ದೇವೇಗೌಡರಿಗೆ ಜಮೀರ್ ಅಹ್ಮದ್ ಖಾನ್ ಸವಾಲು

Zameer Ahmed Slams HD Devegowda
Highlights

ಚಾಮರಾಜಪೇಟೆಯಿಂದ ಕಾಂಗ್ರೆಸ್ ಪರ ನಾಮಪತ್ರ ಸಲ್ಲಿಸಿದ ಜಮೀರ್ ಅಹ್ಮದ್‌ಖಾನ್ ಈ ಬಾರಿಯೂ ಗೆಲ್ಲುತ್ತೇನೆ ಎಂದು ಎಚ್.ಡಿ. ದೇವೇಗೌಡರಿಗೆ ಸವಾಲು ಹಾಕಿದರು.

ಬೆಂಗಳೂರು : ಚಾಮರಾಜಪೇಟೆಯಿಂದ ಕಾಂಗ್ರೆಸ್ ಪರ ನಾಮಪತ್ರ ಸಲ್ಲಿಸಿದ ಜಮೀರ್ ಅಹ್ಮದ್‌ಖಾನ್ ಈ ಬಾರಿಯೂ ಗೆಲ್ಲುತ್ತೇನೆ ಎಂದು ಎಚ್.ಡಿ. ದೇವೇಗೌಡರಿಗೆ ಸವಾಲು ಹಾಕಿದರು.  ದೇವೇಗೌಡರು ನನ್ನ ವಿರುದ್ದ ಮುಸ್ಲೀಂ ಅಭ್ಯರ್ಥಿಯನ್ನೇ ಹಾಕಬೇಕು ಎಂದು ತೀರ್ಮಾನ ಮಾಡಿದ್ದಾರೆ.

ಹೀಗಾಗಿ ಅಲ್ತಾಫ್‌ಗೆ ಜೆಡಿಎಸ್ ಟಿಕೆಟ್ ನೀಡಿದ್ದಾರೆ. ಅಲ್ತಾಫ್ ಅಲ್ಲ. ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರನ್ನೇ ಕರೆತಂದು ನಿಲ್ಲಿಸಿದರೂ ನನ್ನನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದರು. ಕೆ.ಆರ್. ಮಾರುಕಟ್ಟೆ ಬಳಿ ಇರುವ ಜಲಕಂಟೇಶ್ವರ ದೇವಸ್ಥಾನದಲ್ಲಿ ಜಮೀರ್ ಅಹ್ಮದ್‌ಖಾನ್ ಪೂಜೆ ಸಲ್ಲಿಸಿ ಮಾತನಾಡಿ, ಒಂದು ವೇಳೆ ಸೋತರೆ ನನ್ನ ತಲೆ ಕತ್ತರಿಸಿ ಮಾಧ್ಯಮದವರ ಕೈಗೆ ಕೊಡ್ತೀನಿ ದೇವೇಗೌಡರಿಗೆ ಬಹಿರಂಗ ಸವಾಲು ಹಾಕಿದರು.

ನೂರಕ್ಕೆ ನೂರು ನಾನೇ ಗೆಲ್ಲುತ್ತೇನೆ. ಅಲ್ತಾಫ್ ಈ ಹಿಂದೆಯೂ ನನ್ನ ವಿರುದ್ದ ಸ್ಪರ್ಧೆ ಮಾಡಿದ್ದರು. ಆಗ ಕೇವಲ 59 ಮತಗಳನ್ನು ಪಡೆದಿದ್ದರು ಎಂದು ಹೇಳಿದರು.

loader