ವಾಹನಗಳ ಚಾಲನೆ ಅವಕಾಶಕ್ಕೆ ಆಗ್ರಹಿಸಿ ಸುಮಾರು 3 ದಶಕಗಳಿಂದ ಹೋರಾಟ ಮಾಡಿದ ಸೌದಿ ಅರೇಬಿಯಾದ ಮಹಿಳೆಯರಿಗೆ ಕೊನೆಗೂ ಜಯ ಸಿಕ್ಕಿದೆ. ರಾಷ್ಟ್ರದಲ್ಲಿ ಮಹಿಳೆಯರು ಸಹ ಕಾರು ಚಾಲನೆಗೆ ಅವಕಾಶ ನೀಡುವ ಅಚ್ಚರಿ ಮತ್ತು ಮಹತ್ವದ ನಿರ್ಧಾರವನ್ನು ಅಲ್ಲಿನ ರಾಜಮನೆತನ ತೆಗೆದುಕೊಂಡಿದೆ.
ರಿಯಾದ್: ವಾಹನಗಳ ಚಾಲನೆ ಅವಕಾಶಕ್ಕೆ ಆಗ್ರಹಿಸಿ ಸುಮಾರು 3 ದಶಕಗಳಿಂದ ಹೋರಾಟ ಮಾಡಿದ ಸೌದಿ ಅರೇಬಿಯಾದ ಮಹಿಳೆಯರಿಗೆ ಕೊನೆಗೂ ಜಯ ಸಿಕ್ಕಿದೆ.
ರಾಷ್ಟ್ರದಲ್ಲಿ ಮಹಿಳೆಯರು ಸಹ ಕಾರು ಚಾಲನೆಗೆ ಅವಕಾಶ ನೀಡುವ ಅಚ್ಚರಿ ಮತ್ತು ಮಹತ್ವದ ನಿರ್ಧಾರವನ್ನು ಅಲ್ಲಿನ ರಾಜಮನೆತನ ತೆಗೆದುಕೊಂಡಿದೆ.
ವಿಶ್ವದಲ್ಲೇ ಮಹಿಳೆಯರಿಗೆ ವಾಹನಗಳ ಚಾಲನೆಗೆ ನಿಷೇಧ ಹೇರಿದ ಏಕೈಕ ರಾಷ್ಟ್ರ ಎಂಬ ಹಣೆಪಟ್ಟಿಯನ್ನು ಸೌದಿ ಅರೇಬಿಯಾ ಕಟ್ಟಿಕೊಂಡಿತ್ತು. ಆದರೆ, ಮುಂದಿನ ಬೇಸಿಗೆ ಹೊತ್ತಿಗೆ ಜಾರಿಗೆ ಬರುವಂತೆ ಮಹಿಳೆಯರ ವಾಹನ ಚಾಲನೆಗೂ ಅವಕಾಶ ನೀಡುವ ಶಾಸನ ರಾಜಮನೆತನ ಸಿದ್ಧಪಡಿಸಿದೆ.
