ಬೆಂಗಳೂರು (ಮಾ. 29): ಉತ್ತರ ಅಮೆರಿಕ ವಿಶ್ವ ಕನ್ನಡ ಸಂಘಟನೆ (ನಾವಿಕ) ಆಶ್ರಯದಲ್ಲಿ ಆ.30 ರಿಂದ ಸೆ.1 ರವರೆಗೆ ‘ಐದನೇ ವಿಶ್ವ ಕನ್ನಡ ಆ.30 ರಿಂದ ಅಮೆರಿಕಾ ವಿಶ್ವ ಕನ್ನಡ ಸಮ್ಮೇಳನ ಸಮ್ಮೇಳನ’ವನ್ನು ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ಆಯೋಜಿಸಲಾಗಿದೆ.

ಸಮ್ಮೇಳನದ ಮುಖ್ಯಸ್ಥ ಡಾ.ಮನಮೋಹನ್ ಕಟ್ಟಪಾಡಿ ಮಾತನಾಡಿ, ಮೂರು ದಿನ ನಡೆಯುವ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್, ನಟ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ವಿವಿಧ ದೇಶಗಳ ಪ್ರತಿನಿಧಿಗಳು ಮತ್ತು ರಾಜ್ಯದಿಂದ ಹಲವು ಗಣ್ಯರು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್, ನೃತ್ಯ ಕಲಾವಿದರಾದ ನಿರುಪಮಾ ಮತ್ತು ರಾಜೇಂದ್ರ, ಹಾಸ್ಯ ಭಾಷಣಕಾರರಾದ ಕೃಷ್ಣೇಗೌಡ, ರಿಚರ್ಡ್ ಲೂಯಿಸ್, ಪ್ರೊ.ಪುತ್ತೂರಾಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು. ‘ನಾವಿಕ’ ಸಂಸ್ಥೆ ಅಮೆರಿಕದಲ್ಲಿ ಸ್ಥಾಪಿತವಾಗಿ ಈಗಾಗಲೇ ನಾಲ್ಕು ವಿಶ್ವ ಮಟ್ಟದ ಕನ್ನಡ ಸಮ್ಮೇಳನಗಳನ್ನೂ ನಡೆಸಿದೆ.

2010 ರಲ್ಲಿ ಲಾಸ್ ಏಂಜಲೀಸ್‌ನಲ್ಲಿ, 2013 ರಲ್ಲಿ ಬಾಸ್ಟನ್, 2015 ರಲ್ಲಿ ರಾಲೆ ಹಾಗೂ 2017 ರಲ್ಲಿ ಡಲ್ಲಾಸ್‌ನಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲಾಗಿತ್ತು ಎಂದರು.