Asianet Suvarna News Asianet Suvarna News

ಅನೈತಿಕ ಸಂಬಂಧ ಶಂಕೆ: ಮಹಿಳೆಗೆ ಬೆತ್ತಲೆಗೊಳಿಸಿ ಥಳಿತ

ಆದರೆ ಸಾವಿತ್ರಿ ಆರೋಪವನ್ನು ತಳ್ಳಿ ಹಾಕಿದ್ದಾಳೆ. ಬದಲಾಗಿ ನಮ್ಮ ಮಧ್ಯೆ ಹಣಕಾಸಿನ ವ್ಯವಹಾರವಿತ್ತು ಎಂದು ಹೇಳಿದ್ದಾಳೆ . ಸದ್ಯ ಸಾವಿತ್ರಿ ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Women Punishmet as Naked another women
  • Facebook
  • Twitter
  • Whatsapp

ವಿಜಯಪುರ(ಜು.04): ಹಣಕಾಸಿನ ವ್ಯವಹಾರ ಹಾಗೂ ಅನೈತಿಕ ಸಂಬಂಧದ ಶಂಕೆಯಿಂದ ಮಹಿಳೆಯೊಬ್ಬಳನ್ನು ಬೆತ್ತಲೆಗೊಳಿಸಿ ಥಳಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಜಿಲ್ಲೆಯ ಇಂಡಿ ತಾಲೂಕಿನ ಹಿರೇ ಮಸಳಿ ಗ್ರಾಮದ ಸಾವಿತ್ರಿ ದುಂಡಯ್ಯ ಗೋಡ್ಯಾಳ ಹಲ್ಲೆಗೊಳಗಾದ ಮಹಿಳೆ. ಈ ಮಹಿಳೆ ಮೌಲಾಲಿ ಎಂಬ ವ್ಯಕ್ತಿಯ ಜೊತೆ ನಿಂತಿದ್ದಾಗ ಮೌಲಾಲಿಯ ಪತ್ನಿ ಸುಗರಾ ಹಾಗೂ ಸುಗರಾಳ ಸಹೋದರ ಸಿಕಂದರ್ ಸೇರಿ ಹಲ್ಲೆ ನಡೆಸಿದ್ದಾರೆ. ಮೌಲಾಲಿ ಜೊತೆ ಸಾವಿತ್ರಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಲಾಗಿದೆ. ಆದರೆ ಸಾವಿತ್ರಿ ಆರೋಪವನ್ನು ತಳ್ಳಿ ಹಾಕಿದ್ದಾಳೆ. ಬದಲಾಗಿ ನಮ್ಮ ಮಧ್ಯೆ ಹಣಕಾಸಿನ ವ್ಯವಹಾರವಿತ್ತು ಎಂದು ಹೇಳಿದ್ದಾಳೆ . ಸದ್ಯ ಸಾವಿತ್ರಿ ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇಂಡಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು 9 ಮಂದಿ ವಿರುದ್ಧ ಎಫ್ಐ'ಆರ್ ದಾಖಲಿಸಲಾಗಿದೆ.

Follow Us:
Download App:
  • android
  • ios