Asianet Suvarna News Asianet Suvarna News

(ವಿಡಿಯೋ) ವಿಶ್ವದ ಅತಿದೊಡ್ಡ ವಿಮಾನ ಅನಾವರಣ: ಪ್ರಯಾಣಿಕ ವಿಮಾನವಲ್ಲ, ರಾಕೆಟ್ ಹಾರಾಟದ ಉದ್ದೇಶದ ವಿಮಾನ

ಫುಟ್ಬಾಲ್ ಮೈದಾನದಷ್ಟುವಿಶಾಲವಿರುವ ಹಾಗೂ ವಿಶ್ವದ ಅತಿದೊಡ್ಡ ವಿಮಾನ ಎಂದು ಖ್ಯಾತಿ ಪಡೆದಿರುವ ‘ಸ್ಟ್ರಾಟೋಲಾಂಚ್' ವಿಮಾನ ಇದೇ ಮೊದಲ ಬಾರಿ ಗುರುವಾರ ಅನಾವರಣಗೊಂಡಿದೆ.

Worlds Largest Airplane Ready for Testing

ವಾಷಿಂಗ್ಟನ್(ಜೂ.02): ಫುಟ್ಬಾಲ್ ಮೈದಾನದಷ್ಟುವಿಶಾಲವಿರುವ ಹಾಗೂ ವಿಶ್ವದ ಅತಿದೊಡ್ಡ ವಿಮಾನ ಎಂದು ಖ್ಯಾತಿ ಪಡೆದಿರುವ ‘ಸ್ಟ್ರಾಟೋಲಾಂಚ್' ವಿಮಾನ ಇದೇ ಮೊದಲ ಬಾರಿ ಗುರುವಾರ ಅನಾವರಣಗೊಂಡಿದೆ.

ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಪೌಲ್ ಅಲೆನ್ ಒಡೆ ತನಕ್ಕೆ ಸೇರಿದ ‘ಸ್ಟ್ರಾಟೋಲಾಂಚ್' ವಿಮಾನವು ಕ್ಯಾಲಿಫೋರ್ನಿಯಾ ಮರುಭೂಮಿಯಲ್ಲಿ ಇಂಧನ ತಪಾ ಸಣೆ ಸಂಬಂಧ ಮೊದಲ ಬಾರಿ ಕಾಣಿಸಿಕೊಂಡಿತು. ಖುದ್ದು ಅಲೆನ್ ಇದರ ಅನಾವರಣ ಮಾಡಿದರು.

ಹಾಗಿದ್ದರೆ ಇದು ಎಷ್ಟುಪ್ರಯಾಣಿಕರನ್ನು ಹಿಡಿಸಬಹು ದು ಎಂಬ ಕುತೂಹಲ ಮೂಡುವುದು ಸಹಜ. ಆದರೆ ಇದು ವಿಮಾನ ಪ್ರಯಾಣವಲ್ಲ. ರಾಕೆಟ್ ಉಡಾವಣೆಗೆ ಸಂಬಂಧಿಸಿದ ವಿಮಾನ. ಭೂಮಿಯಿಂದ ರಾಕೆಟ್ ಹಾರಿ ಸುವ ವೆಚ್ಚ ಹೆಚ್ಚಾಗುತ್ತದೆ. ಹೀಗಾಗಿ ವಿಮಾನದ ಮೂಲಕ ರಾಕೆಟ್ ಉಡಾವಣೆ ಮಾಡಿದರೆ ವೆಚ್ಚ ಕಡಿಮೆಯಾಗುವ ದೃಷ್ಟಿಯಿಂದ ಈ ವಿಮಾನ ಸಿದ್ಧಪಡಿಸಲಾಗಿದೆ.

2019ರಲ್ಲಿ ಇದರಿಂದ ರಾಕೆಟ್ ಉಡಾವಣೆ ನಿರೀಕ್ಷೆ ಇದೆ. ಈವರೆಗೆ, 1947ರಲ್ಲಿ ನಿರ್ಮಿತ ವಾದ ಹೋವರ್ಡ್ ಹ್ಯೂಸ್ ಕಂಪನಿಯ 'ಸ್ಪ್ರ್ಯೂಸ್ ಗೂಸ್' ವಿಮಾನ ವಿಶ್ವದ ಅತಿದೊಡ್ಡ ವಿಮಾನ ಎನ್ನಿಸಿಕೊಂಡಿತ್ತು.

 

 

 

 

 

 

 

 

 

 

 

ವಿಶೇಷತೆಗಳು:

50 ಅಡಿ: ವಿಮಾನದ ಎತ್ತರ

28 ಗಾಲಿ: ವಿಮಾನಕ್ಕಿರುವ ಗಾಲಿಗಳ ಸಂಖ್ಯೆ

35000 ಅಡಿ: ಎತ್ತರಕ್ಕೆ ಹಾರುವ ಸಾಮರ್ಥ್ಯ

6 ಎಂಜಿನ್: ವಿಮಾನಕ್ಕಿರುವ ಜೆಟ್ ಎಂಜಿನ್ಗಳು

385 ಅಡಿ: ವಿಮಾನಕ್ಕೆ ಇರುವ ಅಗಲದ ರೆಕ್ಕೆಗಳು

580 ಟನ್: ವಿಮಾನದ ಒಟ್ಟು ಭಾರ

Follow Us:
Download App:
  • android
  • ios