ಮುಳುಗಿದ್ದ ಯುದ್ಧ ನೌಕೆಯೊಂದು ಪತ್ತೆಯಾಗಿದ್ದು ಅಪಾರ ಪ್ರಮಾಣದ ಚಿನ್ನದ ಗಣಿಯೇ ಇರುವ ಸಾಧ್ಯೆತೆಯಿದೆ ಎಂದು ಹೇಳಲಾಗಿದೆ. 113 ವರ್ಷಗಳ ಹಿಂದೆ ಸಮುದ್ಮುರದ ತಳ ಸೇರಿದ್ಳುದ ರಷ್ಯಾದ ಯುದ್ಧ ನೌಕೆ ಡಿಮಿಟ್ರಿ ಡಾನ್ಸ್ಕೋಯಿ ಪತ್ತೆಯಾಗಿದ್ದು ಚಿನ್ನದ ಬಿಸ್ಕಟ್ ಗಳ ಖಜಾನೆಯೆ ಅದರೊಳಗಿದೆ.
ದಕ್ಷಿಣ ಕೊರಿಯಾ[ಜು.19] ದಕ್ಷಿಣ ಕೊರಿಯಾದ ಉಲೆಂಗ್ಡೋ ದ್ವೀಪ ಪ್ರದೇಶದಲ್ಲಿನ ಈಜುಗಾರರಿಗೆ ಕಾಣಿಸಿದ ಮುಳುಗಿದ್ದ ಯುದ್ಧ ನೌಕೆಯೊಂದು ಚಿನ್ನದ ಗಣಿಯನ್ನೇ ಕಂಡುಹಿಡಿದಂತಾಗಿದೆ. ಈಜುಗಾರರಿಗೆ ಈ ಯುದ್ಧ ನೌಕೆ ಕಾಣಿಸಿದ್ದು, ನೌಕೆಯ ಒಳಗಡೆ ಇರುವ 5,500 ಬಾಕ್ಸ್ ನಲ್ಲಿ ಚಿನ್ನದ ಬಿಸ್ಕೆಟ್ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸುಮಾರು 430 ಮೀಟರ್ ಆಳದಲ್ಲಿ ಈ ನೌಕೆ ಪತ್ತೆಯಾಗಿದೆ. ಇತಿಹಾಸದ ಪುಟದಲ್ಲಿದ್ದ ನೌಕೆಗೆ ಹಲವಾರು ವರ್ಷಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಕೆನಡಾ, ಬ್ರಿಟನ್, ಚೀನಾ, ದಕ್ಷಿಣ ಕೊರಿಯಾದ ಸಹಾಯದಿಂದ ಹುಡುಕಾಟ ನಡೆಸಲಾಗಿತ್ತು. ಜಪಾನಿನೊಂದಿಗೆ ಯುದ್ಧ ನಡೆಯುವ ಸಂದರ್ಭದಲ್ಲಿ ಈ ಯುದ್ಧ ನೌಕೆ ಮುಳುಗಿತ್ತು.
ಒಂದನೇ ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಸಮುದ್ರ ಮಾರ್ಗದಲ್ಲಿ ಸಂಚರಿಸುವ ವೇಳೆ, ವೖರಿಗಳ ದಾಳಿ ನಡೆದ ವೇಳೆ ಚಿನ್ನಮತ್ತು ಬೆಳ್ಳಿ ತುಂಬಿದ ಅದೆಷ್ಟೋ ನೌಕೆಗಳು ಸಮುದ್ರದ ಸ್ಥಳ ಸೇರಿದ ದಾಖಲೆಗಳಿವೆ. ಅನೇಕ ನೌಕೆಗಳ ಹುಡುಕಾಟ ನಡೆಸಲು ಪುರಾವೆ ಇದ್ದರೆ ಇನ್ನು ಕೆಲವಕ್ಕೆ ದಾಖಲೆಗಳೆ ಇಲ್ಲ.
