ಸ್ಯಾಂಡಲ್‌ವುಡ್‌ನ ವಿರಳಾತೀತ ಬೆಸ್ಟ್ ಫ್ರೆಂಡ್‌ಗಳೆಂದರೆ ದರ್ಶನ್ ಹಾಗೂ ಸೃಜನ್. ಈ ಸ್ಯಾಂಡಲ್‌ವುಡ್ ದೋಸ್ತಿಗಳಿಗೆ ಕತಾರ್‌ನಲ್ಲಿ ಅದ್ಧೂರಿಸನ್ಮಾನ ನಡೆದಿದೆ.

ಕತಾರ್‌ನಲ್ಲಿ ನಡೆದ 63ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಂಘ ಆಯೋಜಿಸಿದ ಕಾರ್ಯಕ್ರಮಕ್ಕೆ ದರ್ಶನ್ ಹಾಗು ಸೃಜನ್ ಅತಿಥಿಗಳಾಗಿದ್ದರು. ಒಟ್ಟಾಗಿಯೇ ಆಗಮಿಸಿದ ಕನ್ನಡದ ಕಣ್ಮಣಿಗಳನ್ನು ಸಾಗರೋತ್ತರ ದೇಶದಲ್ಲಿರುವ ಕನ್ನಡಿಗರು ಕಣ್ತುಂಬಿ ಕೊಂಡರು.

ಈ ಇಬ್ಬರೂ ನಟಮಣಿಗಳಿಗೆ ಸನ್ಮಾನಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸದ್ಯ ದರ್ಶನ್ 'ಯಜಮಾನ', 'ಒಡೆಯ' ಹಾಗೂ 'ಡಿ 53' ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಜಿಯಾಗಿದ್ದಾರೆ.

ಅಲ್ಲದೇ ಮೈಸೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೈಗೆ ಏಟು ಮಾಡಿಕೊಂಡಿದ್ದು, ತುಸು ವಿಶ್ರಾಂತಿಯಲ್ಲಿಯೂ ಇದ್ದಾರೆ. 'ಕುರುಕ್ಷೇತ್ರ' ಚಿತ್ರ ಬಿಡುಗಡೆಯ ಹಂತದಲ್ಲಿದೆ. ಇಷ್ಟೆಲ್ಲಾ ಬ್ಯುಸಿ ಶೆಡ್ಯೂಲ್‌ನಲ್ಲಿದ್ದರೂ ದರ್ಶನ್ ಕತಾರ್ ಕನ್ನಡಿಗರಲ್ಲಿ ಕನ್ನಡಾಭಿಮಾನ ಮೂಡಿಸಲು ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು.