Asianet Suvarna News Asianet Suvarna News

ಕೆ. ಆರ್. ಪೇಟೆ: ಮತದಾರರ ಸೆಳೆಯಲು ಕಾಂಗ್ರೆಸ್ 'ಜಾದೂ' ಪ್ರಯೋಗ..!

ಉಪಚುನಾವಣೆ ಸಮೀಪಿಸಿದ್ದು, ಮಂಡ್ಯದ ಕೆ. ಆರ್. ಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮ್ಯಾಜಿಕ್ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಮತದಾರರನ್ನು ಸೆಳೆಯಲು ಮ್ಯಾಜಿಕ್ ಶೋ ನಡೆಸಲಾಗುತ್ತಿದ್ದು, ಈ ಮೂಲಕ ಮತದಾರರನ್ನು ಸೆಳೆಯಲಾಗುತ್ತಿದೆ. ಸಿಎಂ ಯಡಿಯೂರಪ್ಪ ಹುಟ್ಟಿದ ಬೂಕನಕೆರೆ ಸ್ಥಳ ಬರುವಂತಹ ಕ್ಷೇತ್ರದ ಅಕ್ಕಿಹೆಬ್ಬಾಳು ಪ್ರದೇಶದಲ್ಲಿಯೇ ಕಾಂಗ್ರೆಸ್ ಮತಸೆಳೆಯುವ ಮ್ಯಾಜಿಕ್ ಶೋ ಮಾಡ್ತಿರೋದು ವಿಶೇಷ.

kr pet congress candidate kb chandrashekar organizing magic show to attract voters
Author
Bangalore, First Published Nov 23, 2019, 11:41 AM IST

ಮಂಡ್ಯ(ನ.23): ಚುನಾವಣೆ ಸಮೀಪಿಸಿದ್ದು, ಮಂಡ್ಯದ ಕೆ. ಆರ್. ಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮ್ಯಾಜಿಕ್ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಮತದಾರರನ್ನು ಸೆಳೆಯಲು ಮ್ಯಾಜಿಕ್ ಶೋ ನಡೆಸಲಾಗುತ್ತಿದ್ದು, ಈ ಮೂಲಕ ಮತದಾರರನ್ನು ಸೆಳೆಯಲಾಗುತ್ತಿದೆ.  ಸಿಎಂ ಯಡಿಯೂರಪ್ಪ ಹುಟ್ಟಿದ ಬೂಕನಕೆರೆ ಸ್ಥಳ ಬರುವಂತಹ ಕ್ಷೇತ್ರದ ಅಕ್ಕಿಹೆಬ್ಬಾಳು ಪ್ರದೇಶದಲ್ಲಿಯೇ ಕಾಂಗ್ರೆಸ್ ಮತಸೆಳೆಯುವ ಮ್ಯಾಜಿಕ್ ಶೋ ಮಾಡ್ತಿರೋದು ವಿಶೇಷ.

ಮಂಡ್ಯ ಕೆ. ಆರ್. ಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕೆ.ಬಿ. ಚಂದ್ರಶೇಖರ್, ಬಿಜೆಪಿಯಿಂದ ಕೆ. ಸಿ. ನಾರಾಯಣ ಗೌಡ ಸ್ಪರ್ಧಿಸುತ್ತಿದ್ದು ಈಗಾಗಲೇ ಚುನಾವಣಾ ಅಖಾಡ ರಂಗೇರಿದೆ. ಬಿರುಸಿನ ಪ್ರಚಾರ ಆರಂಭವಾಗಿದ್ದು, ಕೆ. ಬಿ ಚಂದ್ರಶೇಖರ್ ಅವರು ಮತದಾರರನ್ನು ಸೆಳೆಯಲು ಹೊಸ ಪ್ರಯೋಗ ಮಾಡಿದ್ದಾರೆ.

'BJPಯವರು ದುಡ್ಡು, ಸೀರೆ ಏನ್ ಕೊಟ್ರೂ ಕಿತ್ಕೊಳ್ಳಿ, ಓಟ್ ಮಾತ್ರ ನಂಗೆ ಹಾಕಿ'..!

ಕೆಆರ್ ಪೇಟೆ ಉಪ‌‌ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಮ್ಯಾಜಿಕ್ ಪ್ರಚಾರ ನಡೆಸಲಾಗುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಪ್ರಚಾರಕ್ಕೆ ಜಾದುಗಾರನ ಮೊರೆ ಹೋಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ‌. ಬಿ. ಚಂದ್ರಶೇಖರ್ ಮತದಾರರ ಸೆಳೆಯಲು ವಿನೂತನ ಪ್ರಯತ್ನ ಮಾಡಿದ್ದು, ಅಕ್ಕಿ ಹೆಬ್ಬಾಳು ಗ್ರಾಮದ ಕರ್ನಾಟಕ ಜಾದೂಗಾರ್ ನಿಂದ ಜಾದೂ ಪ್ರದರ್ಶನ ನಡೆಯುತ್ತಿದೆ.

ಅಭ್ಯರ್ಥಿ ಬರುವ ಮೊದಲು ಗ್ರಾಮಗಳಿಗೆ ತೆರಳುವ ಜಾದೂಗಾರ್ ಮತದಾರರನ್ನ ಒಂದೆಡೆ ಸೇರಿಸಿ ಜಾದೂ ಮಾಡುತ್ತಿದ್ದಾನೆ. ಜಾದೂ ನೋಡಲು ಜನ ಸೇರುವುದರಿಂದ ಅಲ್ಲಿಯೇ ಚುನಾವಣಾ ಪ್ರಚಾರವನ್ನೂ ಮಾಡಲಾಗುತ್ತಿದೆ.

ಕೆ. ಆರ್ ಪೇಟೆ: BJP ಅಭ್ಯರ್ಥಿಯ ಅಣ್ಣನಿಂದ ಕಾಂಗ್ರೆಸ್ ಪರ ಪ್ರಚಾರ..!

ಜಾದೂಗಾರ ಬಂದ ಕೆಲವು ನಿಮಿಷಗಳ ನಂತರ ಕಾಂಗ್ರೆಸ್ ಅಭ್ಯರ್ಥಿ ಕೆ. ಬಿ. ಚಂದ್ರಶೇಖರ್ ಗ್ರಾಮಕ್ಕೆ ಬರುತ್ತಿರುವುದರಿಂದ ಅಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇಂದು ಕೆ. ಆರ್. ಪೇಟೆ ತಾಲೂಕಿನ ಶೀಳನೆರೆ ಹೋಬಳಿ ವ್ಯಾಪ್ತಿಗಳ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ‌. ಬಿ. ಚಂದ್ರಶೇಖರ್ ಪ್ರಚಾರ ಮಾಡುತ್ತಿದ್ದಾರೆ.

ಮಂಡ್ಯ: ಚುಂಚನಗಿರಿ ಶ್ರೀಗಳ ಹೆಸರು ದುರ್ಬಳಕೆ.

Follow Us:
Download App:
  • android
  • ios