“ನಾನು ಝೈರಾ ಹೇಳಿಕೆಯನ್ನು ಓದಿದ್ದೇನೆ. ಆಕೆ ಆ ರೀತಿ ಹೇಳುವುದಕ್ಕೆ ಕಾರಣವೇನೆಂದು ನಾನು ಊಹಿಸಿಕೊಳ್ಳಬಲ್ಲೆ. ಝೈರಾ, ನಾವೆಲ್ಲಾ ನಿನ್ನ ಬೆಂಬಲಕ್ಕಿದ್ದೇವೆ. ಯುವ ಪ್ರತಿಭಾನ್ವಿತ, ಶ್ರಮಜೀವಿ, ಧೈರ್ಯವಂತ ನಿನ್ನಂತ ಮಕ್ಕಳು ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ರೋಲ್ ಮಾಡೆಲ್. ನೀನು ನಿಜವಾಗಿಯೂ ನನಗೆ ರೋಲ್ ಮಾಡೆಲ್! ದೇವರ ಆಶೀರ್ವಾದವಿರಲಿ” ಎಂದು ಅಮೀರ್ ಖಾನ್ ಹೇಳಿದ್ದಾರೆ.
ನವದೆಹಲಿ (ಜ.17): ‘ದಂಗಾಲ್’ ಚಿತ್ರದ ನಟಿ ಝೈರಾ ವಾಸಿಮ್ ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯನ್ನು ಭೇಟಿ ಮಾಡಿದ್ದು, ಮುಫ್ತಿಯವರು ಆಕೆಯನ್ನು ಕಾಶ್ಮೀರದ ರೋಲ್ ಮಾಡೆಲ್ ಎಂದು ಕರೆದಿದ್ದು ವಿವಾದವಾಗಿದೆ. ಅದಕ್ಕಾಗಿ ಆಕೆ ಕ್ಷಮೆ ಯಾಚಿಸಿದ್ದು ಆಕೆಗೆ ಹಲವಾರು ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಅಮೀರ್ ಖಾನ್ ಕೂಡಾ ಇದೀಗ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ.
“ನಾನು ಝೈರಾ ಹೇಳಿಕೆಯನ್ನು ಓದಿದ್ದೇನೆ. ಆಕೆ ಆ ರೀತಿ ಹೇಳುವುದಕ್ಕೆ ಕಾರಣವೇನೆಂದು ನಾನು ಊಹಿಸಿಕೊಳ್ಳಬಲ್ಲೆ. ಝೈರಾ, ನಾವೆಲ್ಲಾ ನಿನ್ನ ಬೆಂಬಲಕ್ಕಿದ್ದೇವೆ. ಯುವ ಪ್ರತಿಭಾನ್ವಿತ, ಶ್ರಮಜೀವಿ, ಧೈರ್ಯವಂತ ನಿನ್ನಂತ ಮಕ್ಕಳು ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ರೋಲ್ ಮಾಡೆಲ್. ನೀನು ನಿಜವಾಗಿಯೂ ನನಗೆ ರೋಲ್ ಮಾಡೆಲ್! ದೇವರ ಆಶೀರ್ವಾದವಿರಲಿ” ಎಂದು ಅಮೀರ್ ಖಾನ್ ಹೇಳಿದ್ದಾರೆ.
ಝೈರಾ ಇನ್ನೂ 16 ರ ಹರೆಯದ ಹುಡುಗಿ. ಅವಳ ಜೀವನವನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಸತ್ಯಾಂಶವನ್ನು ಗೌರವಿಸಿ. ಆಕೆಯನ್ನು ಅವಳ ಪಾಡಿಗೆ ಬಿಡಿ ಎಂದು ಪ್ರತಿಯೊಬ್ಬರಲ್ಲೂ ಕೇಳಿಕೊಳ್ಳುತ್ತೇನೆ ಎಂದು ಅಮೀರ್ ಖಾನ್ ಹೇಳಿದ್ದಾರೆ.