ನೀವು ಕೆಲಸ ಮಾಡಿ ಅತೀ ಹೆಚ್ಚು ಬಳಲಿದ್ದೀರಾ..? ಈ ಸಂದರ್ಭದಲ್ಲಿ ಚನ್ನಾಗಿ ನಿದ್ರಿಸಬೇಕು ಎನಿಸುತ್ತಿದೆಯಾ..? ಆದರೆ ಸರಿಯಾಗಿ ನಿದ್ರೆ ಬರುತ್ತಿಲ್ಲವೇ..? ಹಾಗಾದರೆ ಉತ್ತಮ ನಿದ್ರೆಗೆ ನಿಮಗೊಂದಿಷ್ಟು ಟಿಪ್ಸ್’ಗಳು ಇಲ್ಲಿದೆ ನೋಡಿ.

ಬೆಂಗಳೂರು (ಡಿ.24): ನೀವು ಕೆಲಸ ಮಾಡಿ ಅತೀ ಹೆಚ್ಚು ಬಳಲಿದ್ದೀರಾ..? ಈ ಸಂದರ್ಭದಲ್ಲಿ ಚನ್ನಾಗಿ ನಿದ್ರಿಸಬೇಕು ಎನಿಸುತ್ತಿದೆಯಾ..? ಆದರೆ ಸರಿಯಾಗಿ ನಿದ್ರೆ ಬರುತ್ತಿಲ್ಲವೇ..? ಹಾಗಾದರೆ ಉತ್ತಮ ನಿದ್ರೆಗೆ ನಿಮಗೊಂದಿಷ್ಟು ಟಿಪ್ಸ್’ಗಳು ಇಲ್ಲಿದೆ ನೋಡಿ.

ಉತ್ತಮವಾದ ಹಾಸಿಗೆಯನ್ನು ಆಯ್ದುಕೊಳ್ಳಿ. ಇದು ನಿಮಗೆ ಉತ್ತಮ ನಿದ್ರೆಗೆ ಸಹಕಾರಿಯಾಗುತ್ತದೆ. ಸೂಕ್ತ ರೀತಿಯಲ್ಲಿ ಆರಾಮದಾಯಕ ಎನಿಸುವ ಹಾಸಿಗೆಗಳು ಉತ್ತಮ ನಿದ್ರೆಗೆ ಸಹಕಾರಿಯಾಗುತ್ತದೆ.

ನೀಲಿ ಬಣ್ಣದ ಲೈಟ್ ಸ್ಕ್ರೀನ್’ಗಳನ್ನು ಮಲಗುವ ಮುನ್ನ ಆಫ್ ಮಾಡಿಕೊಳ್ಳಿ ಆಗ ನಿದ್ರೆಯು ನಿಮ್ಮತ್ತ ಸುಳಿಯುತ್ತದೆ.

ಕೆಲ ಶಬ್ದಗಳು ನಿಮ್ಮನ್ನು ನಿದ್ರೆಗೆ ಜಾರಿಸುವಲ್ಲಿ ಸಹಕಾರಿಯಾಗುತ್ತದೆ. ಅದರಲ್ಲಿ ನೀರು ಹರಿಯುವ ತಣ್ಣನೆಯ ಶಬ್ದ. ಕಾಡಿನ ಎಲೆ, ಜರಿಗಳ ಶಬ್ದವು ಒಂದಾಗಿದೆ.

ಚೆರಿ ಜ್ಯೂಸ್ ಕುಡಿಯುವುದು ಕೂಡ ನಿದ್ರೆ ಆವರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಮೆಲಟೋನಿನ್ ನಿದ್ರೆ ಆವರಿಸುವಂತೆ ಮಾಡುತ್ತದೆ.

ನಿದ್ರೆ ಮಾಡುವ ಕೊಠಡಿಯಲ್ಲಿ ನಿಂಬೆಯ ಹಣ್ಣನ್ನು ಇರಿಸಿ. ಇದು ಅಲರ್ಜಿ ಸಮಸ್ಯೆಯನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಇದರ ಪರಿಮಳವು ಕೂಡ ನಿಮಗೆ ನಿದ್ರೆ ತರಿಸಲು ಸಹಾಯ ಮಾಡುತ್ತದೆ.