Asianet Suvarna News Asianet Suvarna News

ಮಿಜೋರಾಂ ಸಿಎಂ ಆಗಿ ಜೊರಾಮ್ಥಂಗಾ ಪ್ರಮಾಣ ವಚನ!

ಮಿಜೋರಾಂನಲ್ಲಿ ಶುರುವಾಯ್ತು ಎನ್‌ಡಿಎ ಆಡಳಿತ| ನೂತನ ಸಿಎಂ ಆಗಿ ಜೊರಾಮ್ಥಂಗಾ ಪ್ರಮಾಣ ವಚನ| ಪ್ರಮಾಣ ವಚನ ಬೋಧಿಸಿದ ರಾಜ್ಯಪಾಲ ರಾಜಶೇಖರನ್|  ಕಾಂಗ್ರೆಸ್ ಮುಕ್ತವಾದ ಈಶಾನ್ಯ ರಾಜ್ಯಗಳು

Zoramthanga Takes Oath as New Chief Minister in Mizoram
Author
Bengaluru, First Published Dec 15, 2018, 4:15 PM IST

ಐಜ್ವಾಲ್(ಡಿ.15): ಈಶಾನ್ಯ ರಾಜ್ಯ ಮಿಜೋರಾಂ​ ನೂತನ ಮುಖ್ಯಮಂತ್ರಿಯಾಗಿ ಮಿಜೋರಾಂ ನ್ಯಾಷನಲ್​ ಫ್ರಂಟ್(ಎಂಎನ್ಎಫ್) ಮುಖ್ಯಸ್ಥ ಜೊರಾಮ್ಥಂಗಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮಿಜೋರಾಂ ರಾಜಧಾನಿ ಐಜ್ವಾಲ್ ನಲ್ಲಿ ಇಂದು ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ, ರಾಜ್ಯಪಾಲ ರಾಜಶೇಖರನ್ ನೂತನ ಸಿಎಂ ಜೊರಾಮ್ಥಂಗಾ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಜೊರಾಮ್ಥಂಗಾ ಮೂರನೇ ಬಾರಿಗೆ ಮಿಜೋರಾಂನ ಮುಖ್ಯಮಂತ್ರಿಯಾಗಿದ್ದು, ಇದಕ್ಕೂ ಮೊದಲು 1998ರಿಂದ 2008ರ ವರೆಗೆ ಸತತ ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದರು.


ಡಿಸೆಂಬರ್ 11ರಂದು ಹೊರಬಿದ್ದಿದ್ದ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಮಿಜೋರಾಂ ನ್ಯಾಷನಲ್​ ಫ್ರಂಟ್​ ಆಡಳಿತಾರೂಢ ಕಾಂಗ್ರೆಸ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. 

40 ವಿಧಾನಸಭೆ ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳನ್ನು ಎಂಎನ್​ಎಫ್​ ತನ್ನದಾಗಿಸಿಕೊಂಡಿತ್ತು. ಆ ಮೂಲಕ ಹತ್ತು ವರ್ಷಗಳ ಕಾಂಗ್ರೆಸ್​ ಆಡಳಿತವನ್ನು ಎಂಎನ್​ಎಫ್​ ಕೊನೆಗೊಳಿಸಿತ್ತು.
 

Follow Us:
Download App:
  • android
  • ios