ತಿರುಪತಿ[ಆ.10]: ಅಮೆರಿಕ ಮೂಲದ ಇಬ್ಬರು ಎನ್‌ಆರ್‌ಐ ಉದ್ಯಮಿಗಳು ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ 14 ಕೋಟಿ ರು. ದೇಣಿಗೆ ನೀಡಿದ್ದಾರೆ.

ತಮ್ಮ ಕುಟುಂಬ ಸದಸ್ಯರೊಂದಿಗೆ ದೇವಳಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ಶ್ರೀನಿವಾಸನಿಗೆ ಪೂಜೆ ಸಲ್ಲಿಸಿದ ಬಳಿಕ 14 ಕೋಟಿ ರು. ಮೊತ್ತವನ್ನು ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯ(ಟಿಟಿಡಿ) ವಿಶೇಷಾಧಿಕಾರಿ ಎ.ವಿ.ಧರ್ಮ ರೆಡ್ಡಿ ಅವರಿಗೆ ಹಸ್ತಾಂತರಿಸಿದ್ದಾರೆ. ಅಲ್ಲದೇ, ಟಿಟಿಡಿ ಮಂಡಳಿ ಈ ಹಣವನ್ನು ಸಾರ್ವಜನಿಕ ಕಲ್ಯಾಣಕ್ಕಾಗಿ ಬಳಕೆ ಮಾಡಬೇಕು.

ತಮ್ಮ ಹೆಸರನ್ನು ಎಲ್ಲಿಯೂ ಉಲ್ಲೇಖಿಸಬಾರದು ಎಂದು ಇಬ್ಬರು ಎನ್‌ಆರ್‌ಐಗಳು ಮನವಿ ಮಾಡಿದ್ದಾರೆ. ಕಳೆದ ವರ್ಷವೂ ಈ ಇಬ್ಬರು ಎನ್‌ಆರ್‌ಐಗಳು 13.5 ಕೋಟಿ ರು. ಹಣವನ್ನು ಟಿಟಿಡಿಗೆ ನೀಡಿದ್ದರು.