ ಎಂಬುದೊಂದಿದ್ದರೆ ಅದು ನಿಶ್ಚಯವಾಗಿಯೂ ಒಕ್ಕಲಿಗರದ್ದು. ನಮ್ಮ ರಾಷ್ಟ್ರಕವಿ ಕುವೆಂಪು ಅವರು ನಮಗೊಂದು ದಿವ್ಯಮಂತ್ರವನ್ನೇ ಉಪದೇಶಿಸಿದ್ದಾರಲ್ಲ.  ಮನುಜ ಮತ-ವಿಶ್ವಪಥ ಎನ್ನುವ ಬೆಳ್ಳಿ ಬೆಳಕದಾರಿ ತುಳಿದಿರುವ ವಿಶ್ವ ಒಕ್ಕಲಿಗರ ಸಮುದಾಯದ ಮುಖವಾಣಿ ಒಕ್ಕಲಿಗರ ಪರಿಷತ್ ಮೂಲಕ ಮನುಜ ಮತದಿಂದ ವಿಶ್ವಪಥದ ಕಡೆ ಸಾಗಿರುವ ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆ ಎಂದರು.

ನಾವೆಲ್ಲ ಸೇರಿ ಎಲ್ಲ ಜಾತಿ ಧರ್ಮ ಶ್ರದ್ಧೆಗಳ ಜನರೂ ಸಾಮರಸ್ಯದಿಂದ ಬದುಕುವ ಒಂದು ಸುಂದರ ತೋಟವಾಗಿ ಕರ್ನಾಟಕವನ್ನು ಕಟ್ಟೋಣ. ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರ ಉದ್ಯಾನವನವಾದ ಕರ್ನಾಟಕದ ಹಿರಿಮೆಗೆ ಎಂದೂ ಕುಂದು ಬಾರದಂತಹ ವಾತಾವರಣ ನಿರ್ಮಿಸೋಣ.  ಇದು ನಮ್ಮ ಕರ್ತವ್ಯವಾಗಲಿ ಮತ್ತು ನಾವು ಕೈಗೊಳ್ಳಬೇಕಾದ ಪ್ರಮಾಣವೂ ಆಗಲಿ ಎಂಬ ಆಶಯ ವ್ಯಕ್ತಪಡಿಸಿದರು.

Follow Us:
Download App:
  • android
  • ios