Asianet Suvarna News

ಅನುದಾನ ಕೇಳಿದ್ರೆ ಫೈನಾನ್ಸ್ ಮಿನಿಸ್ಟರಾ ಅಂತಾರೆ: ಸಿದ್ದುಗೆ ಸೋಮಶೇಖರ್ ಟಾಂಗ್

ಅಭಿವೃದ್ಧಿ ಮಾಡೋಕೆ ಅನುದಾನ ಕೇಳಿದ್ರೆ ಫೈನಾನ್ಸ್‌ ಮಿನಿಸ್ಟರಾ ಎಂದು ಕೇಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌. ಟಿ. ಸೋಮಶೇಖರ್ ಟಾಂಗ್ ನೀಡಿದ್ದಾರೆ.

 

Yeswanthpur bjp candidate st somashekar taunts siddaramaiah
Author
Bangalore, First Published Nov 23, 2019, 12:21 PM IST
  • Facebook
  • Twitter
  • Whatsapp

ಬೆಂಗಳೂರು(ನ.23): ಅಭಿವೃದ್ಧಿ ಮಾಡೋಕೆ ಅನುದಾನ ಕೇಳಿದ್ರೆ ಫೈನಾನ್ಸ್‌ ಮಿನಿಸ್ಟರಾ ಎಂದು ಕೇಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌. ಟಿ. ಸೋಮಶೇಖರ್ ಟಾಂಗ್ ನೀಡಿದ್ದಾರೆ.

ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಎಸ್.ಟಿ ಸೋಮಶೇಖರ್, ಸಿದ್ದರಾನಯ್ಯ ಅವರ ಮಾತು ಕೇಳಿದ್ದೇನೆ. ನಾನು ಯಶವಂತಪುರ ಕ್ಷೇತ್ರ ಅಭಿವೃದ್ದಿ ಮಾಡಿರುವ ಬಗ್ಗೆ ಕಮೆಂಟ್ ಮಾಡಿದ್ದಾರೆ. ನಾನೇನು ಫೈನಾನ್ಸ್ ಮಿನಿಸ್ಟರ್ ಆಗಿದ್ದೆನಾ ಎಂದು ಪ್ರಶ್ನಿಸಿದ್ದಾರೆ.

ಕೆ. ಆರ್. ಪೇಟೆ: ಮತದಾರರ ಸೆಳೆಯಲು ಕಾಂಗ್ರೆಸ್ 'ಜಾದೂ' ಪ್ರಯೋಗ

ಅವರು ಸಿಎಂ ಆಗಿದ್ದಾಗ ಶಾಸಕನಾಗಿ ನನ್ನ ಒಂದು ಮತ ಕೂಡ ಇರುತ್ತೆ. ಅವರ ಬಳಿ ಕ್ಷೇತ್ರದ ಅಭಿವೃದ್ದಿಗೆ ನಾನು ಅನುದಾನ ಕೇಳಿದ್ದೇನೆ. ಅನುದಾನ ಕೊಡೋದು ಅವರ ಕರ್ತವ್ಯ. ಅಭಿವೃದ್ದಿ ಮಾಡೊದು ನನ್ನ ಕರ್ತವ್ಯ. ಅದಕ್ಕೆ ನಾನು ಫೈನಾನ್ಸ್ ಮಿನಿಸ್ಟರ್ ಆಗಿದ್ದೆನಾ ಎಂದು ಕೇಳಿದ್ರೆ ಏನರ್ಥ..? ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಸರ್ಕಾರ ಬೀಳೊದು ಮೊದಲೇ ಗೊತ್ತಿತ್ತು. ಲೋಕಸಭೆ ಚುನಾವಣೆ ಆದ್ಮೇಲೆ ಸರ್ಕಾರ ಬೀಳುತ್ತೆ ಅಂತ ಗೊತ್ತಿದ್ರೂ, ಎರಡು ವರ್ಷ ಆದ್ಮೇಲೆ ಮಂತ್ರಿ ಮಾಡ್ತೇನೆ ಅಂತ ಹೇಳ್ತಿದ್ರು. ಸಿದ್ದರಾಮಯ್ಯ ಅವರು ಈ ಮಾತನ್ನ ನಾವು ನಂಬಬೇಕಾ..? ನಾನು ಮಂತ್ರಿ ಮಾಡಿ, ಬಿಡಿಎ ಅಧ್ಯಕ್ಷ ಸ್ಥಾನ ಕೊಡಿ ಎಂದು ಕೇಳಿರಲಿಲ್ಲ. ಕ್ಷೇತ್ರದ ಅಭಿವೃದ್ದಿಗೆ ಅನುದಾನ ಕೊಡಿ ಎಂದು ಮಾತ್ರ ಕೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

'BJPಯವರು ದುಡ್ಡು, ಸೀರೆ ಏನ್ ಕೊಟ್ರೂ ಕಿತ್ಕೊಳ್ಳಿ, ಓಟ್ ಮಾತ್ರ ನಂಗೆ ಹಾಕಿ'..!

ಯಶವಂತಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರಕೆಯ ಕುರಿ. ಅದು ಪಾಳ್ಯ ನಾಗರಾಜ್ ಅವರಿಗು ಗೊತ್ತಿದೆ. ಜೆಡಿಎಸ್ ಅಭ್ಯರ್ಥಿ ಜೊತೆ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದೆ. ಆದರೆ ಜನ ನನ್ನ ಪರ ಇದ್ದಾರೆ. ನಾನು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ದಿ ಪರ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾವು ಕಟ್ಟಿದ ಹುತ್ತಕ್ಕೆ 'ನಾಗರಾಜ' ಬಂದು ಸೇರಿದ: ಶರತ್.

Follow Us:
Download App:
  • android
  • ios