ಸ್ಕೂಲ್, ಹಾಸ್ಟೆಲ್ ಕಟ್ಟೋಕೆ ನಮ್ಮ ಆಸ್ತಿಗಳನ್ನು ಬಿಟ್ಟು ಕೊಟ್ಟಿದ್ದೇವೆ; ಡಿಸಿಎಂ ಡಿ.ಕೆ. ಶಿವಕುಮಾರ್
ನಮ್ಮ ಆಸ್ತಿಗಳನ್ನ ಸ್ಕೂಲ್, ಹಾಸ್ಟೆಲ್ ಕಟ್ಟೋಕೆ ಕೊಟ್ಟಿದ್ದೇನೆ. ನಾನು ಮಾಡಿದ ತರಹ ಬಿಜೆಪಿ ನಾಯಕರು ಅಥವಾ ಕುಮಾರಸ್ವಾಮಿ ಮಾಡಿದ್ದರೆ ತೋರಿಸಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಮನಗರ (ಏ.24): ನಮ್ಮೂರಿನ ಜನ ಪ್ರೀತಿ ವಿಶ್ವಾಸ ತೋರಿಸಿ ಸಾಕಿದ್ದಾರೆ. ಜನರಿಗೆ ನನ್ನ ಮೇಲೆ ನಂಬಿಕೆ ಇದೆ. ಮೊದಲು ಹೇಗಿತ್ತು, ಈಗ ಹೇಗಿದೆ ಅಂತ ಗೊತ್ತಿದೆ. ನಮ್ಮ ಆಸ್ತಿಗಳನ್ನ ಸ್ಕೂಲ್, ಹಾಸ್ಟೆಲ್ ಕಟ್ಟೋಕೆ ಕೊಟ್ಟಿದ್ದೇನೆ. ನಾನು ಮಾಡಿದ ತರಹ ಬಿಜೆಪಿ ನಾಯಕರು ಅಥವಾ ಕುಮಾರಸ್ವಾಮಿ ಮಾಡಿದ್ದರೆ ತೋರಿಸಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಮನಗರದ ದೊಡ್ಡ ಆಲನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಚುನಾವಣೆ ವೇಳೆ ಕೇವಲ ಅರ್ಧ ಗಂಟೆ ಮಾತ್ರ ಬಂದು ಹೋಗಿದ್ದೆ. ಇವತ್ತು ಅರ್ಧದಿನ 7 ಕಡೆ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಈಗಾಗಲೇ 4 ಕಡೆ ಪ್ರಚಾರ ಮುಗಿದಿದೆ. ನಮ್ಮೂರಿನ ಜನ ಪ್ರೀತಿ ವಿಶ್ವಾಸ ತೋರಿಸಿ ಸಾಕಿದ್ದಾರೆ. ಅವ್ರು ಸಾಕಿರೋದಕ್ಕೆ ರಾಜ್ಯದ ಸೇವೆ ಮಾಡೋ ಅವಕಾಶ ಸಿಕ್ಕಿದೆ. ಇದಕ್ಕಿಂತ ಇನ್ನೇನು ಬೇಕು ಸಂತೋಷ. ಇಡೀ ಊರೇ ಒಗ್ಗಟ್ಟಿನಿಂದ ಆಶಿರ್ವಾದ ಮಾಡಿದ್ದಾರೆ ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಬಲ್ ಸೆಕ್ಯೂರಿಟಿ; ಎಲ್ಲ ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ಅಳವಡಿಕೆ
ನಮ್ಮ ಆಸ್ತಿಗಳನ್ನ ಸ್ಕೂಲ್, ಹಾಸ್ಟೆಲ್ ಕಟ್ಟೋಕೆ ಕೊಟ್ಟಿದ್ದೇನೆ. ನಾನು ಮಾಡಿದ ತರಹ ಬಿಜೆಪಿ, ಕುಮಾರಸ್ವಾಮಿ ಮಾಡಿದ್ರೆ ತೋರಿಸಲಿ. ನಾವೀರೋದೆ ಜನರಿಗೋಸ್ಕರ. ಜನಕ್ಕೋಸ್ಕರ ನಾವು ಪ್ರಾಣ ಕೊಡುತ್ತಿದ್ದೇವೆ. ಜನರು ನಮಗೋಸ್ಕರ ಪ್ರಾಣ ಕೊಡುತ್ತಿದ್ದಾರೆ, ಪ್ರೀತಿ ತೋರಿಸುತ್ತಿದ್ದಾರೆ. ಜನರಿಗೆ ನನ್ನ ಮೇಲೆ ನಂಬಿಕೆ ಇದೆ. ಮೊದಲು ಹೇಗಿತ್ತು, ಈಗ ಹೇಗಿದೆ ಅಂತ ಗೊತ್ತಿದೆ ಎಂದರು.
ಡಿ.ಕೆ. ಸುರೇಶ್ ಆಪ್ತರ ಮನೆ ಮೇಲೆ ಐಟಿ ದಾಳಿ ವಿಚಾರದ ಬಗ್ಗೆ ಮಾತನಾಡಿ, ಐಟಿ ಅಧಿಕಾರಿಗಳು ಕೆಲಸ ಮಾಡಲು ಬಿಡದೆ 2 ದಿನಗಳ ಕಾಲ ತಡೆದರು. ಇವತ್ತು ಬ್ಲಾಕ್ ಅಧ್ಯಕ್ಷರು, ಕಾರ್ಯಕರ್ತರ ಮನೆ ಮೇಲೆ ರೈಡ್ ಮಾಡಿದ್ದಾರೆ. ಅವರು ನಮ್ಮಮೇಲೆ ಕೆಟ್ಟ ಹೆಸರು ತರೋಕೆ ಮಾಡುತ್ತಿದ್ದಾರೆ. ಯಾರಾದರೂ ಬಿಜೆಪಿಯವರ ಮೇಲೆ ದಾಳಿ ಆಗಿದ್ದೀಯಾ? ಬಿಜೆಪಿ, ದಳದವರು ದುಡ್ಡು ಹಂಚುತ್ತಿಲ್ವಾ? ಎಲ್ಲಾ ಕಡೆ ದುಡ್ಡು ಹಂಚುತ್ತಿದ್ದಾರೆ. ಕೇವಲ ನಮ್ಮನ್ನ ಮಾತ್ರ ಟಾರ್ಗೆ ಮಾಡುತ್ತಿದ್ದಾರೆ. ಮಂಡ್ಯ ಹಾಸನದಲ್ಲಿ ವೋಟ್ ಮೇಲೆ ದುಡ್ಡು ಕೊಡುತ್ತಿದ್ದಾರೆ. ಇನ್‌ಕಮ್ ಟ್ಯಾಕ್ಸ್‌ನವರು ಕಣ್ಣು ಮುಚ್ವಿಕೊಂಡು ಕುಳಿತ್ತಿದ್ದಾರಾ? ಎಂದು ಆದಾಯ ತೆರಿಗೆ ಇಲಾಖೆ ಮೇಲೆ ಕಿಡಿಕಾರಿದರು.
ಬಿಜೆಪಿ ದೇಶದ ಹೊಸ ಈಸ್ಟ್ ಇಂಡಿಯಾ ಕಂಪನಿ; ರಣದೀಪ್ ಸುರ್ಜೇವಾಲಾ ಆರೋಪ
ಈಗ ನಡೆಯುತ್ತಿರುವುದು ಎಲೆಕ್ಷನ್. ಎಲ್ಲರ ಮೇಲೂ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ನಮ್ಮವರ ಲೀಸ್ಟ್ ಮಾಡಿಕೊಂಡಿದ್ದಾರೆ. ಹುಬ್ಬಳಿಯಲ್ಲಿ ಯಾರೋ ಕಂಟ್ರಾಕ್ಟರ್ ಹಣವನ್ನ ಡಿ.ಕೆ. ಶಿವಕುಮಾರ್ ಅವರದ್ದು ಅಂತ ಹೇಳು ಎನ್ನುತ್ತಿದ್ದಾರಂತೆ. ಸುರೇಶ್ ಡ್ರೈವರ್ ಹಿಡಿದು, ಅವರ ಹೆಣ್ಣು ಮಕ್ಕಳ ಜುಟ್ಟು ಹಿಡಿದು ಎಳೆದಾಡಿದ್ದಾರೆ. ನಾನು ಎಫ್‌ಐಆರ್ ಮಾಡಿಸಿ ಒಳಗೆ ಹಾಕಿಸಬೇಕು ಅಂತ ಇದ್ದೆ. ಐಟಿ ಅಧಿಕಾರಿಗಳು ಬಂದು ಕೇಳಿಕೊಂಡ್ರು ನಾವೇ ವಿಚಾರಣೆ ಮಾಡುತ್ತೇವೆ ಅಂತ. ಏ.26ರ ನಂತರ ಅದನ್ನ ವಿಚಾರಿಸುತ್ತೇನೆ. ಇನ್ನು ಇವರು ದಾಳಿ ಮಾಡಿದ ಕಡೆಗಳಲ್ಲಿ ದುಡ್ಡು ಸಿಕ್ಕಿಲ್ಲ. ಆದ್ರೆ ಎರೆಡು ದಿನ ಎಲೆಕ್ಷನ್ ನಿಲ್ಲಿಸಬೇಕು ಎಂಬುದು ಅವ್ರ ಪ್ಲಾನ್ ಆಗಿದೆ. ಅಧಿಕಾರಿಗಳ ಮುಖಾಂತರ ನಮ್ಮ ಕೆಲಸ ಕೆಡಿಸಬೇಕು ಅಂತ ಹೊರಟಿದ್ದಾರೆ ಎಂದು ಆರೋಪ ಮಾಡಿದರು.