ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಬಾಲಕೃಷ್ಣ ಕಾಂಗ್ರೆಸ್‌ಗೆ ಬರುವುದಾಗಿ ಹೇಳುತ್ತಿದ್ದಾರೆ. ನಾನು ಇನ್ನೂ ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರಿಯವಾಗಿ ದುಡಿಯುತ್ತಿ ದ್ದೇನೆ. ಒಂದು ವೇಳೆ ಪಕ್ಷ ನನ್ನನ್ನು ಸರಿಯಾಗಿ ನಡೆಸಿಕೊ ಳ್ಳದಿದ್ದರೆ ನಾನು ಜೆಡಿಎಸ್‌ ಸೇರುತ್ತೇನೆ ಎಂದರು. ಶಾಸಕ ಬಾಲಕೃಷ್ಣ ಕಾಂಗ್ರೆಸ್‌ಗೆ ಬರಲು ಉತ್ಸುಕರಾಗಿದ್ದಾರೆ.

ಮಾಗಡಿ(ಏ.15): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಬಾಲಕೃಷ್ಣ ಅವರು ಕಾಂಗ್ರೆಸ್‌ ಟಿಕೆಟ್‌ ಪಡೆದರೆ ನಾನು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಬಾಲಕೃಷ್ಣ ಕಾಂಗ್ರೆಸ್‌ಗೆ ಬರುವುದಾಗಿ ಹೇಳುತ್ತಿದ್ದಾರೆ. ನಾನು ಇನ್ನೂ ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರಿಯವಾಗಿ ದುಡಿಯುತ್ತಿ ದ್ದೇನೆ. ಒಂದು ವೇಳೆ ಪಕ್ಷ ನನ್ನನ್ನು ಸರಿಯಾಗಿ ನಡೆಸಿಕೊ ಳ್ಳದಿದ್ದರೆ ನಾನು ಜೆಡಿಎಸ್‌ ಸೇರುತ್ತೇನೆ ಎಂದರು. ಶಾಸಕ ಬಾಲಕೃಷ್ಣ ಕಾಂಗ್ರೆಸ್‌ಗೆ ಬರಲು ಉತ್ಸುಕರಾಗಿದ್ದಾರೆ. ನಮ್ಮ ಜನಾಂಗದ ನಾಯಕರಾಗಿರುವ ಮಾಜಿ ಪ್ರಧಾನಿ ದೇವೇಗೌಡರು ಮಾಗಡಿಗೆ ಬಂದರೆ ಅವರನ್ನು ಗೌರವ ವಾಗಿ ನಡೆಸಿಕೊಳ್ಳವುದು ತಪ್ಪಾ?, ನಾನು ಅವರನ್ನು ಮಾಗಡಿಗೆ ಬರುವಂತೆ ಆಹ್ವಾನಿಸಿರಲಿಲ್ಲ ಎಂದು ಹೇಳಿ ದರು. ಶಾಸಕ ಬಾಲಕೃಷ್ಣ ನನ್ನ ಬಗ್ಗೆ ಮಾತನಾಡಲು ಅಸಹ್ಯ ಎಂದು ಹೇಳುತ್ತಿದ್ದರು. ಈಗ ನನ್ನ ಬಗ್ಗೆಯೇ ಮಾಧ್ಯಮಗಳಲ್ಲಿ ಜೆಡಿಎಸ್‌ ಪಕ್ಷಕ್ಕೆ ಹೋಗುತ್ತಾರೆಂದು ಮಾತನಾಡುತ್ತಿದ್ದಾರೆ. ಯಾಕೋ ನನ್ನ ಮೇಲೆ ಈಗ ಅವ ರಿಗೆ ಮುತುವರ್ಜಿ ಬಂದಿದೆ. ಈಗ ನನ್ನ ಬಗ್ಗೆ ಮಾತನಾ ಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಮನಗರಲ್ಲಿ ನಡೆದ ಕಾಡಾ ಸಭೆಯಲ್ಲಿ ಅರ್ಕಾವತಿ ನದಿ ಮೂಲಕ ಮಂಚನಬೆಲೆ ನೀರನ್ನು ಕನಕಪುರಕ್ಕೆ ಬಿಡಲು ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಶಾಸಕರು ಒಪ್ಪಿದ್ದರು. ಆಗ ಮಾತನಾಡದ ಶಾಸಕರು, ಈಗ ಮಾಗಡಿ ಜನರ ಕಣ್ಣು ಒರೆಸಲು ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು.