Asianet Suvarna News Asianet Suvarna News

ಶಾಪಿಂಗ್ ಮಾಡೋವಾಗ ಅಂಗಡಿ ಮಾಲೀಕ ಎಂಆರ್ ಪಿಗಿಂತ ಹೆಚ್ಚು ಬೆಲೆ ಕೇಳಿದ್ರೆ ಏನ್ ಮಾಡ್ಬೇಕು?

ಯಾವುದೇ ವಸ್ತು ಅಥವಾ ಸೇವೆಯನ್ನು ಖರೀದಿ ಮಾಡುವಾಗ ವ್ಯಾಪಾರಿ ಎಂಆರ್ ಪಿಗಿಂತ ಅಧಿಕ ಬೆಲೆ ಕೇಳಿದ್ರೆ ನಾವು ನೀಡುತ್ತೇವೆ. ಆದ್ರೆ, ಇದು ತಪ್ಪು. ಎಂಆರ್ ಪಿಗಿಂತ ಹೆಚ್ಚು ಬೆಲೆ ಕೇಳುವಂತಿಲ್ಲ. ಹಾಗಾದ್ರೆ ಇಂಥ ಸಂದರ್ಭಗಳಲ್ಲಿ ಏನ್ ಮಾಡ್ಬೇಕು? 
 

Overcharged While Shopping Know What To Do If Shopkeeper Asks More Than MRP anu
Author
First Published Apr 24, 2024, 7:34 PM IST

Business Desk: ಗರಿಷ್ಠ ಚಿಲ್ಲರೆ ದರ ಅಥವಾ ಮಾಕ್ಸಿಮಮ್ ರಿಟೇಲ್ ಪ್ರೈಸ್ ಅನ್ನು ಉತ್ಪನ್ನದ ಲೇಬಲ್ ಅಥವಾ ಪ್ಯಾಕೇಜಿಂಗ್ ಮೇಲೆ ಪ್ರಿಂಟ್ ಹಾಕಿರುತ್ತಾರೆ. ಇದರಲ್ಲಿ ಎಲ್ಲ ತೆರಿಗೆಗಳು ಕೂಡ ಸೇರಿರುತ್ತವೆ. ಎಂಆರ್ ಪಿಯನ್ನು ಉತ್ಪಾದಕರು ಅಥವಾ ಮಾರಾಟಗಾರರು ನಿರ್ಧರಿಸುತ್ತಾರೆ. ಇದು ಉತ್ಪಾದನಾ ವೆಚ್ಚ, ಮಾರ್ಕೆಟಿಂಗ್ ವೆಚ್ಚಗಳು ಹಾಗೂ ಲಾಭದ ಮಾರ್ಜಿನ್ ಅನ್ನು ಒಳಗೊಂಡಿರುತ್ತದೆ. ಯಾವುದೇ ಉತ್ಪನ್ನ ಅಥವಾ ಸೇವೆಗೆ ಕೊನೆಯ ಗ್ರಾಹಕನಿಗೆ ಒಬ್ಬ ಚಿಲ್ಲರೆ ಮಾರಾಟಗಾರ ಕಾನೂನುಬದ್ಧವಾಗಿ ವಿಧಿಸುವ ಗರಿಷ್ಠ ದರವಾಗಿದೆ. ಹೀಆಗಿ ಎಂಆರ್ ಪಿಗಿಂತ ಹೆಚ್ಚಿನ ದರವನ್ನು ವ್ಯಾಪಾರಿ ಗ್ರಾಹಕನಿಂದ ಕೇಳಿದ್ರೆ ಅದು ಕಾನೂನಿಗೆ ವಿರುದ್ಧವಾಗಿದೆ. ಹೀಗಿರುವಾಗ ವ್ಯಾಪಾರಿ ಅಥವಾ ಅಂಗಡಿ ಮಾಲೀಕ ಯಾವುದೇ ಒಂದು ಉತ್ಪನ್ನ ಅಥವಾ ಸೇವೆಗೆ ಎಂಆರ್ ಪಿಗಿಂತ ಹೆಚ್ಚಿನ ಬೆಲೆ ಕೇಳಿದ್ರೆ ಆಗ ಏನ್ ಮಾಡ್ಬೇಕು?

ಎಂಆರ್ ಪಿ ಏಕೆ ಮುಖ್ಯ?
ಚಿಲ್ಲರೆ ವ್ಯಾಪಾರಿಗಳು ದುಬಾರಿ ಬೆಲೆ ವಿಧಿಸದಂತೆ ತಡೆಯುವ ಮೂಲಕ ಎಂಆರ್ ಪಿ ಗ್ರಾಹಕರಿಗೆ ರಕ್ಷಣೆ ನೀಡುತ್ತದೆ. ಗೊಂದಲ ಹಾಗೂ ಶೋಷಣೆ ಮಾಡದಂತೆ ತಡೆಯಲು ಬೆಂಚ್ ಮಾರ್ಕ್ ಬೆಲೆಯನ್ನು ನಿಗದಿಪಡಿಸಲಾಗಿದೆ. ಇದನ್ನು ಅಗತ್ಯ ಸರಕುಗಳಿಗೆ ಮಾತ್ರ ನಿಗದಿಪಡಿಸಲಾಗಿದೆ.

ಕೋಟಕ್ ಮಹೀಂದ್ರ ಬ್ಯಾಂಕಿಗೆ ಆರ್ ಬಿಐ ನಿರ್ಬಂಧ; ಆನ್ ಲೈನ್ ಅಥವಾ ಮೊಬೈಲ್ ಮುಖಾಂತರ ಹೊಸ ಗ್ರಾಹಕರ ಸೇರ್ಪಡೆಗೆ ತಡೆ

ಎಂಆರ್ ಪಿಗಿಂತ ಅಧಿಕ ಶುಲ್ಕ ಕಾನೂನುಬದ್ಧವೇ?
ಭಾರತದಲ್ಲಿ ಪ್ಯಾಕೇಜ್ಡ್ ಸರಕುಗಳ ಮಾರಾಟವನ್ನು ಕಾನೂನುಬದ್ಧ ಮಾಪನಶಾಸ್ತ್ರ ಕಾಯ್ದೆ 20009 ನಿರ್ವಹಣೆ ಮಾಡುತ್ತದೆ. ಇದು ಉತ್ಪನ್ನಗಳ ಲೇಬಲ್ ಅಥವಾ ಪ್ಯಾಕೇಜಿಂಗ್ ಮೇಲೆ ಎಂಆರ್ ಪಿ ಡಿಸ್ ಪ್ಲೇಯನ್ನು ಕಡ್ಡಾಯಗೊಳಿಸಿದೆ. ಎಂಆರ್ ಪಿಗಿಂತ ಅಧಿಕ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡೋದನ್ನು ಕಾನೂನು ನಿಷೇಧಿಸಿದೆ. ಎಂಆರ್ ಪಿಗಿಂತ ಅಧಿಕ ಬೆಲೆಗೆ ಉತ್ಪನ್ನ ಅಥವಾ ಸೇವೆಗಳನ್ನು ಮಾರಾಟ ಮಾಡಿದರೆ ದಂಡ ಅಥವಾ ಇತರ ಶುಲ್ಕಗಳನ್ನು ವಿಧಿಸಲಾಗುತ್ತದೆ.

ನಿವ್ವಳ ಪ್ರಮಾಣ, ಎಂಆರ್ ಪಿ, ಉತ್ಪಾದನೆಯ ದಿನಾಂಕ ಹಾಗೂ ಅವಧಿ ಮುಗಿಯುವ ದಿನಾಂಕವನ್ನು ಪ್ಯಾಕೇಜ್ಡ್ ಸರಕುಗಳಲ್ಲಿ ನಮೂದಿಸೋದು ಕಡ್ಡಾಯ. ಭಾರತದಲ್ಲಿ ಎಂಆರ್ ಪಿಗಿಂತ ಅಧಿಕ ಬೆಲೆಯನ್ನು ವಿಧಿಸುವಂತಿಲ್ಲ. ಗ್ರಾಹಕ ಸರಕುಗಳ ಕಾಯ್ದೆ 2006ರ ಅನ್ವಯ ಉತ್ಪನ್ನದ ಪ್ಯಾಕೇಜಿಂಗ್ ಮೇಲೆ ನಮೂದಿಸಿರುವ ಬೆಲೆಗಿಂತ ಹೆಚ್ಚಿನ ದರವನ್ನು ವಿಧಿಸುವಂತಿಲ್ಲ. 

ಉತ್ಪನ್ನದ ಎಂಆರ್ ಪಿ ಎಷ್ಟು?
ಉತ್ಪಾದಕರು ಹಾಗೂ ಮಾರಾಟಗಾರರು ಉತ್ಪಾದನೆ ಸಾಗಣೆ ಹಾಗೂ ಯಾವುದೇ ಹೆಚ್ಚುವರಿ ವೆಚ್ಚ ಸೇರಿದಂತೆ ಎಲ್ಲ ಖರ್ಚುಗಳು ಹಾಗೂ ಎಲ್ಲ ತೆರಿಗೆಗಳನ್ನು ಎಂಆರ್ ಪಿ ಒಳಗೊಂಡಿರುತ್ತದೆ.

ಮಾರಾಟಗಾರ ಎಂಆರ್ ಪಿಗಿಂತ ಅಧಿಕ ಬೆಲೆ ವಿಧಿಸಿದ್ರೆ?
ಮಾರಾಟಗಾರ ಎಂಆರ್ ಪಿಗಿಂತ ಅಧಿಕ ಬೆಲೆ ವಿಧಿಸಿದ್ರೆ ಆಗ ಗ್ರಾಹಕ ಸಂಬಧಪಟ್ಟ ರಾಜ್ಯದ ಮಾಪನಶಾಸ್ತ್ರ ಇಲಾಖೆಗೆ ದೂರು ನೀಡಬಹುದು. 

ಎಲ್ಲಿ ದೂರು ನೀಡಬಹುದು?
ಗ್ರಾಹಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಂಖ್ಯೆ 1800-11-4000/ 1915 ಸಂಪರ್ಕಿಸಬಹುದು ಅಥವಾ ಸಂಬಂಧಪಟ್ಟ ಜಿಲ್ಲೆಯ ಗ್ರಾಹಕರ ವೇದಿಕೆಯಲ್ಲಿ ದೂರು ಸಲ್ಲಿಸಬಹುದು. 8800001915 ಸಂಖ್ಯೆಗೆ ಎಸ್ ಎಂಎಸ್ ಮಾಡಬಹುದು. ಎನ್ ಸಿಎಚ್ ಆಪ್ ಅಥವಾ ಉಮಂಗ್ ಆಪ್ ಮುಖಾಂತರ ಕೂಡ ದೂರು ಸಲ್ಲಿಕೆ ಮಾಡಬಹುದು. 

ಸ್ವಉದ್ಯೋಗಿಗಳು, ಸಣ್ಣ ವ್ಯಾಪಾರಿಗಳ ಮನೆ ಕನಸು ನನಸಾಗಿಸಲು ಕೇಂದ್ರದ ಚಿಂತನೆ, ಪಿಎಂ ಆವಾಸ್ ಯೋಜನೆ ವಿಸ್ತರಣೆ ಸಾಧ್ಯತೆ

ಆನ್ ಲೈನ್ ದೂರು ಸಲ್ಲಿಕೆ ಹೇಗೆ?
https://consumerhelpline.gov.in/user/signup.php ನೋಂದಣಿ ಮಾಡುವ ಮೂಲಕ ಕೂಡ ಗ್ರಾಹಕರು ಆನ್ ಲೈನ್ ನಲ್ಲಿ ದೂರು ದಾಖಲಿಸಬಹುದು. ದೂರು ದಾಖಲಿಸಲು ಒಂದು ಬಾರಿಗೆ ನೋಂದಣಿ ಮಾಡೋದು ಅಗತ್ಯ. http://consumerhelpline.gov.in ಭೇಟಿ ನೀಡಿ ಲಾಗಿನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯ ದಾಖಲೆಗಳನ್ನು ನೀಡಿ. ಇದನ್ನು ಇ-ಮೇಲ್ ಮುಖಾಂತರ ಪರಿಶೀಲಿಸಲಾಗುತ್ತದೆ. ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಸೃಷ್ಟಿಯಾಗುತ್ತದೆ. ಇದನ್ನು ಬಳಸಿಕೊಂಡು ದೂರು ನೀಡಬಹುದು. 

Follow Us:
Download App:
  • android
  • ios