ನವದೆಹಲಿ[ಜೂ.11]: ಕಳೆದ 8 ದಿನಗಳ ಹಿಂದೆ ನಾಪತ್ತೆಯಾಗಿದ್ದ, ಭಾರತೀಯ ವಾಯುಪಡೆಯ AN-32 ವಿಮಾನದ ಅವಶೇಷಗಳು ಅರುಣಾಚಲ ಪ್ರದೇಶದ ಶಿಯಾಂಗ್ನಲ್ಲಿ ಪತ್ತೆಯಾಗಿವೆ. ತೀವ್ರ ಶೋಧ ನಡೆಸಿದ ಭಾರತೀಯ ಸೇನೆಗೆ ಕುರುಹುಗಳು ಪತ್ತೆಯಾಗಿವೆ.

ನಾಪತ್ತೆಯಾಗಿದ್ದ ವಿಮಾನಕ್ಕಾಗಿ ತೀವ್ರ ಶೋಧ ನಡೆಸಲಾಗಿತ್ತು. ಮೂರು ದಿನಗಳ ಹಿಂದೆ AN-32 ವಿಮಾನ ಪತ್ತೆ ಹಚ್ಚಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನೆರವನ್ನೂ ಪಡೆಯಲಾಗಿತ್ತು. ಅಲ್ಲದೇ ಭಾರತೀಯ ನೌಕಾಪಡೆಯ ಬೇಹುಗಾರಿಕಾ ವಿಮಾನಗಳನ್ನೂ ಈ ಕಾರ್ಯಾಚರಣೆಗೆ ಬಳಸಲಾಗಿತ್ತು. ಆದರೀಗ ಬರೋಬ್ಬರಿ 8 ದಿನಗಳ ಬಳಿಕ AN-32 ವಿಮಾನದ ಅವಶೇಷ ಪತ್ತೆಯಾಗಿದೆ.

ಐಎಎಫ್ ವಿಮಾನ ಕಣ್ಮರೆ: ಕ್ಲೌಡಿ ವೆದರ್ ಎಂದು ಮೋದಿ ಕಾಲೆಳೆದ ಪಾಕ್ ನಟಿ!

ಜೂ. 3ರಂದು ಏಳು ಹಿರಿಯ ಹಿರಿಯ ಅಧಿಕಾರಿಗಳು ಮತ್ತು ಆರು ವಾಯು ಯೋಧರು ಪ್ರಯಾಣಿಸುತ್ತಿದ್ದ ವಿಮಾನ ಅರುಣಾಚಲ ಪ್ರದೇಶದಲ್ಲಿ ಕಟ್ಟ ಕಡೆಯ ಬಾರಿಗೆ ರೆಡಾರ್ ಸಂಪರ್ಕದಿಂದ ಕಣ್ಮರೆಯಾಗಿತ್ತು. ಈ ವಿಚಾರವಾಗಿ ಪಾಕಿಸ್ತಾನದ ನಟಿ ವೀಣಾ ಮಲಿಕ್ ಟ್ವೀಟ್ ಮಾಡುತ್ತಾ ಪ್ರಧಾನಿ ಮೋದಿ ಕಾಲೆಳೆದಿದ್ದರು.

ಇನ್ನು AN-32 ವಿಮಾನದಲ್ಲಿದ್ದ ತುರ್ತು ಸಂದೇಶ ರವಾನೆ ವ್ಯವಸ್ಥೆ ಕಳೆದ 14 ವರ್ಷಗಳಿಂದ ಕಾರ್ಯ ನಿರ್ವಹಿಸದೆ ನಿಷ್ಕ್ರಿಯಗೊಂಡಿತ್ತು ಎಂಬ ವಿಚಾರವೂ ಬೆಲಕಿಗೆ ಬಂದಿತ್ತು.