ಬಾಲಿವುಡ್ ಮಿ. ಪರ್ಫೆಕ್ಟ್ ಎಂದೇ ಹೆಸರಾದ ಅಮೀರ್ ಖಾನ್ ಸಾಮಾಜಿಕವಾಗಿ ಜವಾಬ್ದಾರಿಯುತ ನಟ. ಸಿನಿಮಾ ಜೊತೆ ಜೊತೆಗೆ ಸಾಮಾಜಿಕ ಕಳಕಳಿ ಇರುವ ನಟ. ಮಾನಸಿಕ ಆರೋಗ್ಯದ ಬಗ್ಗೆ ಬಹಳ ಅರ್ಥಪೂರ್ಣವಾಗಿ ಇನ್ಸ್ಟಾಗ್ರಾಮ್ ಪೋಸ್ಟೊಂದನ್ನು ಹಾಕಿದ್ದಾರೆ. 

ಪ್ರಪೋಸ್ ರಿಜೆಕ್ಟ್: ಕಂಗನಾ ಅಕ್ಕ ಮೇಲೆ ಆ್ಯಸಿಡ್ ಅಟ್ಯಾಕ್

 

 
 
 
 
 
 
 
 
 
 
 
 
 

#worldmentalhealthweek2019

A post shared by Aamir Khan (@_aamirkhan) on Oct 2, 2019 at 8:08pm PDT

ಈ ವಾರ World Mental Health week ಆಗಿದ್ದು ಮಾನಸಿನ ಆರೋಗ್ಯದ ಬಗ್ಗೆ ಅರ್ಥಪೂರ್ಣವಾಗಿ ಬರೆದಿದ್ದಾರೆ. ದೈಹಿಕ ಆರೋಗ್ಯದಷ್ಟೇ ಮಾನಸಿನ ಆರೋಗ್ಯವೂ ಮುಖ್ಯ. ನೋವುಗಳನ್ನು, ಕಷ್ಟಗಳನ್ನು ಹೇಳಿಕೊಳ್ಳುವುದರಿಂದ ಸ್ಟ್ರೆಸ್ ರಿಲೀಫ್ ಆಗುತ್ತದೆ. ವ್ಯಾಯಾಮವೂ ಕೂಡಾ ಸ್ಟ್ರೆಸ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಡಿಪ್ರೆಶನ್ ಗೆ ಹೋಗಬೇಡಿ. ಮೊದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಿ’ ಎಂದು ಸಲಹೆ ನೀಡಿದ್ದಾರೆ. 

ಕೆಬಿಸಿಯಲ್ಲಿ ಕೋಟಿ ಗೆದ್ದ ಬಬಿತಾಗೆ ಮತ್ತೊಂದು ಬಂಪರ್ ಆಫರ್!

ಸದ್ಯ ಅಮೀರ್ ಖಾನ್ ಮುಂಬರುವ ಸಿನಿಮಾ ಲಾಲ್ ಸಿಂಗ್ ಚಡ್ಡಾ ಗೆ ತಯಾರಿ ನಡೆಸುತ್ತಿದ್ದಾರೆ.  ಬೆಬೋ ಕರೀನಾ ಅಮೀರ್ ಖಾನ್ ಗೆ ಸಾಥ್ ನೀಡಲಿದ್ದಾರೆ. ನವೆಂಬರ್ ಮೊದಲ ವಾರದಿಂದ ಪಂಜಾಬ್ ನಲ್ಲಿ ಶೂಟಿಂಗ್ ನಡೆಯಲಿದೆ. ಅಮೃತಸರ್, ಲೂಧಿಯಾನ, ಜಲಂಧರ್ ಸೇರಿದಂತೆ ಬೇರೆ ಬೇರೆ ಕಡೆ ಶೂಟಿಂಗ್ ನಡೆಯಲಿದೆ.  ಈ ಚಿತ್ರಕ್ಕಾಗಿ ಅಮೀರ್ ಖಾನ್ 20 ಕೆಜಿ ತೂಕ ಕಳೆದುಕೊಂಡಿದ್ದಾರೆ. ಅದ್ವೈತ್ ಚಂದನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು 2020 ಕ್ರಿಸ್ ಮಸ್ ಸಮಯಕ್ಕೆ ತೆರೆಗೆ ಬರಲಿದೆ.