‘ಮಹಾಭಾರತದ ಸಂಧಾನ ಪ್ರಯತ್ನವೂ ವಿಫಲವಾಗಿತ್ತು’| ಅಯೋಧ್ಯೆ ಕುರಿತು ಮಾರ್ಮಿಕ ಹೇಳಿಕೆ ನೀಡಿದ ಉತ್ತರಪ್ರದೇಶ ಮುಖ್ಯಮಂತ್ರಿ| ಸುಪ್ರೀಂಕೋರ್ಟ್ ಸಂಧಾನ ಸಮಿತಿ ಪ್ರಯತ್ನ ಶ್ಲಾಘಿಸಿದ ಯೋಗಿ ಆದಿತ್ಯನಾಥ್| ಅಯೋಧ್ಯೆ ವಿವಾದ ಕೋರ್ಟ್’ನಲ್ಲೇ ಬಗೆಹರಿಯಲಿ ಎಂದ ಯೋಗಿ| ಆ.06ರಿಂದ ಅಯೋಧ್ಯೆ ವಿವಾದ ಪ್ರಕರಣದ ಪ್ರತಿದಿನ ವಿಚಾರಣೆ|

ಲಕ್ನೋ(ಆ.03): ಅಯೋಧ್ಯೆ ರಾಮಜನ್ಮಭೂಮಿ ವಿವಾದ ಶಮನಕ್ಕೆ ಸುಪ್ರೀಂಕೋರ್ಟ್ ಸಂಧಾನ ಸಮಿತಿ ವಿಫಲವಾದ ಹಿನ್ನೆಲೆಯಲ್ಲಿ, ಮಹಾಭಾರತದ ಸಂಧಾನವೂ ವಿಫಲವಾಗಿತ್ತು ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಾರ್ಮಿಕವಾಗಿ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಸಂಧಾನ ಸಮಿತಿಯ ಪ್ರಯತ್ನವನ್ನು ಶ್ಲಾಘಿಸಿರುವ ಯೋಗಿ, ಮಹಾಭಾರತ ಯುದ್ಧಕ್ಕೂ ಮೊದಲು ಇಂತದ್ದೇ ಸಂಧಾನ ನಡೆಸಲು ವಿಫಲ ಪ್ರಯತ್ನ ನಡೆಸಲಾಗಿತ್ತು ಎಂದು ಹೇಳಿದ್ದಾರೆ.

Scroll to load tweet…

ಅಯೋಧ್ಯೆ ವಿವಾದವನ್ನು ನ್ಯಾಯಾಲಯದ ಹೊರಗೆ ಬಗೆಹರಿಸುವ ಪ್ರಯತ್ನದ ಭಾಗವಾಗಿ ಸುಪ್ರೀಂಕೋರ್ಟ್ ಸಂಧಾನ ಸಮಿತಿಯನ್ನು ರಚಿಸಿತ್ತು. ಆದರೆ ಸಂಧಾನಕ್ಕೆ ಬರಲು ಎರಡೂ ಪಕ್ಷಗಳು ನಿರಾಕರಿಸಿದ ಹಿನ್ನೆಲೆಯಲ್ಲಿ ಇದೇ ಆ.06 ರಿಂದ ಅಯೋಧ್ಯೆ ವಿವಾದದ ಕುರಿತು ಪ್ರತಿದಿನ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರ್ಣಯಿಸಿದೆ.