ನ್ಯೂಯಾರ್ಕ್[ಸೆ. 09] ಇವರು ನಿಜವಾಗಿಯೂ ಬೆಂಕಿ ಬಸಣ್ಣ..ಅಮೆರಿಕದಲ್ಲಿ ಬಾಲ ಬಿಚ್ಚಲು ಮುಂದಾದ ಪಾಕಿಸ್ತಾನದ ಬೆಂಬಲಿಗರಿಗೆ ಬಿಸಿ ಮುಟ್ಟಿದಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿ ರದ್ದು ಮಾಡಿದ ಭಾರತ ಸರ್ಕಾರದ ಕ್ರಮ ಖಂಡಿಸಿ, ಭಾರತೀಯ ಸೇನೆ ಜಮ್ಮು ಕಾಶ್ಮೀರದಲ್ಲಿ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆಗೆ ಮುಂದಾಗಿದ್ದವರ ಬಲವನ್ನು ಬಸಣ್ಣ ಅಡಗಿಸಿದ್ದಾರೆ.

ಕಾಶ್ಮೀರದಲ್ಲಿ ನಿರ್ಬಂಧ ವಾಪಸ್‌; ಶ್ರೀನಗರ ಡಿಸಿ ಏನ್ ಹೇಳ್ತಾರೆ ಓದಿ!

ಅಮೆರಿಕದ ನ್ಯೂಯಾರ್ಕ್ ನಲ್ಲಿ ಪಾಕಿಸ್ತಾನದ ಸಂಘಟನೆ ಪ್ರತಿಭಟನೆಗೆ ಕರೆ ಕೊಟ್ಟಿತ್ತು. ಅಮೆರಿದಲ್ಲಿ ನೆಲೆಸಿರುವ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಬಸಣ್ಣ ಪಾಕಿಸ್ತಾನದ ಬೆಂಬಲಿಗರಿಗೆ ಸಿಂಹ ಸ್ವಪ್ನವಾದರು.

ಅಮೆರಿಕದಲ್ಲಿ ನಾವಿಕ ಕನ್ನಡ ಸಮ್ಮೇಳನದ ಸಂಭ್ರಮ ಹೀಗಿತ್ತು?

ಟ್ರೈಸಿಟಿ ಇಂಡಿಯಾ ಸಂಘಟನೆಯ ಮಾಜಿ ಅಧ್ಯಕ್ಷರೂ ಆಗಿರುವ ಬಸಣ್ಣ ಕೆಲ ಭಾರತೀಯ ಸಂಘಟನೆಗಳೊಂದಿಗೆ ಸೇರಿ ಪ್ರತಿಭಟನೆ ಯಶಸ್ವಿಯಾಗದಂತೆ ನೋಡಿಕೊಂಡರು. ಅಮೆರಿಕದಲ್ಲಿ ನೆಲೆಸಿರುವ ಎಲ್ಲ ಭಾರತೀಯರ ಸಹಕಾರ ಪಡೆದುಕೊಂಡ ಬಸಣ್ಣ ಮೊದಲು ಜಾಗೃತಿ ಮೂಡಿಸಿದರು. ಸ್ಥಳೀಯ ಸೆಮೆಟರ್ ಗಳನ್ನು, ಕಾಂಗ್ರೆಸ್ ಅನ್ನು ಸಂಪರ್ಕಿಸಿ ಭಾರತದ ಮೇಲೆ ಗೂಬೆ ಕೂರಿಸುವ ಯತ್ನ ವಿಫಲ ಮಾಡಿದರು. 

ಬೆಂಕಿ ಬಸಣ್ಣ ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ದೂರದ ಅಮೆರಿಕಾದಲ್ಲಿಯೂ ಭಾರತದ ಹಿರಿಮೆಯನ್ನು ಕಾಪಾಡಿದ ಬೆಂಕಿ ಬಸಣ್ಣ ಮತ್ತು ಅವರ ತಂಡಕ್ಕೆ ನಮ್ಮೆಲ್ಲರ ಕಡೆಯಿಂದ ಅಭಿನಂದನೆ.

"