ಕರ್ನಾಟಕದ ಸಿಂಗಂ ಎಂದೇ ಹೆಸರಾಗಿರುವ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಹುದ್ದೆಗೆ ದಿಢೀರ್ ರಾಜಿನಾಮೆ ಕೊಟ್ಟಿದ್ದಾರೆ.  ಇದು ಸಾರ್ವಜನಿಕ ವಲಯಕ್ಕೆ ಆಘಾತ ಮೂಡಿಸಿದೆ. ದಕ್ಷತೆ, ಪ್ರಾಮಾಣಿಕತೆಯಿಂದ ತಮ್ಮದೇ ಆದ ಛಾಪು ಮೂಡಿಸಿದ್ದ ಅತ್ಯಂತ ಖಡಕ್ ಅಧಿಕಾರಿ. ಭ್ರಷ್ಟರಿಗೆ, ಕಳ್ಳರಿಗೆ, ರೌಡಿಗಳ ಪಾಲಿಗೆ ಸಿಂಹ ಸ್ವಪ್ನರಾಗಿದ್ದರು. ಇವರ ಕಾರ್ಯ ವೈಖರಿ ಮೆಚ್ಚುಗೆಗೆ ಪಾತ್ರವಾಗಿತ್ತು.  

ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ರೋಹಿಣಿ, ಅಣ್ಣಾಮಲೈರಿಂದ ಅಧಿಕಾರ ಹಸ್ತಾಂತರ

ಅಣ್ಣಾಮಲೈಗೆ ಅಭಿಮಾನಿಗಳ ಬಳಗಕ್ಕೆ ಇವರ ರಾಜಿನಾಮೆ ಅಸಮಾಧಾನ ತಂದಿದೆ. ಬಬ್ರೇನ್ ನಲ್ಲಿರುವ ಇವರ ಅಭಿಮಾನಿಯೊಬ್ಬ ಅವರ ಸಾಧನೆ ಬಗ್ಗೆ ಹಾಡೊಂದನ್ನು ರಚಿಸಿ ಅಣ್ಣಾಮಲೈಗೆ ಡೆಡಿಕೇಟ್ ಮಾಡಿದ್ದಾರೆ. ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.  

"

ಮಂಗಳೂರಿನ ವಿಟ್ಲ ಮೂಲದ Safwan Sha ಎಂಬುವವರು ಬಹ್ರೇನ್ ನಲ್ಲಿ ಒಂದು ಕಂಪನಿಯಲ್ಲಿ ಬ್ರಾಂಚ್ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಅಣ್ಣಾಮಲೈ ಅಭಿಮಾನಿ. ಇವರು ಬರೆದಿರುವ ಹಾಡು ಅಣ್ಣಾಮಲೈ ಮೇಲಿನ ಅಭಿಮಾನವನ್ನು, ಹೆಮ್ಮೆಯನ್ನು ಇನ್ನಷ್ಟು ಜಾಸ್ತಿ ಮಾಡುವುದರಲ್ಲಿ ಅನುಮಾನವೇ ಇಲ್ಲ. 

ಈ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಸಫ್ವಾನ್ ಶಾ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ ಮಾತಿದು. ‘ನನಗೆ ಅಣ್ಣಾಮಲೈ ಮೇಲೆ ಬಹಳ ಗೌರವ, ಅಭಿಮಾನ ಇದೆ. ಒಮ್ಮೆ ಭಾರತಕ್ಕೆ ಬಂದಾಗ ಅವರನ್ನು ಭೇಟಿ ಮಾಡಿದೆ. ಆಗ ಅವರು ನಡೆದುಕೊಂಡ ರೀತಿ ನನ್ನನ್ನು ಇಂಪ್ರೆಸ್ ಮಾಡ್ತು. ಅವರು ರಾಜಿನಾಮೆ ಕೊಟ್ಟಿದ್ದು ನನಗೆ ಬೇಸರ ತಂದಿದೆ. ಇನ್ನಷ್ಟು ಕಾಲ ಸೇವೆಯಲ್ಲಿರಬೇಕಿತ್ತು. ಅವರ ಸೇವೆಯನ್ನು ಕರ್ನಾಟಕದ ಜನರು ಮಿಸ್ ಮಾಡಿಕೊಳ್ಳಲಿದ್ದಾರೆ’ ಎಂದರು.

ಅಣ್ಣಾಮಲೈ ಸರ್ ರಾಜಿನಾಮೆ ಕೊಟ್ಟಾಗ ನಾನು ಕಾಲ್ ಮಾಡಿದ್ದೆ. ಆಗುವುದೆಲ್ಲಾ ಒಳ್ಳೆಯದಕ್ಕೆ ಸಫ್ವಾನ್ ಅವರೇ. ಡೋಂಟ್ ವರಿ ಎಂದ್ರು. ಇಷ್ಟೊಂದು ಒಳ್ಳೆಯ ದಕ್ಷ ಅಧಿಕಾರಿಗೆ  ನಾನು ಏನಾದರೂ ಡೆಡಿಕೇಟ್ ಮಾಡಬೇಕು ಅನಿಸ್ತು. ಆಗ ನಾನು ಬರೆದ ಹಾಡಿದು.ಇದನ್ನು ಅಣ್ಣಾಮಲೈ ಸರ್ ಗೆ ಕಳಿಸ್ದೆ. ಅವರಿಗೆ ತುಂಬಾ ಖುಷಿಯಾಯ್ತು’  ಎಂದರು.