ಈ ಕುರಿತು ಯಾವುದೇ ನಿರ್ಣಯ ಕೈಗೊಳ್ಳಲು ಸಾಮಾನ್ಯವಾಗಿ ಮೂರ್ನಾಲ್ಕು ತಿಂಗಳುಗಳು ಬೇಕಾತ್ತದೆ. ಅಂತಿಮ ತೀರ್ಮಾನ ಕೈಗೊಳ್ಳುವರೆಗೆ ಹಾಲಿ ಚಿಹ್ನೆಯನ್ನು ಸ್ಥಗಿತಗೊಳಿಸಲಾಗುವುದು ಹಾಗೂ ಎರಡು ಬಣಗಳಿಗೆ ತಾತ್ಕಾಲಿಕ ಚಿಹ್ನೆಯನ್ನು ನೀಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಶಿ ಹೇಳಿದ್ದಾರೆ.

ನವದೆಹಲಿ (ಜ,02): ಸಮಾಜವಾದಿ ಪಕ್ಷದ ಒಳಜಗಳ ರಾಷ್ಟ್ರೀಯ ಚುನಾವಣಾ ಆಯೋಗದ ಮೆಟ್ಟಿಲೇರಿದೆ. ತಮಗೆ ಅಧಿಕೃತ ಸಮಾಜವಾದಿ ಪಕ್ಷದ ಮಾನ್ಯತೆ ನೀಡಬೇಕೆಂದು ಅಪ್ಪ ಮುಲಾಯಂ ಸಿಂಗ್ ಹಾಗೂ ಪುತ್ರ ಅಖಿಲೇಶ್ ಇಬ್ಬರು ಕೂಡಾ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಯಾವುದೇ ನಿರ್ಣಯ ಕೈಗೊಳ್ಳಲು ಸಾಮಾನ್ಯವಾಗಿ ಮೂರ್ನಾಲ್ಕು ತಿಂಗಳುಗಳು ಬೇಕಾತ್ತದೆ. ಅಂತಿಮ ತೀರ್ಮಾನ ಕೈಗೊಳ್ಳುವರೆಗೆ ಹಾಲಿ ಚಿಹ್ನೆಯನ್ನು ಸ್ಥಗಿತಗೊಳಿಸಲಾಗುವುದು ಹಾಗೂ ಎರಡು ಬಣಗಳಿಗೆ ತಾತ್ಕಾಲಿಕ ಚಿಹ್ನೆಯನ್ನು ನೀಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಶಿ ಹೇಳಿದ್ದಾರೆ.

ಇಂತಹ ಪ್ರಕರಣಗಳಲ್ಲಿ ಎರಡು ಬಣಗಳಿಗೆ ತಮ್ಮ ವಾದವನ್ನು ಮುಂದಿಡುವ ಅವಕಾಶ ನೀಡಬೇಕಾಗುತ್ತದೆ. ಅವರ ಸಂವಿಧಾನ, ಅವರಿಗಿರುವ ಬೆಂಬಲ, ಮುಂತಾದವುಗಳನ್ನು ಪರಿಗಣಿಸಿ ಚುನಾವಣಾ ಆಯೋಗ ಮುಂದುವರಿಯಬೇಕಾಗುತ್ತದೆ, ಎಂದು ಅವರು ಹೇಳಿದ್ದಾರೆ.

ಇಂದು ಬೆಳಗ್ಗೆ ಮಾತನಾಡಿದ ಮುಲಾಯಂ ಸಿಂಗ್, ತಾನು 25 ವರ್ಷಗಳ ಹಿಂದೆ ಪಕ್ಷವನ್ನು ರಚಿಸಿರುವುದಾಗಿ, ಸೈಕಲ್ ಚಿಹ್ನೆಯು ನನ್ನ ಸಹಿಯಿದ್ದಂತೆ ಎಂದು ಹೇಳಿದ್ದಾರೆ.