Asianet Suvarna News Asianet Suvarna News

ಬೆಂಗಳೂರಿಗೆ ಯೋಗಿ ಆಗಮನ; ಕಮಲ ಪಾಳಯದಲ್ಲಿ ಸಂಚಲನ

ವಿಧಾನಸಭೆ ಚುನಾವಣೆಗೆ ಬಿಜೆಪಿ ಆರಂಭಿಸಿರುವ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​ ಬೆಂಗಳೂರಿಗೆ ಆಗಮಿಸಿದ್ದಾರೆ.

Yogi Adityanath Came to Bengaluru today

ಬೆಂಗಳೂರು (ಜ.08): ವಿಧಾನಸಭೆ ಚುನಾವಣೆಗೆ ಬಿಜೆಪಿ ಆರಂಭಿಸಿರುವ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​ ಬೆಂಗಳೂರಿಗೆ ಆಗಮಿಸಿದ್ದಾರೆ.

ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ ನಡೆದ 2ನೇ ಹಂತದ ಪರಿವರ್ತನಾ ಯಾತ್ರೆಯಲ್ಲಿ ಯೋಗಿ ಪಾಲ್ಗೊಂಡಿದ್ದರು. ಇದೀಗ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಿರುವ ಬೃಹತ್‌ ಸಮಾವೇಶದಲ್ಲಿ  ಬಾಗಿಯಾಗಿದ್ದಾರೆ. ಬಿಎಸ್​​​ವೈ, ಅನಂತ ಕುಮಾರ್​​ ಸೇರಿ ಹಲವರು ಭಾಗಿಯಾಗಿದ್ದಾರೆ. ಸಮಾವೇಶದಲ್ಲಿ ಮೋದಿ ಪರ ವ್ಯಾಪಕ ಜಯಘೋಷ ವ್ಯಕ್ತವಾಗಿದೆ.

ಎಲ್ಲಾ ಯೋಜನೆಗಳ ಲಾಭ ರಾಜ್ಯಕ್ಕೆ ಸಿಗಲು ಬಿಜೆಪಿ ಬೇಕು. ಬೆಂಗಳೂರಿನ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ. ಬೆಂಗಳೂರಿಗೆ ಏರ್​ಪೋರ್ಟ್​, ಮೆಟ್ರೋ ಸಿಕ್ಕಿದೆ. ಮೋದಿ ಪ್ರಧಾನಿಯಾದ ಮೇಲೆ ಬೆಂಗಳೂರಿಗೆ ಸ್ಮಾರ್ಟ್​ ಸಿಟಿ ಪಟ್ಟ ಸಿಕ್ಕಿದೆ. ಇದನ್ನು ಮುಂದುವರಿಸಲು ರಾಜ್ಯ ಸರ್ಕಾರ ಶ್ರಮವಹಿಸಬೇಕು. ಆದರೆ ಕೇಂದ್ರದ ಯೋಜನೆಯ ಹಣ ರಾಜ್ಯದಲ್ಲಿ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ರಾಜ್ಯ-ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಎಲ್ಲವೂ ಸಾಧ್ಯ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಕಾಂಗ್ರೆಸ್​ ಪಕ್ಷ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡುತ್ತಿಲ್ಲ.  ಕಾಂಗ್ರೆಸ್​ ಪಕ್ಷಕ್ಕೆ ಕರ್ನಾಟಕ ಕೇವಲ ಎಟಿಎಂ ಮಾತ್ರ. ಈ ಪಕ್ಷವನ್ನ ದೇಶದೆಲ್ಲೆಡೆ ಜನ ತಿರಸ್ಕರಿಸುತ್ತಿದ್ದಾರೆ.  ಗುಜರಾತ್​, ಹಿಮಾಚಲ ಪ್ರದೇಶವೇ ಇದಕ್ಕೆ ಉದಾಹರಣೆ ಎಂದು ಯೋಗಿ ಹೇಳಿದ್ದಾರೆ.

 

Latest Videos
Follow Us:
Download App:
  • android
  • ios