ಕರ್ತವ್ಯದ ಅವಧಿಯಲ್ಲಿ ಪಾನ್, ಪಾನ್ ಮಸಾಲ ಮತ್ತು ಗುಟ್ಕಾವನ್ನು ಜಗಿಯಬಾರದೆಂದು ರಾಜ್ಯ ಸರ್ಕಾರಿ ನೌಕರರಿಗೆ  ಉತ್ತರ ಪ್ರದೇಶ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಸೂಚಿಸಿದ್ದಾರೆ.

ನವದೆಹಲಿ (ಮಾ.22): ಕರ್ತವ್ಯದ ಅವಧಿಯಲ್ಲಿ ಪಾನ್, ಪಾನ್ ಮಸಾಲ ಮತ್ತು ಗುಟ್ಕಾವನ್ನು ಜಗಿಯಬಾರದೆಂದು ರಾಜ್ಯ ಸರ್ಕಾರಿ ನೌಕರರಿಗೆ ಉತ್ತರ ಪ್ರದೇಶ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದೇ ರೀತಿ ಆಸ್ಪತ್ರೆ, ಶಾಲಾ-ಕಾಲೇಜುಗಳಲ್ಲೂ ಕೂಡಾ ತಂಬಾಕು ಉತ್ಪನ್ನಗಳನ್ನು ನಿಷೇಧಿಸಲಾಗಿದೆ. ಸರ್ಕಾರಿ ಕಚೇರಿ ಆವರಣದೊಳಗೆ ತಂಬಾಕು ಉತ್ಪನ್ನಗಳನ್ನು ಬಳಸುವಂತಿಲ್ಲ.

ಇದೇ ಸಂದರ್ಭದಲ್ಲಿ ಚುನಾವಣಾ ಸಂದರ್ಭದಲ್ಲಿ ಹೇಳಿದಂತೆ ಕಸಾಯಿಖಾನೆಯನ್ನು ಮುಚ್ಚಲು ಪೂರ್ವ ತಯಾರಿ ನಡೆಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಹಸು ಕಳ್ಳಸಾಗಾಣಿಕೆಯನ್ನು ಸೂಚಿಸಿದ್ದಾರೆ. ಹಾಗೂ ಕಂಬಳಿ ನಿಷೇಧ ಮಾಡುವುದಕ್ಕೂ ಆದೇಶಿಸಿದ್ದಾರೆ.

ಅನುಮತಿಯಿಲ್ಲದೇ ಅಕ್ರಮವಾಗಿ ನಡೆಸುತ್ತಿದ್ದ ಅಲಹಾಬಾದ್, ವಾರಣಾಸಿಯಲ್ಲಿನ ಕಸಾಯಿಖಾನೆಯನ್ನು ಈಗಾಗಲೇ ಮುಚ್ಚಲಾಗಿದೆ. ಈ ಬಗ್ಗೆ ರಾಜ್ಯಾದ್ಯಂತ ತನಿಖೆ ನಡೆಸಲಾಗುತ್ತಿದೆ.